ಜಮಖಂಡಿ 21: ಮುಧೋಳದಲ್ಲಿ ಫೆ 22 ರಿಂದ 24 ರ ವರಗೆ ಮೂರು ದಿನಗಳ ಕಾಲ ಜರಗುವ ರನ್ನ ವೈಭವ ಹಿನ್ನೆಲೆಯಲ್ಲಿ ಜಿಲ್ಲಾಧ್ಯಂತ ಸಂಚರಿಸುತ್ತಿರುವ ರನ್ನ ರಥಯಾತ್ರೆಗೆ ವಿವಿಧೆಡೆ ದೊರೆಯುತ್ತಿದೆ.
ರನ್ನ ರಥ ಯಾತ್ರೆಯನ್ನು ತಾಲೂಕಿನ ಕೊಣ್ಣೂರು, ಹುಲ್ಯಾಳ ಗ್ರಾಮದಲ್ಲಿ ಶಾಲಾ ಮಕ್ಕಳು ವಿವಿಧ ಕವಿಗಳ, ವಚನಕಾರರ ವೇಶಭೂಷಣಗಳನ್ನು ಧರಿಸಿ ಸ್ವಾಗತ ಕೋರಿದರು.
ತಹಸಿಲ್ದಾರ ಸದಾಶಿವ ಮಕ್ಕೋಜಿ ಮಾತನಾಡಿ, ರನ್ನ ರಥಯಾತ್ರೆಯು ನಮ್ಮ ತಾಲೂಕಿಗೆ ಆಗಮಿಸಿದ್ದು. ಅದ್ದೂರಿಯಾಗಿ ಜರುಗುವ ರನ್ನ ವೈಭವ ಕಾರ್ಯಕ್ರಮಕ್ಕೆ ವಿವಿಧ ಜಿಲ್ಲೆಯಿಂದ ಸಾಹಿತಿಗಳು, ಚಿಂತಕರು, ವಚಕಾರರು, ಜಾನಪದ ಕಲಾವಿದರು, ನೃತ್ಯಗಾರರು, ಗಾಯಕರು ಹೀಗೆ ಹಲವಾರು ಕ್ಷೇತ್ರದಲ್ಲಿ ಸೇವೆ ಸಲಿಸುವ ಮಹನೀಯರು ಈ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಹಿನ್ನಲೆಯಲ್ಲಿ ಜಿಲ್ಲೆಯ ತುಂಬ ರನ್ನ ರಥಯಾತ್ರೆಯು ಸಂಚರಿಸುತ್ತಿದೆ. ಅದಕ್ಕಾಗಿ ಅದನ್ನು ಸ್ವಾಗತಿಸಿ, ಗೌರವಪೂರ್ವಕವಾಗಿ ಪೂಜೆಯನ್ನು ಸಲಿಸಲಾಗುವದು. ರನ್ನ ರಥಯಾತ್ರೆಯನ್ನು ಸ್ವಾಗತಿಸಲು ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಶಾಲಾ ಮಕ್ಕಳು, ತಾ,ಪಂ,ಗ್ರಾಪಂ, ಅಧ್ಯಕ್ಷರು ಹಾಗೂ ಸದಸ್ಯರುಗಳು ಸಾಹಿತಿಗಳು ಸಹ ಭಾಗವಿಸಿದ್ದಾರೆ ಎಂದರು.
ಇದೇ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎ,ಕೆ, ಬಸಣ್ಣವರ, ಸಿಡಿಪಿಒ ಶರಣಬಸವ ಮ್ಯಾಗೇರಿ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಗಳು, ಪೋಲಿಸ್ ಇಲಾಖೆ ಸೇರಿದಂತೆ ಅನೇಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಶಾಲಾ ಶಿಕ್ಷಕರುಗಳು, ಮಹಿಳಾ ಸಂಘ, ವಿವಿಧ ಸಂಘಟನೆಯ ಅಧ್ಯಕ್ಷರು,ಉಪಾಧ್ಯಕ್ಷರು, ಸದಸ್ಯರುಗಳು ಸೇರಿದಂತೆ ಗ್ರಾಮಸ್ಥರು ಇದ್ದರು. ಬೆಳಗ್ಗೆ ನಗರದ ಎ,ಜಿ,ದೇಸಾಯಿ ವೃತ್ತದಲ್ಲಿ ಪೂಜೆಯನ್ನು ಸಲಿಸಿ, ಹುನ್ನೂರ ಗ್ರಾಮದವರಗೆ ಪಾದಯಾತ್ರೆಯ ಮೂಲಕ ಸಂಚರಿಸಿ, ರಬಕವಿ, ಬನಹಟ್ಟಿ ತಾಲೂಕಿಗೆ ಕಳುಹಿಸಲಾಯಿತು.