ರಾಣೇಬೆನ್ನೂರ: 15ಕ್ಕೂ ಹೆಚ್ಚು ರೈತ ಸಾವು: ಮಾನವೀಯತೆ ಮರೆತ ಸಕರ್ಾರ ರೈತರ ಆರೋಪ

ಲೋಕದರ್ಶನವರದಿ

ರಾಣೇಬೆನ್ನೂರು: ರೈತರು ಮಳೆ ಬಾರದೇ, ಬೆಳೆ ಕಾಣದೇ, ಬೆಳೆ ಬಂದರೂ ಅತೀವೃಷ್ಠಿ-ಅನಾವೃಷ್ಠಿಯ ಪರಿಣಾಮ ಬಂದ ಅಲ್ಪಸ್ವಲ್ಪ ಬೆಳೆಯು ಸಹ ಕೈಗೆ ದಕ್ಕದೇ, ದೃತಿಗೆಟ್ಟ ರೈತ ಬದುಕಿನ ದಾರಿ ಕಾಣದೇ, ಮಾನಸಿಕಸ್ಥೈರ್ಯವನ್ನು ಕಳೆದುಕೊಂಡು ನೇಣಿಗೆ ಶರಣಾಗುತ್ತಿದ್ದಾನೆ. ಸಕರ್ಾರದಿಂದ ಕೂಡಲೇ ಇದಕೊಂದು ಶಾಶ್ವತ ಪರಿಹಾರ ಕಂಡುಕೊಂಡು ರೈತನ ಬದುಕು ಕಟ್ಟಿಕೊಡಲು ಮುಂದಾಗಬೇಕೆಂದು ಉತ್ತರ ಕನರ್ಾಟಕ ಪ್ರದೇಶ ರೈತ ಹಾಗೂ ರೈತಕಾಮರ್ಿಕ ಸಂಘದ ತಾಲೂಕಾಧ್ಯಕ್ಷ ಕೃಷ್ಣಮೂತರ್ಿ ಲಮಾಣಿ, ರಾಜ್ಯಉಪಾಧ್ಯಕ್ಷ ದಯಾಲಾಲ್ ಸಂಘವಿ ಅವರು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಮನವಿಯೊಂದನ್ನು ಸಲ್ಲಿಸಿ ವಿನಂತಿಸಿದ್ದಾರೆ. 

ತಾಲೂಕಿನ ನಾಗೇನಹಳ್ಳಿ ಗ್ರಾಮದ ಇತ್ತೀಚಗೆ ಮೃತಪಟ್ಟ ಪ್ರಭು ಸಿದ್ಧಪ್ಪ ಮಾಕನೂರ ಅವರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕುಮಾರಸ್ವಾಮಿ ಅವರಿಗೆ ಈ ಕುರಿತು ಮನವಿ ಸಲ್ಲಿಸಿ ವಿನಂತಿಸಿದ್ದಾರೆ. 

ಅಗಸ್ಟ್ 6ರಿಂದ ನಿರಂತರ ಧರೆಗಿಳಿದ ಮಹಾಮಳೆಯಿಂದಾಗಿ ಉತ್ತರ ಕನರ್ಾಟಕ ಸಂಪೂರ್ಣ  ಜನ-ಜಾನುವಾರು ತತ್ತರಿಸಿ ಹೋಗಿದ್ದು, ಮನೆ-ಮಠ, ಆಸ್ತಿ-ಪಾಸ್ತಿ ಸಂಪೂರ್ಣ ಕಳೆದುಕೊಂಡು ಬದುಕಿನ ದಾರಿ ಕಾಣದೇ ನಿರಾಶ್ರೀತರಂತೆ ಬದುಕನ್ನು ಇಂದಿಗೂ ಸಾಗಿಸುತ್ತಿದ್ದಾರೆ.  ಆಡಳಿತ ಸಕರ್ಾರ ಕಣ್ಣಾಮುಚ್ಚಾಲೆ ಆಟ ಆಡುತ್ತಿರುವುದು ರೈತ ಸಮುದಾಯದ ವಿರೋಧಿ ಧೋರಣೆ ಎದುರಿಸುವಂತಾಗಿದೆ.  ಮಾನವೀಯ ನೆಲಗಟ್ಟಿನಲ್ಲಿ ಬೀದಿಪಾಲಾದವರಿಗೆ ಸೂರಿನ ಜೊತೆಗೆ ಬದುಕನ್ನು ಕಟ್ಟಿಕೊಡಬೇಕು ಎಂದು ಮನವಿ ಮಾಡಿದ್ದಾರೆ. 

