ರಂಜಾನ್ ಹಾಗೂ ಹೋಳಿ ಹಬ್ಬವನ್ನು ಶಾಂತ ರೀತಿಯಿಂದ ಆಚರಿಸಬೇಕು
ಬ್ಯಾಡಗಿ 12: ಹಿಂದೂ ಮತ್ತು ಮುಸ್ಲಿಂ ಬಾಂಧವರು ಸೌಹಾರ್ದದಿಂದ ಮುಂಬರುವ ರಂಜಾನ್ ಹಾಗೂ ಹೋಳಿ ಹಬ್ಬವನ್ನು ಶಾಂತ ರೀತಿಯಿಂದ ಆಚರಿಸಬೇಕು. ಎಲ್ಲರೂ ಕಾನೂನು ಸುವ್ಯವ್ಯಸ್ಥೆಗೆ ಧಕ್ಕೆ ಬಾರದಂತೆ ನಡೆದು ಕೊಳ್ಳಬೇಕೆಂದು ವೃತ್ತ ಆರಕ್ಷಕ ನೀರೀಕ್ಷಕ ಮಾಲತೇಶ ಲಂಬಿ ಹೇಳಿದರು.ಮಂಗಳವಾರ ಪೊಲೀಸ್ ಠಾಣೆಯ ಆವರಣದಲ್ಲಿ ಹೋಳಿ ಮತ್ತು ರಂಜಾನ್ ಹಬ್ಬದ ಶಾಂತಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ಪಟ್ಟಣದಲ್ಲಿ ಹಿಂದೂ-ಮುಸ್ಲಿಂ ಬಾಂಧವರಲ್ಲಿ ಶಾಂತಿ ಸೌಹಾರ್ದತ ನೆಲೆಸಿದ್ದು ಸಂತಸದ ವಿಷಯವಾಗಿದೆ ಮುಂದೆಯೂ ಇದೇ ರೀತಿ ಹಬ್ಬಗಳನ್ನು ಆಚರಿಸಿ ಎಂದು ಹೇಳಿದರು.ರೈತ ಮುಖಂಡ ಗಂಗಣ್ಣ ಎಲಿ ಮಾತನಾಡಿ, ಹೋಳಿ ಹಬ್ಬದ ಸಂದರ್ಭದಲ್ಲಿ ಕಾಮಣ್ಣನ ದಹನದ ವೇಳೆ ಮಕ್ಕಳ ಬಗ್ಗೆ ಜಾಗ್ರತೆ ಇರಲಿ. ಬಣ್ಣ ಆಡುವಾಗ ನೈಸರ್ಗಿಕ ಬಣ್ಣದ ಉಪಯೋಗ ಮಾಡಿ ಎಂದರು.ರಾತ್ರಿ 9 ಗಂಟೆಯವರೆಗೆ ಮಾತ್ರ ಹಲಗೆ ಬಾರಿಸಿ.ಮಾರ್ಚ ತಿಂಗಳಲ್ಲಿ ಮಕ್ಕಳ ಪರೀಕ್ಷೆ ಇರುವ ನಿಮಿತ್ತ ಸ್ಥಳೀಯ ಯುವಕರು ಹೋಳಿ ಹಬ್ಬದ ನಿಮಿತ್ತ ಹಲಗೆಯನ್ನು ರಾತ್ರಿ 9 ಗಂಟೆಯವರೆಗೆ ಬಾರಿಸಿ ಸಹಕರಿಸಿ ಯಾರಾದರೂ ನಿಯಮಕ್ಕೆ ಮೀರಿ ಹಲಗೆ ಬಾರಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.ಸಭೆಯನ್ನು ಉದ್ದೇಶಿಸಿ ಮುಖಂಡ ಸುರೇಶ್ ಆಸಾದಿ ಮಾತನಾಡಿದರು.ಯಮುನಕ್ಕನವರ ಸರ್.ಹಾಗೂ ಉಪಾಧ್ಯಕ್ಷ ಸುಭಾಷ್ ಮಾಳಗಿ.ಉಪಾಧ್ಯಕ್ಷ ಮಂಜೂರ ಅಲಿ ಹಕಿಂ ಮಾತನಾಡಿದರು. ಸಭೆಯಲ್ಲಿ ಪಿಎಸ್‌ಐ ಅರವಿಂದ್ ಸಿ.ಮಾಜಿ ಬಿಜೆಪಿ ತಾಲೂಕಾಧ್ಯಕ್ಷ ಸುರೇಶ್ ಅಸಾದಿ.ಮಾಜಿ ಅಧ್ಯಕ್ಷ ಯಮುನಕ್ಕನವರ. ಪುರಸಭೆ ಉಪಾಧ್ಯಕ್ಷ ಸುಭಾಷ್ ಮಾಳಗಿ. ಅಂಜುಮನ್ ಸಂಸ್ಥೆಯ ಅಧ್ಯಕ್ಷ ಮುಕ್ತಿಯಾರ ಮುಲ್ಲಾ. ಅಪರಾಧ ಪಿಎಸ್‌ಐ ನಿಂಗೇನ್ಹಳ್ಳಿ. ಅಂಜುಮನ್ ಸಂಸ್ಥೆಯ ಉಪಾಧ್ಯಕ್ಷ ಮಂಜೂರ್ ಅಲಿ ಹಕಿಂ. ಪ್ರವೀಣ್ ಯಾದವಾಡ. ಈಶ್ವರ ಮಠದ.ವಿನಾಯಕ ಕಂಬಳಿ. ಹಾಗೂ ಎಲ್ಲಾ ಸಮಾಜದ ಮುಖಂಡರು ಯುವಕರು . ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.