ರಾಮದುರ್ಗ: ದಾಂಡೇಲಿಯ ಹಿರಿಯ ನ್ಯಾಯವಾದಿ ಹಾಗೂ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಅಜೀತ ನಾಯಕ ಅವರನ್ನು ದುಷ್ಕಮರ್ಿಗಳು ಕೊಲೆ ಮಾಡಿರುವ ಘಟನೆ ಖಂಡಿಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಸ್ಥಳೀಯ ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳು ಶನಿವಾರ ನ್ಯಾಯಾಲಯದ ಕಾರ್ಯಕಲಾಪಗಳಿಂದ ದೂರ ಉಳಿದು ಪಟ್ಟಣದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಆರ್. ಜಿ. ವಜ್ರಮಟ್ಟಿ, ಇತ್ತಿಚಿನ ದಿನಗಳಲ್ಲಿ ನ್ಯಾಯವಾದಿಗಳ ಮೇಲೆ ಹಲ್ಲೆ ನಡೆಸುವುದು ಹೆಚ್ಚಾಗುತ್ತಿದ್ದು, ಸಕರ್ಾರವು ನ್ಯಾಯವಾದಿಗಳ ರಕ್ಷಣೆಗೆ ಸೂಕ್ತವಾದ ಕಾನೂನು ರೂಪಿಸಬೇಕು. ಅಲ್ಲದೇ ಅಜಿತ ನಾಯಕ ಅವರನ್ನು ಹತ್ಯೆ ಮಾಡಿದ ದೃಷ್ಕಮರ್ಿಗಳನ್ನು ಶೀಘ್ರದಲ್ಲೇ ಬಂಧಿಸಬೇಕೆಂದು ಒತ್ತಾಯಿಸಿದರು.
ದಾಂಡೇಲಿ ನ್ಯಾಯವಾದಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ, ಬರ್ಬರವಾಗಿ ಹತ್ಯೆ ಮಾಡಿರುವುದು ಖಂಡನೀಯ, ಕೂಡಲೇ ತಪ್ಪಿತಸ್ಥರನ್ನು ಗುರುತಿಸಿ ಬಂಧಿಸಬೇಕು. ಇಲ್ಲವಾದಲ್ಲಿ ಉಗ್ರವಾದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಅವರು ಮನವಿ ಮೂಲಕ ಎಚ್ಚರಿಕೆ ನೀಡಿದ್ದಾರೆ.
ನ್ಯಾಯವಾದಿಗಳ ಸಂಘದ ಉಪಾಧ್ಯಕ್ಷ ರಾಜು ಸಿದ್ದಾಟಗಿಮಠ, ಕಾರ್ಯದಶರ್ಿ ಎ.ಎ. ಮುದಕವಿ, ಸಹ ಕಾರ್ಯದಶರ್ಿ ಎ. ಎಸ್. ಮಾಳಿ, ನ್ಯಾಯವಾದಿಗಳಾದ ಆರ್.ಕೆ. ಪಾಟೀಲ, ಡಿ.ಎಂ. ಮುರಗೋಡ, ಜಿ.ಬಿ. ನಾಡಗೌಡ, ಎಂ.ವಾಯ್. ಹುಬ್ಬಳ್ಳಿ, ವೆಂಕಟಗಿರಿ, ಎಂ.ವಾಯ್. ಕರಮಲ್ಲಪ್ಪನವರ, ಬಿ.ಎಸ್. ಹಿರೇರಡ್ಡಿ, ಸುನೀಲ ದೊಡಮನಿ, ಮಹೇಶ ವಂದಾಲ ಸೇರಿದಂತೆ ಇತರರಿದ್ದರು.