ಮುಸಲ್ಮಾನ್ ಸಮಾಜದವರಿಗೆ ರಮಝಾನ್ ಬಹಳ ಪವಿತ್ರ ತಿಂಗಳು
Ramadan is a very holy month for the Muslim community
ಕೊಪ್ಪಳ 13: ಮುಸಲ್ಮಾನ್ ಸಮಾಜದವರಿಗೆ ರಮಝಾನ್ ಬಹಳ ಪವಿತ್ರ ತಿಂಗಳು ಎಂದು ನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರಸನ್ನ ಗಡಾದ್ ಹೇಳಿದರು. ದಿಡ್ಡಿಕೇರಾ ಬಡಾವಣೆಯಲ್ಲಿ ಮುಸ್ಲಿಮ್ ಪಂಚ್ ಕಮಿಟಿ ಹಾಗೂ ದಿಡ್ಡಿಕೇರಾ ಬಡಾವಣೆಯ ಜುಮ್ಮಾ ಮಸೀದಿ ನಿರ್ವಹಣಾ ಕಮಿಟಿ ಇವರ ಸಹಯೋಗದಲ್ಲಿ ಇಫ್ತಾರ್ ಸೌಹಾರ್ದ ಕೂಟ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪ್ರಸನ್ನ ಗಡಾದ್ ಮುಂದುವರೆದು ಮಾತನಾಡಿ ಈ ತಿಂಗಳಲ್ಲಿ ಪ್ರತಿದಿನ ಉಪವಾಸ ಮಾಡುವುದು. ಐದು ಸಲ ನಮಾಝ್ ಪ್ರಾರ್ಥನೆ ಮಾಡುತ್ತೀರಿ. ಜ್ಞಾನ ಮಾಡುತ್ತೀರಿ. ಖುರ್ ಆನ್ ಓದುತ್ತಿರಿ. ಒಳ್ಳೆ ಒಳ್ಳೆ ಗ್ರಂಥಗಳನ್ನು ಓದಿ ತಮಗೆ ಒಳ್ಳೆಯದನ್ನ ದೇವರಲ್ಲಿ ಭಕ್ತಿಪೂರ್ವಕವಾಗಿ ಕೇಳಿಕೊಳ್ಳುತ್ತೀರಿ. ಜೊತೆಗೆ ನಾಡಿಗೂ ಕೂಡ ಒಳ್ಳೆಯದು ಆಗಲಿ ಎಂದು ತಾವು ಬಯಸುತ್ತೀರಿ. ಕೊಪ್ಪಳದಲ್ಲಿ ಹಿಂದೂ ಮುಸ್ಲಿಮ್ ಹಿರಿಯರು ಅಣ್ಣ ತಮ್ಮರಂತೆ ಹಿಂದಿನಿಂದಲೂ ಕೂಡಿ ಬಂದಿರುವುದು ನಾವು ನೀವು ನೋಡಿದ್ದೇವೆ.ಮುಂದೆಯೂಕೂಡ ಇದೇ ರೀತಿ ಎಲ್ಲರೂ ಶಾಂತಿ ಸೌಹಾರ್ದತೆಯಿಂದ ನಡೆದುಕೊಳ್ಳೋಣ.
ತಾವು ಉಪವಾಸ ಮಾಡಿ ನಾಡಿಗಾಗಿ ಪ್ರಾರ್ಥನೆ ಮಾಡುತ್ತೀರಿ ತಮಗೂ ಕೂಡ ಅಲ್ಲಾಹನು ತಮ್ಮ ತಮ್ಮ ಬೇಡಿಕೆಗಳನ್ನು ಈಡೇರಿಸಲಿ ಎಂದು ಹಾರೈಸಿದರು. ಇನ್ನೊಬ್ಬ ಮುಖ್ಯ ಅತಿಥಿಗಳಾಗಿದ್ದ ಶ್ರೀ ಗವಿಸಿದ್ಧೇಶ್ವರ ಅರ್ಬನ್ ಕೋ - ಆಪರೇಟಿವ್ ಬ್ಯಾಂಕ್ ಲಿ. ಅಧ್ಯಕ್ಷ ಹಾಗೂ ನಗರ ಸಭೆ ಮಾಜಿ ಸದಸ್ಯ ರಾಜಶೇಖರ ಗೌಡ ಅಡೂರು ಮಾತನಾಡಿ ನಮ್ಮ ಮನೆಯಲ್ಲಿ ನಾವಷ್ಟೇ ಊಟ ಮಾಡಬಾರದು.ಎಲ್ಲಾ ಸಮಾಜದ ಬಡವರನ್ನು ಸೇರಿಸಿಕೊಂಡು ಇಫ್ತಾರ್ ಕೂಟ ಮಾಡುವುದರಿಂದ ಸೌಹಾರ್ದತೆ ಹೆಚ್ಚಾಗುವಂತಹ ಸಂದರ್ಭ ಇದು.ಕೊಪ್ಪಳ ಹಿಂದೂ ಮುಸ್ಲಿಮ್ ಸೌಹಾರ್ದತೆಗೆ ಹೆಸರಾಗಿದೆ.
