ಚಿಕ್ಕಮಗಳೂರು, ಜ 19 : 2016 ರಲ್ಲಿ 18 ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.
ಶೃಂಗೇರಿ ತಾಲ್ಲೂಕಿನ ವೈಕುಂಠಪುರದ ಪ್ರದೀಪ್ ಎಂ (32) ಮತ್ತು ಸಂತೋಷ್ (24) ಫೆಬ್ರವರಿ 16, 2016 ರಂದು ಕಾಲೇಜಿನಿಂದ ಮನೆಗೆ ಹಿಂದಿರುಗುತ್ತಿದ್ದ 18 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದರು.
ನಂತರ ಆಕೆಯನ್ನು ಬಾವಿಗೆ ಎಸೆದು ಹೋಗಿದ್ದರು. ಆಕೆಯ ತಂದೆ ಈ ಬಗ್ಗೆ ಶೃಂಗೇರಿ ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸ್ ಇನ್ಸ್ಪೆಕ್ಟರ್ ಸುಧೀರ್ ಎಂ ಹೆಗ್ಡೆ ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಿದ್ದರು.
ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಉಮೇಶ್ ಎಂ. ಅಡಿಗ ಜ 18 ರಂದು ಶನಿವಾರ ಆರೋಪಿಗಳನ್ನು ಶಿಕ್ಷೆಗೊಳಪಡಿಸಿದರು. ನ್ಯಾಯಾಧೀಶರು ಇಬ್ಬರಿಗೂ ಮರಣದಂಡನೆ ಶಿಕ್ಷೆ ವಿಧಿಸಿದರಲ್ಲದೆ, ತಲಾ 25 ಸಾವಿರ ರೂ.ದಂಡವನ್ನೂ ವಿಧಿಸಿದ್ದಾರೆ.