ಲೋಕದರ್ಶನ ವರದಿ
ಶಿರಹಟ್ಟಿ 08: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ರಾಮಣ್ಣ ಡಂಬಳ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ರಮೇಶ ಶೇಖಪ್ಪನವರ ಘೋಶಿಸಿದರು.
ಒಟ್ಟು 13 ಸದಸ್ಯರನ್ನು ಹೊಂದಿರುವ ಸಂಘದಲ್ಲಿ 11 ಮತಗಳು ಚಲಾವಣೆಯಾಗಿದ್ದು ಅದರಲ್ಲಿ ರಾಮಣ್ಣ ಡಂಬಳ 09 ಮತಗಳನ್ನು ಪಡೆದಿದ್ದು, ಅವರ ಪ್ರತಿ ಸ್ಪಧರ್ಿ ಚೇನ್ನವಿರಪ್ಪ ಕಲ್ಯಾಣಿ 02 ಮತಗಳನ್ನು ಪಡೆದರು. ಇನ್ನು ಉಪಾಧ್ಯಕ್ಷರ ಸ್ಥಾನಕ್ಕೆ ಒಂದೆ ನಾಮ ಪತ್ರ ಸಲ್ಲಿಕೆಯಾದ ಕಾರಣ ನಾಮಪತ್ರ ಸಲ್ಲಿಸಿದ್ದ ಶೇಖಪ್ಪ ಶಿರಗೂರ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ನಂತರ ಆಯ್ಕೆಯಾದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಸಂಘದ ಸದಸ್ಯರು ಅಭಿನಂದಿಸಿದರು. ಈ ಸಂಧರ್ಭದಲ್ಲಿ ವಿಶ್ವನಾಥ ಕಪ್ಪತ್ತನವರ, ಸಂದೀಪ ಕಪ್ಪತ್ತನವರ, ಜಾನೂ ಲಮಾಣಿ, ತಿಪ್ಪಣ್ಣ ಕೊಂಚಿಗೇರಿ, ತಿಪ್ಪಣ್ಣ ಲಮಾಣಿ, ಸಂದೇಶ ಗಾಣಿಗೇರ, ಬಸಣ್ಣ, ಈರಣ್ಣ ಕೋಟಿ ಮುಂತಾದವರು ಇದ್ದರು.