ತಾಲೂಕು ಮತ್ತು ಜಿಲ್ಲೆಯಲ್ಲಿ 15ಕ್ಕೂ ಹೆಚ್ಚು ರೈತರು ಕೇವಲ ಒಂದುವರೆ ತಿಂಗಳ ಅವಧಿಯಲ್ಲಿ ಸಾಲದ ಸುಳಿಗೆ ಸಿಲುಕಿ ಬೇರೆ ದಾರಿ ಕಾಣದೇ ಯಾರಿಗೂ ಹೇಳದೇ, ಆತ್ಮಸ್ಥೈರ್ಯ ಕಳೆದುಕೊಂಡ ರೈತರು ನೇಣಿಗೆ ಮತ್ತು ವಿಷ ಸೇವಿಸಿ ಸಾವು ಕಂಡಿದ್ದಾರೆ. ರೈತರೆಂದರೆ, ಆಳುವ ಸಕರ್ಾರಗಳಿಗೆ ಬೆಲೆ ಇಲ್ಲವೇ?  ದೇಶಕ್ಕೆ ಅನ್ನ ನೀಡುವ ಅನ್ನದಾತನಿಗೆ ಈ ರೀತಿಯ ಸಮಸ್ಯೆ ಎದುರಾದರೆ, ಅವರನ್ನು ಅವಲಂಬಿತರು ಬದುಕಲು ಸಾಧ್ಯವೇ? ಎಂದು ಸಲ್ಲಿಸಿರುವ ಮನವಿಯಲ್ಲಿ ಪ್ರಶ್ನಿಸಿರುವ ರೈತ ಮುಖಂಡರು ತಾವು ಈ ಕುರಿತು ಕ್ರಮ ಕೈಗೊಂಡು ರೈತ ಸಮುದಾಯಕ್ಕೆ ನ್ಯಾಯ ದೊರಕಿಸಬೇಕೆಂದು ವಿನಂತಿಸಿದ್ದಾರೆ.

ಮನವಿ ಸಲ್ಲಿಕೆ ಮುಂಚೂಣಿಯಲ್ಲಿ ರಾಜ್ಯ ಉಪಾಧ್ಯಕ್ಷ ಪರಮೇಶಪ್ಪ ಹಲಗೇರಿ, ಜಂಟಿ ಕಾರ್ಯದಶರ್ಿ ಮಂಜಪ್ಪ ವಡ್ಡರ, ಗೌರವಾಧ್ಯಕ್ಷ ರಾಜು ಮಲ್ಲಾಡದ, ಈರಣ್ಣ ಹಲಗೇರಿ, ಮುತ್ತಣ್ಣ ಹೊಸಮನಿ, ರಾಜು ವಡೆಯರ, ಚಂದ್ರಪ್ಪ ಕಾಳಪ್ಪನವರ, ಕಿರಣ್ ಲಮಾಣಿ, ನಾಗಪ್ಪ ಬಜ್ಜಿ, ನಾರಾಯಣ್ ಮೆಹರವಾಡೆ ಸೇರಿದಂತೆ ಸಂಘಟನೆಯ ನೂರಾರು ಮುಖಂಡರು ಪಾಲ್ಗೊಂಡಿದ್ದರು.