ಲೋಕದರ್ಶನವರದಿ
ಹುಬ್ಬಳ್ಳಿ: ಮಾಜಿ ಲೋಕ ಸಭಾ ಸದಸ್ಯ ಪ್ರೊ ಐ ಜಿ ಸನದಿ ತಮ್ಮ ಕುಟುಂಬ ಸದಸ್ಯರ ಜೊತೆ ನಗರದಲ್ಲಿನ ಉಣಕಲ್ ಇದ್ಗಾ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು, ಪವಿತ್ರ ಈದ್-ಉಲ್-ಫಿತ್ರ (ರಮಜಾನ್) ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ತಮ್ಮ ಸಮುದಾಯದ ಇತರ ಸದಸ್ಯರ ಜೊತೆ ವಿಶ್ವ ಶಾಂತಿ, ಪ್ರೀತಿ ಹಾಗೂ ಭ್ರಾತೃತ್ವಕ್ಕಾಗಿ ಪ್ರಾಥರ್ಿಸಿ, ಜನರ ಜೊತೆ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ನಂತರ, ತಮ್ಮ ಬಂಧು, ಆಪ್ತೇಷ್ಟರನ್ನು ಮನೆಗೆ ಆಹ್ವಾನಿಸಿ ವಿಶಿಷ್ಟ, ವಿಶೇಷ ಬೋಜನವನ್ನು ನೀಡಿ ದೇವರ ಕೃಪೆಗೆ ಪಾತ್ರರಾದರು.
ಹಮೀದ್, ಝಾಕೀರ್, ಶಾಕೀರ್, ಅಕ್ಬರ್, ಹಜರತ್ ಅಲಿ ದೊಡಮನಿ, ಶೇಖ್, ಮುಲ್ಲಾ, ಪಠಾಣ, ರಾಜ ನಗರ ಹಾಗೂ ಉಣಕಲ್ ಮಸೀದಿಗಳ ಮುತುವಲಿಗಳು, ಜಮಾತೆಯ ಹಿರಿಯ ಹಾಗು ಕಿರಿಯ ಸದಸ್ಯರು ಅವರ ಜೊತೆ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.