ರಾಣೇಬೆನ್ನೂರು: ರೈತ ಚೈತನ್ಯ ಜ್ಯೋತಿ ಯಾತ್ರೆ

ಲೋಕದರ್ಶನವರದಿ

ರಾಣೇಬೆನ್ನೂರು: ನಗರದ    ಹೊರವಲಯದಲ್ಲಿರುವ  ಹಿರೇಮಠದ ಶನೈಶ್ಚರ ಮಂದಿರದ ಆವರಣದಲ್ಲಿ  ರಾಜ್ಯದ ಮೊದಲನೆಯ ಹಾಗೂ ರಾಷ್ಟ್ರದ ಎರಡನೇಯದಾಗಿರುವ ಶನೈಶ್ಚರ ಸ್ವಾಮಿಯ 7ನೇ ವಾಷರ್ಿಕೋತ್ಸವ ಮತ್ತು ಲೋಕ ಕಲ್ಯಾಣಾರ್ಥವಾಗಿ ತಿಲಲಕ್ಷದೀಪೋತ್ಸವ ಮತ್ತು 108 ಗ್ರಾಮಗಳ ರೈತ ಚೈತನ್ಯ ಜ್ಯೋತಿಯಾತ್ರೆ ಮತ್ತು 750 ವಿಕಲಚೇತರಿಗೆ ಸನ್ಮಾನ ಸೇರಿದಂತೆ ಡಿ.5ರಂದು ನಡೆಯಲಿರುವ ವಿವಿಧ ಧಾಮರ್ಿಕ ಕಾರ್ಯಕ್ರಮಗಳ ನಿಮಿತ್ಯ ಏರ್ಪಡಿಸರುವ ಸಿದ್ದಾಂತ ಶಿಖಾಮಣಿ ಪ್ರವಚನ   ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ  ಗಣನೀಯ ಸೇವೆ ಸಲ್ಲಿಸಿರುವ ಸಾಧಕರಿಗೆ ವೃತ್ತಿಚೈತನ್ಯ ಸಿರಿ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

     ಕಾರ್ಯಕ್ರಮದ ಭಾಗವಹಿಸಿದ್ದ ಶ್ರೀಮಠದ ಶನೈಶ್ಚರ ಮಂದಿರ ಶಿವಯೋಗಿ ಮಹಾಸ್ವಾಮಿಗಳು ಪ್ರಶಸ್ತಿ ವಿತರಿಸಿ ಮಾತನಾಡಿ, ಸಮಾಜದಲದಲಿ ಸರ್ವ ಧರ್ಮದವರು ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಪ್ರತಿಭೆಯ ಮೂಲಕ ಸಾಧನೆಯನ್ನು ತೋರುತ್ತಾರೆ. 

      ಅಂತಹವರನ್ನು ಗುರುತಿಸಿ ಅವರುಗಳಿಗೆ ಈ ವೃತ್ತಿಚೈತನ್ಯ ಸಿರಿ ಪ್ರಶಸ್ತಿ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರಿಂದ ಸಾಧಕರಿಗೆ ಇನ್ನಷ್ಟು ಸ್ಪೂತರ್ಿ ದೊರೆಯುವುದಲ್ಲದೇ ತಮ್ಮ ಕಾರ್ಯದಲ್ಲೂ ಇನ್ನಷ್ಟು ಪ್ರಬುದ್ಧತೆ ಮೆರೆಯಲು ಬಹಳಷ್ಟು ಸಹಕಾರಿಯಾಗುತ್ತದೆ ಎಂದರು. 

      ಹೇರೂರಿನ ಗುಬ್ಬಿ ನಂಜುಂಡೇಶ್ವರ ಮಹಾಸ್ವಾಮಿಗಳು, ಸ್ವಾಗತ ಸಮಿತಿಯ ಅಧ್ಯಕ್ಷ ಎಸ್.ಎಸ್.ರಾಮಲಿಂಗಣ್ಣನವರ, ರೈತ ಚೈತನ್ಯ ಜ್ಯೋತಿ ಯಾತ್ರೆಯ ಅಧ್ಯಕ್ಷ ಬಸವರಾಜ ಸವಣೂರ, ಕಾಯಾಧ್ಯಕ್ಷ ರವೀಂದ್ರಗೌಡ ಪಾಟೀಲ, ಬಸವನಗೌಡ ಪಾಟೀಲ, ಸಾಹಿತಿ ಗಿರಿಜಾದೇವಿ ದುರ್ಗದಮಠ, ಡಿಳ್ಳೆಪ್ಪ ಸತ್ಯಪ್ಪನವರ, ಶಿವಯೋಗಿ ಹಿರೇಮಠ, ಪುಷ್ಪಾ ಬದಾಮಿ  ಸೇರಿದಂತೆ ಶಾಸ್ತ್ರಿಗಳು ಶ್ರೀಗಳ ಮಠದ ವಟುಗಳು ಭಕ್ತರು ಮತ್ತಿತರರು ಇದ್ದರು. 

    ಕಾರ್ಯಕ್ರಮಕ್ಕೂ ಮುನ್ನ ಬೆಳಗಿನ ಜಾವ ಗಣಪತಿ ಪುಣ್ಯಾಹ, ನಾಂದಿ, ವಾಸ್ತು, ನವಗೃಹ, ವಿವಿಧ ಪೂಜಾ ಕಲಶಗಳ ಪ್ರತಿಷ್ಠಾಪನೆಗಳ ವಿವಿಧ ಪೂಜಾ ಧಾಮರ್ಿಕ ಕಾರ್ಯಕ್ರಮಗಳು, ಮಹಾರುದ್ರಯಾಗ ಸೇರಿದಂತೆ ವಿವಿಧ ಹೋಮ ಕಾರ್ಯಕ್ರಮಗಳು ಜರುಗಿದವು.  ಆನಂತರ ಸಂಗೀತ ಕಾರ್ಯಕ್ರಮ ಹಾಗೂ ಮಹಾಮಂಗಳಾರತಿ ನೆರವೇರಿತು. ನಂತರ ಪ್ರಸಾದ ಕಾರ್ಯ ನಡೆಯಿತು.