ರಂಜನಾ ಅವರಿಗೆ ಪಿಎಚ್‌ಡಿ ಪದವಿ ಪ್ರದಾನ
ಸಿಂದಗಿ 10: “ಎ ಸ್ಟ್‌ಡಿ ಆನ್ ಟೊಪೋಲಾಜಿಕಲ್ ಇಂಡಸಿಸ್ ಓವರ್ ಗ್ರಾಫ್ಸ್” ಕುರಿತು ಸಲ್ಲಿಸಿದ್ದ ಮಹಾಪ್ರಬಂಧಕ್ಕೆ ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯದಲ್ಲಿ ಜರುಗಿದ ಘಟಿಕೋತ್ಸವದಲ್ಲಿ ಸಿಂದಗಿಯ ಜಿ.ಪಿ.ಪೋರವಾಲ್ ಕಲಾ, ವಾಣಿಜ್ಯ ಹಾಗೂ ವ್ಹಿ.ವ್ಹಿ.ಸಾಲಿಮಠ ವಿಜ್ಞಾನ ಪದವಿ ಮಹಾವಿದ್ಯಾಲಯದ ಗಣಿತಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ರಂಜನಾ ಮಹಾದೇವ ಸಂಕಪಾಲ್ ಅವರಿಗೆ ಪಿಎಚ್‌ಡಿ ಪದವಿ ಪ್ರದಾನ ಮಾಡಿದೆ. ರಂಜನಾ ಮಹಾದೇವ ಸಂಕಪಾಲ್ ಅವರು ರಾಣಿಚೆನ್ನಮ್ಮ ವಿಶ್ವವಿದ್ಯಾಲಯದ ಗಣಿತಶಾಸ್ತ್ರ ಅಧ್ಯಯನ ವಿಭಾಗದ ವಿಶ್ವನಾಥ ಅವಟಿ ಮಾರ್ಗದರ್ಶನದಲ್ಲಿ ಅವರ ಸಂಶೋಧನೆ ಕೈಗೊಂಡಿದ್ದರು.