ಲೋಕದರ್ಶನ ವರದಿ
ಕೊಪ್ಪಳ 06: ಜಿಲ್ಲಾ ಕೇಂದ್ರ ಕೊಪ್ಪಳದಲ್ಲಿ ಲಾಕ್ ಡೌನ್ ಉಲ್ಲಂಘಿಸಿ ಹೊರಗಡೆ ಸುತ್ತಾಡುವ ಬೈಕ್ ಸವಾರರಿಗೆ ಸೋಮವಾರದಂದು ಮಂಗಳ ಮುಖಿಯರು ರಾಖಿ ಕಟ್ಟಿ ಜಾಗೃತಿ ಮೂಡಿಸಿ ಅನಾವಶ್ಯಕವಾಗಿ ಬೈಕ್ ಮೇಲೆ ತೆರಳುವ ಯುವಕರ ಹಣೆಗೆ ತಿಲಕವಿಟ್ಟು, ಕೈಗೆ ರಾಖಿ ಕಟ್ಟಿ ಹೊರಗೆ ಬರದಂತೆ ಮನವಿ ಮಾಡುತ್ತಿದ್ದಾರೆ.
ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದೆ. ಆದರೂ, ಜನರು ಸಾರ್ವಜನಿಕವಾಗಿ, ಗುಂಪಿನಲ್ಲಿ ಓಡಾಡುವುದನ್ನು ಬಿಟ್ಟಿಲ್ಲ. ಬೈಕ್ ಸವಾರರು ಅನಾವಶ್ಯಕವಾಗಿ ಬೀದಿಗಿಳಿಯುತ್ತಿದ್ದಾರೆ. ಬೈಕ್ ಮೇಲೆ ತೆರಳುವ ಯುವಕರಿಗೆ ಇದೀಗ ಮಂಗಳಮುಖಿಯರು, 'ಬೈಕ್ ನಲ್ಲಿ ಓಡಾಡಬೇಡಿ ಅಣ್ಣಾಂದಿರ, ಕೊರೊನಾ ವೈರಸ್ ಹರಡದಂತೆ ತಡೆಯಲು ಎಚ್ಚರ ವಹಿಸಿ' ಎಂದು ಮನವಿ ಮಾಡುತ್ತಾ ಜಾಗೃತಿ ಮೂಡಿಸುತ್ತಿದ್ದಾರೆ.
ನಗರದ ಅಶೋಕ ವೃತ್ತದಲ್ಲಿ ಮಂಗಳಮುಖಿಯರು ಬೈಕ್ ಸವಾರರಿಗೆ ಜಾಗೃತಿಯನ್ನು ಮೂಡಿಸುತ್ತಿದ್ದು, ಅನಾವಶ್ಯಕವಾಗಿ ಬೈಕ್ ಮೇಲೆ ತೆರಳುವ ಯುವಕರ ಹಣೆಗೆ ತಿಲಕವಿಟ್ಟು , ಕೈಗೆ ರಾಖಿ ಕಟ್ಟಿ ಹೊರಗೆ ಬರದಂತೆ ಮನವಿ ಮಾಡುತ್ತಿದ್ದಾರೆ.ಅಣ್ಣಾ, ಕೊರೊನಾ ವೈರಸ್ ಸೋಂಕು ಹರಡುತ್ತದೆ. ನೀವು ಮನೆಯಲ್ಲಿಯೇ ಕುಳಿತು ರೋಗ ಹರಡಂತೆ ತಡೆಗಟ್ಟಬೇಕು ಎಂದು ಬೈಕ್ ಸವಾರರಿಗೆ ಮಂಗಳ ಮುಖಿಯರು ಜಾಗೃತಿ ಮೂಡಿಸುತ್ತಿದ್ದಾರೆ.
ಈ ಸಂದರ್ಭದಲ್ಲಿ ಡಿವೈಎಸ್ಪಿ ವೆಂಕಟಪ್ಪ ನಾಯಕ, ಪಿಐ ಮೌನೇಶ್ವರ ಪಾಟೀಲ್ ಪೋಲೀಸ್ ಸಿಬ್ಬಂದಿಗಳು ಅವರಿಂದಲೂ ಸಹ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.