ಪ್ರಥಮ ಬಾರಿಗೆ ಬಿಜೆಪಿಯಿಂದ ರಮೇಶ ಜಾರಕಿಹೊಳಿ ಆಯ್ಕೆ

ಲೋಕದರ್ಶನ ವರದಿ

ಮೂಡಲಗಿ: ರಾಜ್ಯ ರಾಜಕೀಯದ ಉಪ ಚುನಾವಣೆ ಕಣದಲ್ಲಿ ಎಲ್ಲರ ಗಮನ ಸೆಳೆದಿದ್ದ ಜಿದ್ದಾ ಜಿದ್ದಿಯ ಗೋಕಾಕ ಮತಕ್ಷೇತ್ರದಲ್ಲಿ ಬಿಜೆಪಿಯ ಕಮಲ ಅರಳಿದೆ. ಗೋಕಾಕ ಮತಕ್ಷೇತ್ರದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಬಿಜೆಪಿಯಿಂದ ರಮೇಶ ಜಾರಕಿಹೊಳಿಯವರು ಆಯ್ಕೆಯಾಗಿ ರಾಜ್ಯ ರಾಜಕಾರಣ ಹಾಗೂ ಬೆಳಗಾವಿ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಪುರಸಭೆ  ಸದಸ್ಯ ಸಂತೋಷ ಸೋನವಾಲಕರ ಹೇಳಿದರು.

ಅವರು ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯಥರ್ಿ ಜಯಹೊಂದಿರುವ ಪ್ರಯುಕ್ತ ಪಟ್ಟಣದಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು. 

ರಾಜ್ಯದಲ್ಲಿ ಸುಭದ್ರ ಸರಕಾರ ನಡೆಸುವ ನಿಟ್ಟಿನಲ್ಲಿ ಉಪಚುನಾವಣೆ ನಡೆಸಿ ಬಹುಮತದೊಂದಿಗೆ ಜನಾನುರಾಗಿ ಆಡಳಿತ ನಡೆಸುವ ಉದ್ದೇಶವಾಗಿದೆ. ಗೋಕಾಕ ಕ್ಷೇತ್ರದಲ್ಲಿ ಅರಭಾಂವಿ ಕ್ಷೇತ್ರದ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರ ಅವಿರತ ಪ್ರಯತ್ನ ಹಾಗೂ ಉಸ್ತುವಾರಿ ವಹಿಸಿದ್ದ ರಾಜ್ಯ ನಾಯಕರ ಕೊಡುಗೆ ಮೆಚ್ಚುವಂತಹದಾಗಿದೆ. 

ಕ್ಷೇತ್ರ ಹಾಗೂ ಜಿಲ್ಲೆಯ ಅಭಿವೃದ್ಧಿ ಸಲುವಾಗಿ ರಾಜ್ಯ ರಾಜಕೀಯದಲ್ಲಿ ಮಹತ್ವದ ಹುದ್ದೆ ಸಿಗುವ ನಿರೀಕ್ಷೆ ಇದ್ದು, ಇದರಿಂದಾಗಿ ಎಲ್ಲರಿಗೂ ಅನುಕೂಲವಾಗುವದಾಗಿ ಹೇಳಿದರು. 

ನಗರದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಗುಲಾಲು ಎರಚಿ ಬೈಕ್ ರ್ಯಾಲಿ ಮೂಲಕ ಪ್ರದಕ್ಷಣೆ ಹಾಕಿದರು.  

ಈ ಸಂದರ್ಭದಲ್ಲಿ ಮೂಡಲಗಿ ಪುಸಭೆ ಸದಸ್ಯ ಹಣಮಂತ ಗುಡ್ಲಮನಿ, ಮುಖಂಡರಾದ ಅನ್ವರ ನದಾಫ್, ಸಿದ್ದು ಗಡ್ಡೆಕರ, ಬಸು ಝೆಂಡೆಕುರುಬರ, ಕುಮಾರ ಗಿರಡ್ಡಿ, ಮಲ್ಲು ಯಾದವಾಡ, ಶಿವಬೋಧ ಗೋಕಾಕ, ಶಾನೂರ ಬಂಗೆನ್ನವರ, ಸಿದ್ಲಿಂಗಪ್ಪ ಯರಗಟ್ಟಿ, ಚೇತನ ನಿಶಾನಿಮಠ, ರಾಜು ಭಜಂತ್ರಿ, ಕಲ್ಮೇಶ ಗೋಕಾಕ, ಮಲ್ಲು ಕುರಬಗಟ್ಟಿ, ನಂಜುಂಡಿ ಸವರ್ಿ, ಭೀಮಶಿ ತಳವಾರ, ಮಂಜು ಪೀರೋಜಿ, ಬಸು ಶೆಕ್ಕಿ, ಚನಬಸು ನಿಡಗುಂದಿ, ದಶರಥ ಬಂಡಿವಡ್ಡರ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ಹಾಜರಿದ್ದರು.