ರಣಜಿ ಟ್ರೋಫಿ: ಹಳಿ ತಪ್ಪಿದ್ದ ರೈಲ್ವೇಸ್‌ಗೆ ಅರಿಂದಮ್, ಅವಿನಾಶ್ ಆಸರೆ

ನವದೆಹಲಿ, ಜ 28 :      ನಾಯಕ ಅರಿಂದಮ್ ಘೋಷ್ (ಔಟಾಗದೆ 50 ರನ್) ಹಾಗೂ ಅವಿನಾಶ್ ಯಾದವ್ (62 ರನ್) ಅವರ ಅರ್ಧಶತಕಗಳ ಬಲದಿಂದ ರೈಲ್ವೇಸ್ ತಂಡ ಕರ್ನಾಟಕಕ್ಕೆೆ ಎರಡನೇ ದಿನ ತಿರುಗೇಟು ನೀಡಿತು.

ಸೋಮವಾರ ರಾತ್ರಿಯೀಡಿ ಸುರಿದ ಮಳೆಯಿಂದಾಗಿ ಇಲ್ಲಿನ ಕರ್ನೈನ್ ಅಂಗಳ ತೇವವಾಗಿದ್ದರಿಂದ ಕರ್ನಾಟಕ ಹಾಗೂ ರೈಲ್ವೇಸ್ ತಂಡಗಳ ನಡುವಿನ 2019/20ನೇ ಸಾಲಿನ ಎಲೈಟ್ ಎ ಮತ್ತು ಬಿ ಗುಂಪಿನ ಪಂದ್ಯ ಮಂಗಳವಾರ ಎರಡನೇ ದಿನ ತಡವಾಗಿ ಆರಂಭವಾಯಿತು. ಎರಡನೇ ದಿನದಾಟದಲ್ಲಿ ಕೇವಲ 23 ಓವರ್‌ಗಳು ಮಾತ್ರ ಬೌಲಿಂಗ್ ಮಾಡಲು ಸಾಧ್ಯವಾಯಿತು. ಒಟ್ಟಾರೆ, ರೈಲ್ವೇಸ್ ತಂಡ 72 ಓವರ್‌ಗಳಿಗೆ ಏಳು ವಿಕೆಟ್ ನಷ್ಟಕ್ಕೆೆ 160 ರನ್ ಗಳಿಸಿದೆ.

ಪೆವಿಲಿಯನ್‌ನಲ್ಲಿ ಹೆಚ್ಚು ಸಮಯ ಕಳೆದ ಬಳಿಕ ಕ್ರೀಸ್‌ಗೆ ಆಗಮಿಸಿದ ನಾಯಕ ಅರಿಂದಮ್ ಘೋಷ್ ಹಾಗೂ ಅವಿನಾಶ್ ಯಾದವ್ ಅತ್ಯುತ್ತಮ ಬ್ಯಾಟಿಂಗ್ ಮಾಡಿದರು. 

ಮೊದಲನೇ ದಿನ ರೈಲ್ವೇಸ್ ಅಗ್ರ ಬ್ಯಾಟ್ಸ್‌‌ಮನ್‌ಗಳನ್ನು ಹಳಿ ತಪ್ಪಿಸಿದ್ದ ಕರ್ನಾಟಕ ಬೌಲರ್‌ಗಳನ್ನು ಎರಡನೇ ದಿನ ಈ ಜೋಡಿ ಸಮರ್ಥವಾಗಿ ಎದುರಿಸಿತು.  ಈ ಜೋಡಿ ಮುರಿಯದ ಏಳನೇ ವಿಕೆಟ್‌ಗೆ 97 ರನ್ ಗಳಿಸಿ ಆರಂಭಿಕ ಸಂಕಷ್ಟದಿಂದ ಪಾರು ಮಾಡಿತು. 

