ದೇಶ ಪ್ರೇಮ, ಸ್ವಾತಂತ್ರ್ಯ ಪ್ರೀಯತೆಯ ಧೃವತಾರೆ ರಾಣಿ ಚನ್ನಮ್ಮ: ಭಾವಿಕಟ್ಟಿ

ಕೊಪ್ಪಳ 23: ದೇಶ ಪ್ರೇಮ, ದೇಶಾಭಿಮಾನ ಹಾಗೂ ಸ್ವಾತಂತ್ರ್ಯಪ್ರೀಯದ ಧೃವತಾರೆ ವೀರರಾಣಿ ಕಿತ್ತೂರು ಚೆನ್ನಮ್ಮ ಬಾಗಲಕೋಟ ಜಿಲ್ಲೆಯ ಹುನಗುಂದ ವಿ.ಎಂ. ಕಾಲೇಜಿನ ಉಪನ್ಯಾಸಕರಾದ ಡಾ. ನಾಗರತ್ನ ಅಶೋಕ ಭಾವಿಕಟ್ಟಿ ಅವರು ಹೇಳಿದರು

                ಕೊಪ್ಪಳ ಜಿಲ್ಲಾಡಳಿತದ ವತಿಯಿಂದ ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತಿ ಆಚರಣೆ ಕುರಿತು ನಗರದ ಸಾಹಿತ್ಯ ಭವನದಲ್ಲಿ ಮಂಗಳವಾರದಂದು ಆಯೋಜಿಸಲಾದ ಕಾರ್ಯಕ್ರಮದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮರವರ ಕುರಿತು ವಿಶೇಷ ಉಪನ್ಯಾಸಕರಾಗಿ ಆಗಮೀಸಿ ಅವರು ಮಾತನಾಡಿದರು.       

                ದೇಶಕ್ಕೆ ಅನೇಕ ಮಹಾನ ವ್ಯಕ್ತಿಗಳನ್ನು ನೀಡಿದ ಕನರ್ಾಟಕ ರಾಜ್ಯವು ಕೇವಲ ವೀರಪುತ್ರರಿಗೆ ಜನ್ಮ ನೀಡದೇ ವೀರ ಪುತ್ರಿಯರಿಗೂ ಜನ್ಮ ನೀಡಿದೆ ಎಂಬುವುದಕ್ಕೆ ಸಾಕ್ಷೀ ವೀರರಾಣಿ ಕಿತ್ತೂರು ಚೆನ್ನಮ್ಮಈಗಿನ ಬೆಳಗಾವಿಯ ಜಿಲ್ಲೆಯ ಕಾಕತಿಯ ಜಹಗೀರ ಸಂಸ್ಥಾನದ ದೂಳಪ್ಪ ದೇಸಾಯಿಯವರಿಗೆ 1778ರಲ್ಲಿ ಕಿತ್ತೂರು ಚೆನ್ನಮ್ಮ ಜನಿಸಿದರುಚೆನ್ನಮ್ಮರ ಪೊಷಕರು ತಮಗೆ ಗಂಡು ಮಗು ಹುಟ್ಟಲಿಲ್ಲ ಎಂದು ಬೇಸರಗೊಳ್ಳದೇ ಚೆನ್ನಮ್ಮಳನ್ನೆ ಗಂಡು ಮಗುವಿನ ರೀತಿಯಲ್ಲಿ ಪಾಲನೆ ಮಾಡಿದರುಚನ್ನಮ್ಮ ಎಳೆ ವಯಸ್ಸಿನಲ್ಲಿಯೇ ರಾಮಾಯಣ, ಮಹಾಭಾರತ ವಿದ್ಯಾಭ್ಯಾಸದ ಜೋತೆಗೆ ಕುದುರೆ ಸವಾರಿ, ಬಿಲ್ಲುವಿದ್ಯೆಗಳನ್ನು ಕಲಿತರುಪೌರಷ್ಯದ ಗುಣಗಳನ್ನು ಬೆಳೆಸಿಕೊಂಡರು.  12ನೇ ಶತಮಾನದ ಕಲ್ಯಾಣ ಕ್ರಾಂತಿ ಸಂದರ್ಭದಲ್ಲಾದ ಹೋರಾಟವು ಬಾಲಕಿ ಚೆನ್ನಮ್ಮರ ಮೇಲೆ ಹೆಚ್ಚಿನ ಪ್ರಭಾವ ಭೀರಿದವುಕಿತ್ತೂರಿನ ದೇಸಾಯಿಗಳಲ್ಲಿ ಪ್ರಸಿದ್ಧನಾದ ಮಲ್ಲಸರ್ಜನ ಎಂಬ ದೊರೆಯ ಕಿರಿಯ ಹೆಂಡತಿಯಾದರು ಚೆನ್ನಮ್ಮ.  1824 ಅಕ್ಟೋಬರ್. 23 ರಂದು ತನ್ನ ಪುಟ್ಟ ರಾಜ್ಯದ ಸ್ವಾತಂತ್ರ ರಕ್ಷಣೆಗಾಗಿ ಬ್ರಿಟಿಷರ ದೊಡ್ಡ ಸೈನ್ಯದ ವಿರುದ್ಧ ಹೋರಾಡಿ, ಥ್ಯಂಕ್ರೆ ಎಂಬ ಬ್ರಿಟೀಷರ ಅಧಿಕಾರಿಯನ್ನು ಕೊಂದು ಚೆನ್ನಮ್ಮ ಸೈನ್ಯವು ಬ್ರಿಟೀಷರ ವಿರುದ್ಧ ವಿಜಯ ಸಾಧಿಸಿತುಚೆನ್ನಮ್ಮ ಅವರು 1778 ನವೆಂಬರ್. 14 ರಂದು ಜನಿಸಿದ್ದಾರೆ ಎಂದು ತಿಳಿದುವರುತ್ತದೆಆದರೆ . 23 ವಿಜಯೋತ್ಸವ ದಿನವಾಗಿದೆ

