ನವದೆಹಲಿ .23 ಇದೇ ತಿಂಗಳ 12ರಿಂದ ಮಹಾರಾಷ್ಟ್ರದಲ್ಲಿ ಜಾರಿಯಲ್ಲಿದ್ದ ರಾಷ್ಟ್ರಪತಿ ಆಡಳಿತವನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಶನಿವಾರ ಬೆಳಗ್ಗೆ ಹಿಂಪಡೆದಿದ್ದಾರೆ. ಸಂವಿಧಾನದ 356 ನೇ ವಿಧಿ (2) ರ ಷರತ್ತು (2) ನಡಿ ನೀಡಲ್ಪಟ್ಟ ಅಧಿಕಾರ ಚಲಾಯಿಸಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ನವೆಂಬರ್ 12 ರಂದು ಹೊರಡಿಸಿದ್ದ ಘೋಷಣೆಯನ್ನು ನವೆಂಬರ್ 23 ರಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಭಾರತೀಯ ಜನತಾ ಪಕ್ಷದ ದೇವೇಂದ್ರ ಫಡ್ನವೀಸ್ ಅವರು 19 ನೇ ಮುಖ್ಯಮಂತ್ರಿಯಾಗಿ, ಎನ್ಸಿಪಿ ಅಜಿತ್ ಪವಾರ್ ಅವರು ಉಪಮುಖ್ಯಮಂತ್ರಿ ಆಗಿ ಶನಿವಾರ ಬೆಳಿಗ್ಗೆ ಎರಡನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದ ಬೆನ್ನಲ್ಲೇ ಈ ಘೋಷಣೆ ಹೊರಬಿದ್ದಿದೆ. ರಾಜ್ಯಪಾಲ ಬಿ.ಎಸ್. ರಾಜ್ ಭವನದಲ್ಲಿ ಕೋಶಿಯಾರಿ ಬೆಳಗ್ಗೆ 8 ಗಂಟೆಗೆ ಪ್ರಮಾಣ ವಚನ ಬೋಧಿಸಿದ್ದಾರೆ.