ಸುಪ್ರಿಂ ತೀರ್ಪಿನತ್ತ ಅನರ್ಹರ ಚಿತ್ತ: ಪುತ್ರನೊಂದಿಗೆ ದೆಹಲಿಗೆ ತೆರಳಿದ ರಮೇಶ್ ಜಾರಕಿಹೊಳಿ

ಬೆಳಗಾವಿ, ಸೆ 22      ತಮ್ಮನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಸ್ಪೀಕರ್ ರಮೇಶ್ ಕುಮಾರ್ ನೀಡಿರುವ ಆದೇಶ ಪ್ರಶ್ನಿಸಿ ಅನರ್ಹ ಶಾಸಕರು ಸಲ್ಲಿಸಿರುವ ಅರ್ಜಿ ಸೋಮವಾರ ವಿಚಾರಣೆಗೆ ಬರಲಿದ್ದು, ಕೊನೆಯ ಅವಕಾಶಕ್ಕಾಗಿ ಅನರ್ಹರು ಸುಪ್ರೀಂ ಕೋರ್ಟ್ ನತ್ತ ಎದುರುನೋಡುತ್ತಿದ್ದಾರೆ.  

ಅರ್ಜಿ ವಿಚಾರಣೆ  ಹಾಗೂ ಉಪಚುನಾವಣೆ ಘೋಷಣೆಯಿಂದ ಕಂಗೆಟ್ಟಿರುವ ಅನರ್ಹರ ನಾಯಕ ರಮೇಶ್ ಜಾರಕಿಹೊಳಿ ಭಾನುವಾರ ದೆಹಲಿಗೆ ಪ್ರಯಾಣ ಬೆಳೆಸಿದರು. 

ಪುತ್ರ ಅಮರನಾಥ್ ಜಾರಕಿಹೊಳಿ ಜೊತೆ ಬಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಿಂದ ಮುಂಬೈಗೆ ಮೂಲಕ ದೆಹಲಿಗೆ  ರಮೇಶ್ ಜಾರಕಿಹೊಳಿ ತೆರಳಿ ನಾಳೆ ವಿಚಾರಣೆಗೆ ಹಾಜರಾಗಲಿದ್ದಾರೆ. 

ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಸುಪ್ರೀಂಕೋರ್ಟ್ ನಲ್ಲಿ ನಡೆಯಲಿರುವ ಅಜರ್ಿ ವಿಚಾರಣೆಯಲ್ಲಿ 

ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ. ನ್ಯಾಯಾಲಯ ಚುನಾವಣೆಗೆ ಸ್ಪರ್ಧಿಸುವಂತೆ ಸೂಚಿಸಿದರೆ ಸೆ30 ರ ಸೋಮವಾರ ಚುನಾವಣೆಗೆ ಸ್ಪರ್ಧೆಗೆ ನಾಮಪತ್ರ ಸಲ್ಲಿಸುತ್ತೇನೆ. ನ್ಯಾಯಾಲಯದ ತೀರ್ಮಾನದ ಮೇಲೆ ಮುಂದಿನ ನಿಧರ್ಾರ ಎಂದರು. 

ಸಿಪ್ರೀಂಕೋರ್ಟ್ ನಲ್ಲಿ ಮಧ್ಯಂತರ ಆದೇಶವಿದ್ದಾಗ ಚುನಾವಣೆ ನಡೆಸಲು ಬರುವುದಿಲ್ಲ. ಈ ಕುರಿತು ವಕೀಲರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದರು. 