ಮಧ್ಯಮ ಕ್ರಮಾಂಕದಲ್ಲಿ ತಾಳ್ಮೆೆಯಿಂದ ಇನಿಂಗ್ಸ್‌ ಕಟ್ಟುತಿದ್ದ  ನಾಯಕ ಅರಿಂದಮ್ ಘೋಷ್ ಗೆ ಮತ್ತೊಂದು ತುದಿಯಲ್ಲಿ ಹೆಗಲು ನೀಡಿದ ಅವಿನಾಶ್ ಯಾದವ್ ಅತ್ಯುತ್ತಮ ಬ್ಯಾಟಿಂಗ್ ಮಾಡಿದರು. ಸಮಯಕ್ಕೆೆ ತಕ್ಕಂತೆ ಬ್ಯಾಟಿಂಗ್ ಮಾಡಿದ ಅವಿನಾಶ್, ಕರ್ನಾಟಕ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದರು. ಯಾವುದೇ ತಪ್ಪುು ಹೊಡೆತಗಳಿಗೆ ಕೈ ಹಾಕದೆ ಬ್ಯಾಟ್ ಬೀಸಿದರು. ಎದುರಿಸಿದ 143 ಎಸೆತಗಳಲ್ಲಿ 10 ಬೌಂಡರಿಗಳೊಂದಿಗೆ 62 ರನ್ ಗಳಿಸಿದರು. ಅತ್ಯುತ್ತಮ ಬ್ಯಾಟಿಂಗ್ ಮಾಡುತ್ತಿದ್ದ ಇವರನ್ನು ರೋನಿತ್ ಮೋರೆ ಔಟ್ ಮಾಡಿದರು.

ಮತ್ತೊಂದು  ತುದಿಯಲ್ಲಿ ತಂಡದ ಜವಾಬ್ದಾರಿ ಹೊತ್ತುಕೊಂಡಿರುವ ನಾಯಕ ಅರಿಂದಮ್ ಘೋಷ್ ಕೂಡ ತಾಳ್ಮೆಯ ಇನಿಂಗ್ಸ್‌ ಕಟ್ಟಿದರು. ಮೊದಲನೇ ದಿನದಲ್ಲಿಯೇ ಕ್ರೀಸ್‌ಗೆ ಆಗಮಿಸಿದ್ದ ಅವರು ಒಂದು ತುದಿಯಲ್ಲಿ ಭದ್ರಕೋಟೆಯಂತೆ ನಿಂತು ರೈಲ್ವೇಸ್ ತಂಡವನ್ನು ಹಳಿ ತಪ್ಪದಂತೆ ಕಾಪಾಡಿದರು. ಒಂದು ಹಂತದಲ್ಲಿ 45 ರನ್‌ಗಳಿಗೆ ಆರು ವಿಕೆಟ್ ಕಳೆದುಕೊಂಡಿದ್ದ ರೈಲ್ವೇಸ್ ತಂಡವನ್ನು ಕಾವಲುಗಾರನಂತೆ ನಿಂತು ನೋಡಿಕೊಂಡರು.

155 ಎಸೆತಗಳಲ್ಲಿ ಏಳು ಬೌಂಡರಿಯೊಂದಿಗೆ 50 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಮತ್ತೊಂದು ತುದಿಯಲ್ಲಿ ಅಮಿತ್ ಮಿಶ್ರಾ (10) ಇದ್ದಾರೆ.

ಮೊದಲನೇ ದಿನ ಪಾರಮ್ಯ ಮೆರೆದಿದ್ದ ಕರ್ನಾಟಕ ಬೌಲರ್‌ಗಳು ಎರಡನೇ ದಿನ ಮಂಕಾದರು. ಕೇವಲ ಒಂದೇ-ಒಂದು ವಿಕೆಟ್‌ಗೆ ಸೀಮಿತರಾದರು. ಆರಂಭಿಕ ದಿನ ಮಿಂಚಿದ್ದ ಪ್ರತೀಕ್ ಜೈನ್ ಹಾಗೂ ಅಭಿಮನ್ಯು ಮಿಥುನ್ ಮಂಗಳವಾರ ವಿಕೆಟ್ ಪಡೆಯಲು ಸಾಕಷ್ಟು ಪ್ರಯತ್ನ ನಡೆಸಿದರು. ಆದರೆ, ಪ್ರಯೋಜನವಾಗಲಿಲ್ಲ. 

 ಸಂಕ್ಷಿಪ್ತ ಸ್ಕೋರ್

ರೈಲ್ವೇಸ್

ಪ್ರಥಮ ಇನಿಂಗ್ಸ್‌: 72 ಓವರ್‌ಗಳಿಗೆ 160/7 (ಅವಿನಾಶ್ ಯಾದವ್ 62, ಅರಿಂದಮ್ ಘೋಷ್ ಔಟಾಗದೆ 50 ರನ್; ರೋನಿತ್ ಮೋರೆ 29 ಕ್ಕೆೆ 1, ಪ್ರತೀಕ್ ಜೈನ್ 29 ಕ್ಕೆೆ 4, ಅಭಿಮನ್ಯು ಮಿಥುನ್ 38 ಕ್ಕೆೆ 2)