ಫೆ.28 ರಿಂದ ರಾಮಾಪೂರ ಬಸವೇಶ್ವರ ಜಾತ್ರಾ ಮಹೋತ್ಸವ

Ramapura Basaveshwar Jatra Mahotsav from 28th Feb

ಧಾರವಾಡ 27 : ತಾಲೂಕಿನ ರಾಮಾಪೂರ ಗ್ರಾಮದ ಶ್ರೀ ಬಸವೇಶ್ವರ (ನಂದಿ ಬಸವಣ್ಣ) 27 ನೇ ವರ್ಷದ ಜಾತ್ರಾ ಮಹೋತ್ಸವವು ಫೆ.28 ರಿಂದ ಆರಂಭವಾಗಲಿದೆ. 

ಪ್ರತಿದಿನ ಬೆಳಗ್ಗೆ 5 ಗಂಟೆಗೆ ರುದ್ರಾಭಿಷೇಕ ಮತ್ತು ಇತರ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಪ್ರತಿದಿನ ರಾತ್ರಿ 6 ಕ್ಕೆ ಗಂದಿಗವಾಡ ರಾಜಗುರು ಹಿರೇಮಠದ ಶ್ರೀ ಮಲ್ಲಿಕಾರ್ಜುನ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಪ್ರವಚನ ನಡೆಯಲಿದೆ.ಫೆ. 28 ರಂದು ಬೆಳಗ್ಗೆ 5 ಕ್ಕೆ ರುದ್ರಾಭಿಷೇಕ ಮತ್ತು ರಥವನ್ನು ಹೊರಗೆ ತೆಗೆಯುವುದರೊಂದಿಗೆ ಜಾತ್ರಾ ಮಹೋತ್ಸವಕ್ಕೆ ಚಾಲನೆ ಸಿಗಲಿದೆ. ರಾತ್ರಿ 10 ಕ್ಕೆ ರಾಮಾಪೂರ ಸಂತ ಮಂಡಳಿಯಿಂದ ಹರಿ ಭಜನೆ ನಡೆಯಲಿದೆ. ಮಾ.1 ರಂದು ರಾತ್ರಿ 10 ಕ್ಕೆ ರಾಮಾಪೂರ ಗ್ರಾಮದ ಕಲಾವಿದರಿಂದ ಡೊಳ್ಳಿನ ಪದಗಳ ಗಾಯನ ನಡೆಯಲಿದೆ. ಮಾ.2 ರಂದು ರಾತ್ರಿ 10 ಕ್ಕೆ ರಾಮಾಪೂರ ಸಂತ ಮಂಡಳಿಯಿಂದ ಹರಿ ಭಜನೆ ನಡೆಯಲಿದೆ. ಮಾ.3 ರಂದು ಚಿಕ್ಕಮಲ್ಲಿಗವಾಡದ ಶ್ರೀ ಮಾರುತಿ ಭಜನಾ ಸಂಘ ಮತ್ತು ನಿಗದಿ ಗ್ರಾಮದ ಮಾರುತೇಶ್ವರ ಭಜನಾ ಸಂಘದಿಂದ ಶಿವ ಭಜನೆ ಹಾಗೂ ಜಾಗರಣೆ ನೆರವೇರಲಿದೆ.ಮಾ.4 ರಂದು ಬೆಳಗ್ಗೆ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಮಧ್ಯಾಹ್ನ 12.15 ಕ್ಕೆ ಸಾಮೂಹಿಕ ವಿವಾಹಗಳು ನಂತರ ಪ್ರಸಾದ ವಿತರಣೆ ನಡೆಯಲಿದೆ. ಅದೇ ದಿನ ಗ್ರಾಮದ ಎಲ್ಲ ದೇವರುಗಳಿಗೆ ಉಡಿ ತುಂಬುವುದು, ಸಾಯಂಕಾಲ 5 ಗಂಟೆಗೆ ವಿವಿಧ ವಾದ್ಯ ಮೇಳಗಳು ಮತ್ತು ಭಕ್ತರ ಸಂಭ್ರಮದೊಂದಿಗೆ ರಥೋತ್ಸವ ಜರುಗಲಿದೆ.  

ಮಾ.8 ರಂದು ಬೆಳಗ್ಗೆ 8 ಗಂಟೆಗೆ ಕಳಸಾವರೋಹಣದೊಂದಿಗೆ ಜಾತ್ರಾ ಮಹೋತ್ಸವ ಸಂಪನ್ನವಾಗಲಿದೆ. ಆದ್ದರಿಂದ ರಾಮಾಪೂರ ಹಾಗೂ ಸುತ್ತಲಿನ ಗ್ರಾಮಗಳ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಿ ಶ್ರೀ ಬಸವೇಶ್ವರ (ನಂದಿ ಬಸವಣ್ಣ) ಕೃಪೆಗೆ ಪಾತ್ರರಾಗಬೇಕು ಎಂದು ಬಸವೇಶ್ವರ ಟ್ರಸ್ಟ್‌ ಕಮೀಟಿ ಪ್ರಕಟಣೆಯಲ್ಲಿ ತಿಳಿಸಿದೆ.