ಲೋಕದರ್ಶನ ವರದಿ
ಮಾಂಜರಿ 02: ಕನ್ನಡವೆಂದರೆ ಒಂದು ಪರಂಪರೆ, ಜಿವನ ವಿಧಾನ, ಸಂಸ್ಕೃತಿ ಎಂಬುದು ಒಂದೆ ಭಾಷೆಯಿಂದ ಬೆಳೆಯದು, ಒಂದು ಭಾಷೆಯಲ್ಲಿ ಹೋಸ-ಹೋಸ ಭಾಷಾ ಪದಗಳು ಬರುವುದು ಸ್ವಾಭಾವಿಕ, ಕನ್ನಡ ಪರಂಪರೆಯಂತಹ ಪರಂಪರೆ ಯಾವ ಭಾಷೆಗೂ ಇಲ್ಲಾ ಎಂದು ಧಾರವಾಡದ ಹಿರೀಯ ಸಾಹಿತಿ ಹಾಗೂ ಪತ್ರಕರ್ತ ರಂಜಾನ ದಗರ್ಾ ಹೇಳಿದರು.
ಅವರು ಗುರುವಾರ ಸಾಯಂಕಾಲ ಯಕ್ಸಂಬಾ ಪಟ್ಟಣದ ಗೆಳೆಯರ ಬಳಗ ಆವರಣದಲ್ಲಿ ಆಯೋಜಿಸಿದ್ದ 31 ನೇ ಕನ್ನಡೋತ್ಸವದ ಸಮಾರಂಭವನ್ನು ಉದ್ಗಾಟಿಸಿ ಮಾತನಾಡಿದರು. ಕನ್ನಡ ಒಂದು ಧರ್ಮ, ಸ್ವೀಕಾರದ ಭಾಷೆ ಮಾತ್ರ ಬೆಳೆಯಬಲ್ಲದು, ಕನ್ನಡ ಸಾಹಿತ್ಯ ಶಾಂತಿಯ ಸಾಹಿತ್ಯ, ಸಾಹಿತ್ಯ ವೈಕ್ತಿತ್ವವನ್ನು ರೂಪಿಸಬೇಕು ಎಂದು ಹೇಳಿದರು.
ಮುಖ್ಯ ಅತಿಥಗಳಾಗಿದ್ದ ಡಾ. ಸಿದ್ದನಗೌಡಾ ಪಾಟೀಲ ಮಾತನಾಡಿ ಸಂಸ್ಕೃತ ಭಾಷೆ. ಇಂಗ್ಲೀಷ ಭಾಷೆಗಳು ಕನ್ನಡಿಗರ ಮೂಲಭೂತ ರಚನಾ ವಿಧಾನವನ್ನು ಬದಲಿಸಿವೆ, ಕನ್ನಡ ನಾಡಿನಲ್ಲಿ ಇಂಗ್ಲೀಷ ಉದ್ಯೋಗದ ಭಾಷೆಯಾಗಿರಲಿ, ಇಂದು ಇಂಗ್ಲೀಷ ಭಾಷೆಗಳು ಬೆಳೆಯುತ್ತಿವೆ, ಇದರಿಂದ ಕನ್ನಡ ಭಾಷೆ ಮಾಯವಾಗುತ್ತಿವೆ, ಕನ್ನಡ ಭಾಷೆಗೆ ಉದ್ಯೋಗ ಕುಡುವ ದಿನಗಳು ಬರಲಿ, ಮತ್ತು ರೈತನ ರಕ್ಷಣೆ ಮಾಡುವ ದಿನಗಳು ಬರಲಿ ಎಂದು ಹೇಳಿದರು.
ಸಮಾರಂಭದ ದಿವ್ಯಸಾನಿಧ್ಯವಹಿಸಿದ ತುಮಕೂರಿನ ಡಾ. ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಜಿಗಳು ಮಾತನಾಡಿ, ಒತ್ತುವರಿಗೆ ವಸ್ತುವಾಗಿ ಬಿಡುವ ಸ್ವಭಾವ ನಮ್ಮದಾಗಬಾರದು, ಪುಣ್ಯಕೋಟಿ ಕನ್ನಡಿಗರು ಒತ್ತುವರಿಗೆ ಇಡಾಗುವರು, ಇಂದು ಸತ್ಯ ಮತ್ತು ಮೌಲ್ಯಗಳು ಅಪಹಾಸ್ಯದ ಪದಗಳಾಗಿವೆ, ಪ್ರಾಮಾಣಿಕತೆ ಚಲಾವಣೆಯಲ್ಲಿಲ್ಲ ಎಂದು ಹೇಳಿದರು.
ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು, ನೀಖಿಲ ಕಮತಿ ಅಧ್ಯಕ್ಷತೆ ವಹಿಸಿದ್ದರು, ಆಶ್ವಿಣಿ ದೇವೃಷಿ, ಎಸ್.ಜಿ,ವಿದ್ಯಾಸಂಸ್ಥೆ ಮುಂತಾದವರನ್ನು ಸತ್ಕರಿಸಿದರು. ಕನ್ನಡೋತ್ಸವದ ಅಂಗವಾಗಿ ಎರ್ಪಡಿಸಿದ ಜಿಲ್ಲಾ ಮಟ್ಟದ ರಂಗೋಲಿ ಸ್ಪಧರ್ೆಯಲ್ಲಿನ ವಿಜೇತರಿಗೆ ಬಹುಮಾನ ವಿತರಿಸಿದರು.
ಡಾ. ಪಿ,ಜಿ, ಕೆಂಪನ್ನವರ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಆರ್ ದಳವಾಯಿ ಮತ್ತು ಆರ್.ಎಸ್.ಉಮರಾಣಿ ನಿರೂಪಿಸಿದರು. ಎಮ್.ವ್ಹಿ.ಮಾಳಗೆ ವಂದಿಸಿದರು. ಯಕ್ಸಂಬಾ ಹಾಗೂ ಸುತ್ತಮುತ್ತಲಿನ ಕನ್ನಡಾಭಿಮಾನಿಗಳು, ಬಳಗದ ಸದಸ್ಯರು, ಗ್ರಾಮಸ್ಥರು, ಮಹಿಳೆಯರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.