ಎಲ್ಲಾ ಸಮಾಜದ ಎಲ್ಲ ಕಾರ್ಯಕ್ರಮಗಳಿಗೆ ಯಾವುದೇ ಭಿನ್ನಾಭಿಪ್ರಾಯ ಇಲ್ಲದೆ ಎಲ್ಲರೂ ಭಾಗವಹಿಸುತ್ತಾರೆ ಎಂದು ಹೇಳಿದರು. ದಿಡ್ಡಿಕೇರಾ ಬಡಾವಣೆಯ ಜುಮ್ಮಾ ಮಸೀದಿಯ ಪೇಷ್ ಇಮಾಮ್ ಹಾಫೀಝ್ ಮೊಹಮ್ಮದ್ ಮೋಹಿಯುದ್ದೀನ್ ಬಂಡೆ ಘರ್ ಪ್ರಾಸ್ತಾವಿಕವಾಗಿ ಮಾತನಾಡಿ ರಮಝಾನ್ ತಿಂಗಳವು ತಾಳ್ಮೆಯ ಸಂದೇಶ ಸಾರುತ್ತದೆ. ಇಫ್ತಾರ್ ಕೂಟ ಏರಿ್ಡಸುವ ಸಂದರ್ಭದಲ್ಲಿ ನಾವು ಅಷ್ಟೇ ಅಲ್ಲ ನೆರೆಹೊರೆಯವರಾಗಿರುವ ನಮ್ಮ ಕುಟುಂಬದ ಸದಸ್ಯರಂತಿರುವ ಹಿಂದೂ ಸಹೋದರರೊಂದಿಗೆ ಒಳಗೊಂಡು ಊಟ ಮಾಡುವ ಮೂಲಕ ಹಿಂದೂಸ್ಥಾನದಲ್ಲಿ ಎಲ್ಲಾ ಧರ್ಮಗಳ ಜನರು ಮಾನವೀಯತೆಯಿಂದ ಜೀವಿಸುತ್ತಿದ್ದೇವೆ.ಶಾಂತಿ ಸಹಬಾಳ್ವೆ ನಡೆಸುತ್ತಿದ್ದೇವೆ ಎಂಬ ಸಂದೇಶ ಜಗತ್ತಿಗೆ ರವಾನೆ ಮಾಡುವ ಉದ್ದೇಶದಿಂದ ಇಫ್ತಾರ್ ಕೂಟ ಏರಿ್ಡಸಲಾಗಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ನಗರ ಘಟಕದ ಅಧ್ಯಕ್ಷ ಎಮ್. ಪಾಶಾ ಕಾಟನ್ ಮಾತನಾಡಿದರು. ವೇದಿಕೆ ಮೇಲೆ ದಿಡ್ಡಿಕೇರಾ ಬಡಾವಣೆಯ ಹಿರಿಯ ಮುಖಂಡರಾದ ಇಬ್ರಾಹಿಮ್ ಸಾಬ್ ಅಡ್ಡವಾಲೆ. ಫುರ್ ಖಾನ್ ದಾಗದಾರಿ್ಸರಾಜ್ ಕೋಲ್ಕಾರ್. ನಗರಸಭೆ ಮಾಜಿ ಸದಸ್ಯ ಮಾನ್ವಿ ಪಾಶ.ಮುನೀರ್ ಸಿದ್ಧಿಕಿ.ಹಿರಿಯ ಮುಖಂಡ ಬಾಷು ಸಾಬ್ ಖತಿಬ್. ಶಿವಕುಮಾರ್ ಪೌಲಿ. ಗಿರಣಿ ಮೈನು.ನಜೀರ್ ಅಹ್ಮದ್ ನಿಶಾನಿ.ಬಾಬುಲಾಲ್ ದಫೆದಾರ್.ಗಫೂರ್ ಗಿರಣಿ. ಶಂಶುದ್ದೀನ್ ಪರದೆ ಘರ್. ರಫಿ ಕೊತ್ವಾಲ್.ಕರೀಮ್ ಎಮ್. ಕುರಿ.ಕೆಇಬಿ. ನಯೀಮ್ ದಾಗದಾರ್. ಮೈನು ಸಾಬ್ ಕುದುರಿ. ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕ ಬಸವರಾಜ್ ಶೀಲವಂತರ್. ಭ್ರಾತೃತ್ವ ಸಮಿತಿಯ ಸಂಚಾಲಕ ಎಸ್.ಎ.ಗಫಾರ್. ಮಖಬೂಲ್ ರಾಯಚೂರು. ಗಾಳೆಪ್ಪ ಮುಂಗೋಲಿ.ಸಲಿಮ್ ಅಕ್ಕಿ ಮುಂತಾದವರು ಉಪಸ್ಥಿತರಿದ್ದರು. ಜಾತ್ಯತೀತ ಜನತಾದಳದ ಕ್ರೀಡಾ ವಿಭಾಗದ ಜಿಲ್ಲಾ ಅಧ್ಯಕ್ಷ ಸೈಯ್ಯದ್ ಮಹೆಮೂದ ಹುಸೇನಿ(ಬಲ್ಲೆ) ಸ್ವಾಗತಿಸಿ ನಿರೂಪಿಸಿ ಕೊನೆಯಲ್ಲಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 