ಗೋಕಾಕ ಕ್ಷೇತ್ರದಲ್ಲಿ ನನ್ನ ವಿರುದ್ದ ಷಡ್ಯಂತ್ರ ಹಾಗೂ ಕುತಂತ್ರ ನಡೆಯುತ್ತಿದ್ದು, ಕ್ಷೇತ್ರದ ಜನತೆ ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ. ಸಹೋದರ ಸತೀಶ್ ಜಾರಕಿಹೊಳಿ ಕುತಂತ್ರಕ್ಕೆ ಈಗಾಗಲೇ  2008 ರಲ್ಲಿ ಜನ ಉತ್ತರ ನೀಡಿದ್ದಾರೆ. ನಮ್ಮ ಕುಟುಂಬ ಒಡೆದು ಮತ ವಿಭಜನೆ ಮೂಲಕ ನನ್ನನ್ನ ಸೋಲಿಸಲು ಸತೀಶ್ ಜಾರಕಿಹೊಳಿ ಕುತಂತ್ರ ಮಾಡುತ್ತಿದ್ದಾರೆ. ಆದರೆ ಸತೀಶನ ಕುತಂತ್ರ ಫಲಿಸುವುದಿಲ್ಲ ಎಂದು ರಮೇಶ್ ಜರಕಿಹೊಳಿ ಸಹೋದರನಿಗೆ ಸವಾಲು ಹಾಕಿದರು. 

ಇನ್ನೋರ್ವ ಸಹೋದರ ಲಖನ್ ಜಾರಕಿಹೊಳಿ ಬುದ್ದಿವಂತ. ಹೀಗಾಗಿ ಈ ಕುತಂತ್ರಕ್ಕೆ ಆತ ಬಲಿಯಾಗುವುದಿಲ್ಲ ಎಂಬ ವಿಶ್ವಾಸವಿದೆ. ಲಖನ್ ಜಾರಕಿಹೊಳಿ ಶಾಸಕರಾಗಿ ಆಯ್ಕೆಯಾದರೆ ಮೊದಲು ಖುಷಿ ಪಡುವ ವ್ಯಕ್ತಿ ನಾನೇ ಆಗಿರುತ್ತೇನೆ. ಆದರೆ ಸಂತಸ ಪಡೆಯಲು ಇದು ಸೂಕ್ತ ಸಮಯವಲ್ಲ. ದೆಹಲಿಯಿಂದ ವಾಪಸ್ಸಾದ ಬಳಿಕ ಲಖನ್  ಜೊತೆ ಈ ಸಂಬಂಧ ಚರ್ಚಿಸುವುದಾಗಿ ರಮೇಶ್ ಜಾರಕಿಹೊಳಿ ಹೇಳಿದರು. 

ಶನಿವಾರ ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಅನರ್ಹ ಶಾಸಕರ ಜತೆ ರಹಸ್ಯ ಸಭೆ ನಡೆಸಿದರು. ಕಾನೂನು ಸಹಕಾರಕ್ಕೆ ನೆರವು ನೀಡುವಂತೆ ಈ ಸಂಬಂಧ ಕೇಂದ್ರ ಸಚಿವ ಅಮಿತ್ ಷಾ ಸಹಾಯ ಮಾಡುವಂತೆ ಒತ್ತಡ ಹೇರಬೇಕೆಂದು ಮನವಿ ಮಾಡಿದ್ದರು. 

ದೆಹಲಿಯಲ್ಲಿ ಯಡಿಯೂರಪ್ಪ ಅಮಿತ್ ಷಾ ಅವರನ್ನು ಭೇಟಿ ಮಾಡಿದ್ದು, ಸೋಮವಾರ ನ್ಯಾಯಾಲಯದ ತೀಪರ್ಿನ ಕುರಿತಂತೆ ಚಚರ್ೆ ನಡೆಸಿದ್ದಾರೆ. ಒಂದುವೇಳೆ ನ್ಯಾಯಾಲಯ ಸ್ಪೀಕರ್ ತೀರ್ಪನ್ನು ಎತ್ತಿಹಿಡಿದಿದ್ದೇ ಆದಲ್ಲಿ ಅನರ್ಹ ಶಾಸಕರು ತಮ್ಮ ತಮ್ಮ ಸಂಬಂಧಿ, ಪುತ್ರ, ಪತ್ನಿಯರನ್ನು ಚುನಾವಣಾ ಕಣಕ್ಕಿಳಿಸಲು ಅನರ್ಹ ಶಾಸಕರು ಬಿಜೆಪಿಯ ನೆರವು ಕೇಳಿದ್ದಾರೆ ಎನ್ನಲಾಗಿದೆ