ರಣಜಿ: ಆಕಾಶ್ ಗೆ ಏಳು, ತಮಿಳುನಾಡಿಗೆ ಸೋಲು

 ಚೆನ್ನೈ, ಡಿ.19 :    ಎಡಗೈ ಸ್ಪಿನ್ ಬೌಲರ್ ಆಕಾಶ್ ವಶಿಷ್ಠ ಅವರ ಮಾರಕ ದಾಳಿಯ ನೆರವಿನಿಂದ ಹಿಮಾಚಲ ಪ್ರದೇಶ ರಣಜಿ ಕ್ರಿಕೆಟ್ ಟೂರ್ನಿಯ ಎಲೈಟ್ ಬಿ ಗುಂಪಿನ ಪಂದ್ಯದಲ್ಲಿ 71 ರನ್ ಗಳಿಂದ ತಮಿಳುನಾಡು ತಂಡವನ್ನು ಮಣಿಸಿತು.   ಎರಡನೇ ಇನ್ನಿಂಗ್ಸ್ ನಲ್ಲಿ ಮೊನಚಾದ ದಾಳಿ ನಡೆಸಿದ ಆಕಾಶ್ 19.5 ಓವರ್ ಬೌಲಿಂಗ್ ನಡೆಸಿ 33 ರನ್ ನೀಡಿ 7 ವಿಕೆಟ್ ಕಬಳಿಸಿದರು. ಮೊದಲ ಇನ್ನಿಂಗ್ಸ್ ನಲ್ಲೂ ಇವರು 2 ವಿಕೆಟ್ ಬೀಳಿಸಿದ್ದರು. ಪರಿಣಾಮ ಇವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಲಾಯಿತು. ಮೊದಲ ಇನ್ನಿಂಗ್ಸ್ ನಲ್ಲಿ ಹಿಮಾಚಲ ಪ್ರದೇಶ 150 ರನ್ ಗಳಿಗೆ ಆಲೌಟ್ ಆದರೆ, ತಮಿಳು ನಾಡು 96 ರನ್ ಸೇರಿಸಿ ಸರ್ವಪತನ ಕಂಡಿತು. ಎರಡನೇ ಇನ್ನಿಂಗ್ಸ್ ನಲ್ಲೂ ಹಿಮಾಚಲ ತಂಡ 154 ರನ್ ಸೇರಿಸಿತು. ಸ್ಪರ್ಧಾತ್ಮಕ ಗುರಿಯನ್ನು ಹಿಂಬಾಲಿಸಿದ ತಮಿಳುನಾಡು 145 ರನ್ ಗಳಿಗೆ ಆಲೌಟ್ ಆಯಿತು.   ಎರಡನೇ ಇನ್ನಿಂಗ್ಸ್ ನಲ್ಲಿ ತಮಿಳುನಾಡು ಪರ ಕರುಣಾಕರಂ ಎಂ (48), ಗಂಗಾ ಶ್ರೀಧರ್ ರಾಜು (21), ಬಾಬಾ ಅಪರಜೀತ್ (43) ರನ್ ಬಾರಿಸಿದ್ದು ಬಿಟ್ಟರೆ ಉಳಿದ ಬ್ಯಾಟ್ಸ್ ಮನ್ ಗಳು ರನ್ ವೈಫಲ್ಯ ಅನುಭವಿಸಿದರು.