ಲೋಕದರ್ಶನ ವರದಿ
ಕೊಪ್ಪಳ 21: ನಗರದ ಸ್ಟಾರ್ ಚಿತ್ರಮಂದಿರದ ಹಿರಿಯ ಸಿನಿಮಾ ಪ್ರದರ್ಶಕ ಸೈಯ್ಯದ್ ಜಹೀರ್ ಹುಸೇನ ಹಮ್ಜವಿಗೆ ಅವರ ಐದು ದಶಕದ ಸುಧೀರ್ಘ ಚಲನಚಿತ್ರ ಪ್ರದರ್ಶನ ಕ್ಷೇತ್ರದ ಸೇವೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಇತ್ತೀಚಿಗೆ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದ ಹಿಂಬಾಗದಲ್ಲಿರುವ ಬಯಲು ರಂಗ ಮಂದಿರದಲ್ಲಿ ಕನರ್ಾಟಕ ಜಾಗೃತಿ ವೇದಿಕೆ ಹಾಗೂ ಪತ್ರಕರ್ತರ ವೇದಿಕೆ ವತಿಯಿಂದ ಜರುಗಿದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸೈಯ್ಯದ್ ಜಹೀರ್ ಹುಸೇನ ಹಮ್ಜವಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಶ್ರೀಗಳು, ಚಚರ್ಿನ ಫಾದರ್ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ಪತ್ರಕರ್ತರು ಪಾಲ್ಗೊಂಡಿದ್ದು, ವಿ.ಕೃಷ್ಣರವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಸಂಘಟಕರಾದ ಮಹೇಶಬಾಬು ಸುವರ್ೆ, ಹಿರಿಯ ಪತ್ರಕರ್ತ ವಿ.ಆರ್.ತಾಳಿಕೋಟಿ, ಎಂ. ಸಾದಿಕ್ ಅಲಿ ಅನೇಕರು ಪಾಲ್ಗೊಂಡಿದ್ದರು.