ರನ್ನ ಬೆಳಗಲಿ 27: "ರನ್ನ ಬೆಳಗಲಿ" ಅಂತಾ ಸರ್ಕಾರದ ಗೆಜೆಟ್ ನಲ್ಲಿ ನಮೂದಿಸಿ ಆದೇಶ ಹೊರಡಿಸಬೇಕೆಂದು ಆರ್ ಬಿ ತಿಮ್ಮಾಪುರ ಅಬಕಾರಿ ಸಚಿವರು ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಪತ್ರವನ್ನು ನೀಡಲಾಯಿತು.
ಕವಿ ಚಕ್ರವರ್ತಿ ರನ್ನನ ಹುಟ್ಟೂರಾದ ರನ್ನ ಬೆಳಗಲಿಯ ಕವಿ ಚಕ್ರವರ್ತಿ ರನ್ನ ವೇದಿಕೆಯಲ್ಲಿ ಜರುಗಿದ ಉತ್ಸವದ ಉದ್ಘಾಟನೆ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಆಗಮಿಸಿದ ಎಚ್ ಕೆ ಪಾಟೀಲ ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವರು ಕರ್ನಾಟಕ ಸರ್ಕಾರ ಮತ್ತು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕರ್ನಾಟಕ ಸರ್ಕಾರ ಈ ಇರ್ವ ಮಹನೀಯರಿಗೆ ಮನವಿ ಸಲ್ಲಿಸಲಾಯಿತು.
ನಮ್ಮೂರಿನ ಎಲ್ಲಾ ಹಿರಿಯರ ಸಹಯೋಗದಲ್ಲಿ ಮತ್ತು ಯುವಕರ ಸಹಕಾರದಡಿಯಲ್ಲಿ ರನ್ನ ವೈಭವದ ಆಚರಣೆ ಹೋರಾಟದ ಫಲವಾಗಿ ದೊರೆತಿದೆ, ಅದರಂತೆ ಬೆಳಗಲಿಯನ್ನ ರನ್ನ ಬೆಳಗಲಿ ಎಂದು ಮರು ನಾಮಕರಣಕ್ಕೆ ಹೋರಾಟ ಪ್ರಾರಂಭಗೊಂಡಿದೆ.