ಲೋಕದರ್ಶನವರದಿ
ರಾಣೇಬೆನ್ನೂರು : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆವತಿಯಿಂದ ನಗರದ ಹಳೇ ಅಂತರವಳ್ಳಿ ರಸ್ತೆಯಲ್ಲಿರುವ ಡಿ.ದೇವರಾಜ ಅರಸು ಮೆಟ್ರಿಕ್ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ವಿದ್ಯಾಥರ್ಿಯೋರ್ವಳು ಆಕಸ್ಮಿಕವಾಗಿ ಬಿದ್ದು ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ.
ಮೃತಳನ್ನು ತಾಲೂಕಿನ ಹನುಮಾಪುರ ಗ್ರಾಮದ ಕಾವ್ಯ ಅಶೋಕ ಬೆನ್ನೂರ(18) ಎಂದು ಗುರುತಿಸಲಾಗಿದೆ. ಕಾವ್ಯಾಳು ಸ್ಥಳೀಯ ರಾಜರಾಜೇಶ್ವರಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾಗಿ ಅಭ್ಯಾಸ ಮಾಡುತ್ತಿದ್ದಳು.
ಇಂದು ಪರೀಕ್ಷೆ ಇದ್ದ ಕಾರಣ ಬೆಳಗಿನ ಜಾವ 4.30 ರ ಸುಮಾರಿಗೆ ಕೊಠಡಿಯಿಂದ ಎದ್ದು ಶೌಚಾಲಯಕ್ಕೆ ತೆರಳುವ ಸಂದರ್ಭದಲ್ಲಿ ಒಂದನೆ ಮಹಡಿಯಲ್ಲಿದ್ದ ಕಾವ್ಯಾಳು ಆಯತಪ್ಪಿ ಕೆಳಗಡೆ ಬಿದ್ದ ಪರಿಣಾಮ ತಲೆಗೆ ಬಲವಾದ ಪೆಟ್ಟು ಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲಿ ಕೊನೆಯುಸಿರೆಳೆದಳು. ಈ ಕುರಿತು ಶಹರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲುಗೊಂಡಿದೆ.
ಕಾವ್ಯಾಳ ಪಾಲಕರು ಈ ಸಾವು ಅನುಮಾನಾಸ್ಪದವಾಗಿದ್ದು, ಪೊಲೀಸರು ತನಿಖೆ ನಡೆಸಿ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಿದರು.
ಜೊತೆಗೆ ವಿವಿಧ ವಿದ್ಯಾರ್ಥಿ ಸಂಘಟನೆಗಳು ರೈತ ಮುಖಂಡರು, ಇದು ಸಹಜ ಸಾವಲ್ಲ. ಸಾವಿನಲ್ಲೂ ಸಂಶಯವಿದೆ. ತನಿಖೆ ನಡೆಸಬೇಕೆಂದು ಒತ್ತಾಯಿಸಿದರು.
ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಮೃತ ಪಾಲಕರಿಗೆ ಸಾಂತ್ವನ ಹೇಳುವುದರ ಜೊತೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದರು.
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ, ಎಸ್.ಪಿ. ಕೆ.ಸಿ.ದೇವರಾಜ, ಎ.ಎಸ್ಪಿ ಮಲ್ಲಿಕಾಜರ್ುನ ಬಾಲದಂಡಿ, ಜಿಲ್ಲಾ ಬಿಸಿಎಂ ಅಧಿಕಾರಿ ಎಚ್.ಎ.ಜಮಖಾನೆ, ಸಿ.ಎಸ್ ರಮೇಶ ದೇಸಾಯಿ, ತಹಶೀಲ್ದಾರ ಸಿ.ಎಸ್. ಕುಲಕಣರ್ಿ, ತಾಪಂ ಇಓ ಎಸ್.ಎಂ.ಕಾಂಬಳೆ, ವಿ.ಎಸ್.ಹಿರೇಮಠ, ಡಿವೈಎಸ್ಪಿ ಟಿ.ವಿ.ಸುರೇಶ, ಸಿಪಿಐ ಸುರೇಶ ಸಗರಿ, ಪಿಎಸ್ಐ ನೀಲಪ್ಪ ಉದಗಟ್ಟಿ, ಪ್ರಭು ನಡುವಿನಮನಿ ಸೇರಿದಂತೆ ಬಿಸಿಎಂ ಮೇಲ್ವಿಚಾರಕರು ಸಿಬ್ಬಂದಿಗಳು ಮತ್ತಿತರರು ಇದ್ದರು.