ದಿ. 12 ರಂದು ಬೃಹತ್ ಹಲಗೆ ಹಬ್ಬ ಮತ್ತು 14 ರಂದು ರಂಗೋತ್ಸವ

Rangotsava on the 14th

ಮಹಾಲಿಂಗಪುರ 11: ನಗರದ ಎಲ್ಲಾ ಹಿಂದೂ ಸಂಘಟನೆಗಳ ನೇತೃತ್ವದಲ್ಲಿ ಮಾರ್ಚ ಇಂದು ಬೃಹತ್ ಹಲಗೆ ಹಬ್ಬ ಮತ್ತು 14 ರಂದು ನಡುಚೌಕಿಯಲ್ಲಿ ರಂಗೋತ್ಸವ ಹಮ್ಮಿಕೊಳ್ಳಲಾಗಿದೆ, ಉದ್ಘಾಟಕರಾಗಿ ಶಾಸಕ ಸಿದ್ದು ಸವದಿ,ಪುರಸಭೆ ಅಧ್ಯಕ್ಷ ಯಲ್ಲಣಗೌಡ ಪಾಟೀಲ, ಬಸನಗೌಡ ಪಾಟೀಲ ಹಲಗೆ ಬಾರಿಸುವುದರೊಂದಿಗೆ ಚಾಲನೆ ನೀಡಲಿದ್ದಾರೆ ಎಂದು ಶಿವಾನಂದ ಅಂಗಡಿ, ಶಂಕರಗೌಡ ಪಾಟೀಲ ತಿಳಿಸಿದ್ದಾರೆ. 

ಈ ಸಂದರ್ಭದಲ್ಲಿ ಚನ್ನಬಸು ಯರಗಟ್ಟಿ, ಭೀಮಶಿ ಗೌಂಡಿ, ವಿಷ್ಟುಗೌಡ ಪಾಟೀಲ, ಮುತ್ತಪ್ಪ ದಲಾಲ, ಚನ್ನಪ್ಪ ಪಟ್ಟಣಶೆಟ್ಟಿ,ರಮೇಶ ಕೇಸರಗೊಪ್ಪ, ಶಿವನಗೌಡ ಪಾಟೀಲ, ಮಹೇಶ ಜಿಡ್ಡಿಮನಿ, ಕುಮಾರ ನಾರಾಯಣಕರ ಉದಯ ಪವಾರ, ಕುಮಾರ ಪೂಜಾರಿ,ಚೇತನ ಬಂಡಿವಡ್ಡರ, ಬಸವರಾಜ ಮಡಿವಾಳ,ಸೇರಿದಂತೆ ಅನೇಕರು ಇದ್ದರು.