ರಂಭಾಪೂರಿ ಕಾಲೇಜಿನ ಪಿ.ಯು.ಸಿ ಫಲಿತಾಂಶ
ಶಿಗ್ಗಾವಿ 10 : ಪಟ್ಟಣದ ರಂಭಾಪುರಿ ಜಗದ್ಗುರು ವೀರ ಗಂಗಾಧರ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದ ಪಿಯುಸಿ ದ್ವಿತೀಯ ಪರೀಕ್ಷೆ ಶೇ.65.34 ರಷ್ಟು ಫಲಿತಾಂಶ ಪಡೆದಿದೆ. ವಾಣಿಜ್ಯ ವಿಭಾಗದಲ್ಲಿ ರಾಜೇಶ್ವರಿ ಜಕ್ಕಣ್ಣವರ ಶೇ.92 ಪ್ರಥಮ, ಭೂಮಿಕಾ ಸಂಕಣ್ಣವರ ಶೇ.91.83 ದ್ವಿತೀಯ, ದಾಕ್ಷಾಯಣಿ ಹಿಂದಿನಮನಿ ಶೇ.87.83 ತೃತೀಯ ಸ್ಥಾನವನ್ನ ಪಡೆದಿದ್ದಾರೆ. ಕಲಾ ವಿಭಾಗದಲ್ಲಿ ಸಂದ್ಯಾ ಕುಲಕರ್ಣಿ ಶೇ.97.33 ಪ್ರಥಮ, ಭರಮಪ್ಪ ಹೊಸಮನಿ ಶೇ.96.66 ದ್ವಿತೀಯ, ಸುಪ್ರೀತಾ ಧೋತ್ರೆ ಶೇ.93.16 ತೃತೀಯ ಸ್ಥಾನ ಪಡೆದು, 12 ಜನ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ. 61 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೆರ್ಗಡೆಯಾಗಿದ್ದಾರೆ. ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ ಶೇ.59.38 ರಷ್ಟಾಗಿದೆ. ಕಲಾ ವಿಭಾಗದಲ್ಲಿ ಶೇ.70.64 ರಷ್ಟಾಗಿದೆ. ಕಾಲೇಜಿನ ಒಟ್ಟು ಫಲಿತಾಂಶ ಶೇ.65.34 ರಷ್ಟಾಗಿರುತ್ತದೆ. ವಿದ್ಯಾರ್ಥಿಗಳಿಗೆ ಕಾಲೇಜಿನ ಆಡಳಿತ ಮಂಡಳಿ ಪ್ರಾಚಾರ್ಯರು ಹಾಗೂ ಬೋಧಕ, ಬೋಧಕೇತರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.