                ದಿನದಂದು ರಾಜ್ಯ ಸಕರ್ಾರವು ವೀರರಾಣಿ ಕಿತ್ತೂರು ಚೆನ್ನಮ್ಮ ಜಯಂತಿಯನ್ನು ಸಕರ್ಾರಿ ಕಾರ್ಯಕ್ರಮವನ್ನಾಗಿ ಆಚರಿಸುತ್ತಿರುವುದು ಸ್ವಾಗತಾರ್ಹ.  1857 ರಲ್ಲಿ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಬ್ರಿಟೀಷರ ವಿರುದ್ಧ ಹೋರಾಡಿದ್ದು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ದೇಶದ ಪ್ರಥಮ ಮಹಿಳೆ ಎಂದು ಝಾನ್ಸಿ ರಾಣಿ ಲಕ್ಷ್ಮೀಬಾಯಿಗೆ ಕರೆಯಲಾಗುತ್ತದೆಆದರೆ ವೀರರಾಣಿ ಕಿತ್ತೂರು ಚೆನ್ನಮ್ಮ 1824 ರಲ್ಲೇ ಬ್ರಿಟೀಷರ ವಿರುದ್ಧ ಹೋರಾಟ ನಡೆಸಿದ್ದು, ಚೆನ್ನಮ್ಮರವರಿಗೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ದೇಶದ ಪ್ರಥಮ ಮಹಿಳೆ ಎನ್ನಬೇಕುಬ್ರಿಟೀಷರನ್ನು ನೆಲಕ್ಕುರುಳಿಸಬೇಕು ಎಂಬ ಪಣತೊಟ್ಟ ಚೆನ್ನಮ್ಮರವರ ಜಯಂತಿಯನ್ನು ರಾಷ್ಟ್ರಾದ್ಯಂತ ಒಂದು ರಾಷ್ಟ್ರೀಯ ಹಬ್ಬವನ್ನಾಗಿ ಆಚರಣೆ ಮಾಡಬೇಕಾಗಿದೆಅಲ್ಲದೇ ಚೆನ್ನಮ್ಮರ ಮರಣದ ನಂತರ ಕಿತ್ತೂರಿನ ಸಂಸ್ಥಾನದ ಯುದ್ಧ ಖಡ್ಗ ಹೀಗೆ ಅನೇಕ ಸಾಮಾಗ್ರಿಗಳನ್ನು ಬ್ರಿಟೀಷರು ಕೊಂಡೊಯ್ದಿದ್ದು, ಅವುಗಳನ್ನು ನಮ್ಮ ದೇಶಕ್ಕೆ ತರುವಂತಹ ಕಾರ್ಯವಾಗಬೇಕುಕಿತ್ತೂರು ಸಂಸ್ಥಾನವನ್ನು ಪ್ರವಾಸಿ ತಾಣವಾಗಿಸಬೇಕು ಎಂದು ಬಾಗಲಕೋಟ ಜಿಲ್ಲೆಯ ಹುನಗುಂದ ವಿ.ಎಂ. ಕಾಲೇಜಿನ ಉಪನ್ಯಾಸಕರಾದ ಡಾ. ನಾಗರತ್ನ ಅಶೋಕ ಭಾವಿಕಟ್ಟಿ ಅವರು ಹೇಳಿದರು

