ರಂಗೋಲಿ ಸ್ಪರ್ಧೆಯಿಂದ ಸನಾತನ ಸಂಕೃತಿ ಉಳಿಸಿ ಬೆಳೆಸಲು ಸಹಕಾರಿ: ನಲವಡೆ

Rangoli competition helps to preserve and nurture ancient culture: Nalavade

ಬೈಲಹೊಂಗಲ 22: ರಂಗೋಲಿ ಸ್ಪರ್ಧೆಯಿಂದ ಸನಾತನ ಸಂಕೃತಿ, ಸಂಸ್ಕಾರ ಉಳಿಸಿ ಬೆಳೆಸಲು ಸಹಕಾರಿ ಎಂದು ಶಿಕ್ಷಣ ಪ್ರೇಮಿ, ಸರ್ಕಾರಿ ಪ್ರೌಢ ಶಾಲಾ ಎಸ್ಡಿಎಂಸಿ ಅಧ್ಯಕ್ಷ ನಾರಾಯಣ ನಲವಡೆ ನುಡಿದರು. 

ಅವರು ತಾಲೂಕಿನ ನಯಾನಗರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕೋರಮಂಡಲ್ ಇಂಟರನ್ಯಾಶನಲ್ ಲಿಮಿಟೆಡ್ ಕಂಪನಿಯವರು, ಮಕರ ಸಂಕ್ರಮಣದ ಹಬ್ಬದ ಪ್ರಯುಕ್ತ ಶಾಲಾ ಮಕ್ಕಳಿಗೆ ಏರಿ​‍್ಡಸಿದ್ದ ರಂಗೋಲಿ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡುತ್ತಾ ಕೋರಮಂಡಲ್ ಕಂಪನಿಯು ತಮ್ಮ ಪ್ರೊಡಕ್ಟ್ಗಳ ಪ್ರಚಾರದ ಜೊತೆಗೆ ರಂಗೋಲಿ ಸ್ಪರ್ಧೆಯ ಮೂಲಕ ಸನಾತನ ಸಂಕೃತಿ, ಸಂಸ್ಕಾರಗಳನ್ನು ಮಕ್ಕಳಲ್ಲಿ ಬೆಳೆಸಲು ಪ್ರಯತ್ನಿಸುತ್ತಿರುವುದು ಶ್ಲಾಘನೀಯ. ಸನಾತನ ಧರ್ಮದಲ್ಲಿ ಅತಿಥಿಗಳನ್ನು ಸ್ವಾಗತಿಸಲು ಸನಾತನ ಆಚಾರಗಳಲ್ಲಿ ರಂಗೋಲಿಗೆ ಪ್ರಥಮ ಪ್ರಾಶಸ್ತ್ಯ. ಪ್ರತಿನಿತ್ಯ ಮಹಿಳೆಯರು ಮನೆಯ ಅಂಗಳ ಸ್ವಚ್ಛಗೊಳಿಸಿ ರಂಗೋಲಿ ಹಾಕುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ ಎಂದರು.  

ಇದೇ ಸಂದರ್ಭದಲ್ಲಿ ಕಂಪನಿಯ ಪ್ರೋಡಕ್ಟಗಳನ್ನು ಬಳಸುತ್ತಿರುವ ಸಾಧಕ ರೈತ ರಾಯಪ್ಪ ಉಗರಕೋಡ ಇವರನ್ನು ಸತ್ಕರಿಸಲಾಯಿತು. ಸ್ಪರ್ಧೆಯಲ್ಲಿ 30 ಮಕ್ಕಳು ಭಾಗವಹಿಸಿದ್ದರು. ನಿರ್ಣಾಯಕರಾಗಿ ಸಿದ್ದಯ್ಯಾ ಹಿರೇಮಠ, ಎಸ್‌.ಆರ್‌.ಪತ್ತಾರ ಭಾಗವಹಿಸಿದ್ದರು. ಪ್ರಥಮ ಸ್ಥಾನ ಸಹನಾ ಹಿರೇಮಠ ದ್ವಿತೀಯ ನಮ್ರತಾ ಬಡಿಗೇರ ತೃತೀಯ ಚೈತ್ರಾ ಪಾಟೀಲ ಪಡೆದರು. ಉಳಿದ ಎಲ್ಲಾ 27 ಮಕ್ಕಳಿಗೂ ಕೂಡಾ ಸಮಾಧಾನಕರ ಬಹುಮಾನವಾಗಿ ಕಂಪಾಸ್, ಬುಕ್ ಹಾಗೂ ಪೆನ್ನುಗಳನ್ನು ಕಂಪನಿಯ ಪರವಾಗಿ ಬಹುಮಾನ ನೀಡಿದರು. ರಂಗೋಲಿ ಸ್ಪರ್ಧೆಯ ವೇದಿಕೆಯಲ್ಲಿ ಸಮಾರಂಭದ ಅತಿಥಿಗಳಾಗಿ ಶಾಲಾ ಮುಖ್ಯೊಪಾದ್ಯಾಯ ನಾಗೇಶ ಮಾಳನ್ನವರ, ಎಸ್ಡಿಎಂಸಿ ಸದಸ್ಯರಾದ ರವಿ ಬಡಿಗೇರ, ಬಾಬು ಮಾಳಗಿ, ಮೌನೇಶ ಬಡಿಗೇರ, ಪ್ರಾಥಮಿಕ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಯಲ್ಲಪ್ಪ ಏಣಗಿ, ಕಂಪನಿಯ ಕ್ಷೇತ್ರಪಾಲ ಉಮೇಶ ಹುಲಮನಿ, ಈರಣ್ಣ ದಳವಾಯಿ, ಬಸವರಾಜ ಕಡಕೋಳ, ಮಲ್ಲಪ್ಪ ಏಣಗಿ ಮುಂತಾದವರು ಉಪಸ್ಥಿತರಿದ್ದರು. ಶಿಕ್ಷಕ ಬಸವರಾಜ ಪತ್ತಾರ ಸ್ವಾಗತಿಸಿದರು, ಶಿಕ್ಷಕ ರವೀಂದ್ರಕುಮಾರ ಹಾದಿಮನಿ ನಿರೂಪಿಸಿದರು, ಶಿಕ್ಷಕಿ ಬ್ರಹ್ಮಾನಂದ ಕಡ್ಲಿಬುಡ್ಡಿ ವಂದಿಸಿದರು.