                ಕೊಪ್ಪಳ ಅಪರ ಜಿಲ್ಲಾಧಿಕಾರಿ ಸಿ.ಡಿ. ಗೀತಾ ಅವರು ಕಾರ್ಯಕ್ರಮ ಉದ್ಘಾಟಿಸಿದರುಸಂಸದ ಸಂಗಣ್ಣ ಕರಡಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರುತಹಶೀಲ್ದಾರ ಜೆ.ಬಿ ಮಜ್ಗಿ, ಮುಖಂಡರಾದ ಬಸವಲಿಂಗಪ್ಪ ಭೂತೆ, ಕರಿಯಪ್ಪ ಮೇಟಿ, ವೀರಣ್ಣ ಭಂಗಿ, ಪಂಪಣ್ಣ, ಫಕೀರಗೌಡ ಗೊಂಡಬಾಳ, ನೀಲಮ್ಮ ಕರಡಿ, ಕಿಶೋರಿ ಬೂದನೂರ್, ಶಿಲಾ ಹಲಗೇರಿ, ನಾಗರತ್ನ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರುಕಾರ್ಯಕ್ರಮದ ಅಂಗವಾಗಿ ವೀರರಾಣಿ ಕಿತ್ತೂರು ಚೆನ್ನಮ್ಮರವರ ಭಾವಚಿತ್ರದ ಮೇರವಣಿಗೆಯು ನಗರದ ವೀರರಾಣಿ ಕಿತ್ತೂರು ಚೆನ್ನಮ್ಮ ವೃತ್ತದಿಂದ ಪ್ರಾರಂಭಗೊಂಡು, ಆಜಾದ ವೃತ್ತದ ಮಾರ್ಗವಾಗಿ ಜವಾಹರ ರಸ್ತೆಯ ಮೂಲಕ ಸಾಹಿತ್ಯ ಭವನದ ವರೆಗೆ ಸಾಗಿ ಬಂದಿತು. ಮೇರವಣಿಗೆ ಪ್ರಾರಂಭದಲ್ಲಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ಸಂಸದ ಕರಡಿ ಸಂಗಣ್ಣ, ತಹಶೀಲ್ದಾರ ಜೆ.ಬಿ ಮಜ್ಗಿ ಮತ್ತಿತರರಿದ್ದರುಅನೇಕ ಕಲಾ ತಂಡಗಳ ಭಾಗವಹಿಸಿ ಮೇರವಣಿಗೆಯನ್ನು ಆಕರ್ಷಕಗೊಳಿಸಿದವು.