ರಾಜ್ಯೋತ್ಸವ ಪ್ರಶಸ್ತಿ ಪುರಷ್ಕೃತ ವಿಶ್ವನಾಥ ಮಹಾಪುರುಷರ ಸಂಗೀತ ಸೇವೆ ಸ್ಮರಣಿಯವಾಗಿದೆ: ಚರಂತಿಮಠ

ಬಾಗಲಕೋಟೆ 04:  ಸ್ಥಳೀಯ ಬಾಗಲಕೋಟಂ ವಿದ್ಯಾಗಿರಿಯಲ್ಲಿರುವ ಗುರುಗಂಗಾಧರಸ್ವಾಮಿ ಸಂಗೀತ ವಿದ್ಯಾಲಯದ ಮೂಲಕ ನಾಡಿನ ಸಾಂಸ್ಕೃತಿಕ ಲೋಕವನ್ನು ಶ್ರೀಮಂತಗೊಳಿಸುವ ನಿಟ್ಟಿನಲ್ಲಿ ವಿಶ್ವನಾಥಸ್ವಾಮಿ ಮಹಾಪುರುಷರ ಸಂಗೀತ ಸೇವೆಯು ಸ್ಮರಣಿಯವಾಗಿದೆ ಎಂದು ಬಿ.ವ್ಹಿ.ವ್ಹಿ ಸಂಘದ ಕಾಯರ್ಾಧ್ಯಕ್ಷರು ಹಾಗೂ ಶಾಸಕರಾದ ಡಾ.ವೀರಣ್ಣ ಚರಂತಿಮಠ ಅವರು ವಿಶ್ವನಾಥಸ್ವಾಮಿ ಮಹಾಪುರುಷರ 75 ನೇ ವರ್ಷದ 'ಅಮೃತ ಮಹೋತ್ಸವ' ಸಮಾರಂಭದಲ್ಲಿ ಪಾಲ್ಗೊಂಡು  ವಿಶ್ವನಾಥಸ್ವಾಮಿ ಮಹಾಪುರುಷರ ದಂಪತಿಗಳಿಗೆ ಗೌರವ ಸನ್ಮಾನ ಮಾಡಿ ಮಾತನಾಡಿದರು. 

         ಈ ಸಮಾರಂಭದಲ್ಲಿ ಹಿರಿಯ ವಿದ್ವಾಂಸರಾದ ಡಾ.ಬಿ.ಕೆ.ಹಿರೇಮಠ ಅವರು ಅತಿಥಿಗಳ ನುಡಿಗಳನ್ನು ಹೇಳುತ್ತಾ ನಮ್ಮ ಬಾಗಲಕೋಟಯ ಪರಿಸರದ ಸಂಗೀತವನ್ನು ಕನ್ನಡ ನಾಡಿಗೆ ಅಪರ್ಿಸಿದ ಹೆಗ್ಗಳಿಕೆ ಸಿತಾರವಾದಕ ವಿಶ್ವನಾಥಸ್ವಾಮಿ ಮಹಾಪುರುಷರಿಗೆ ಸಲ್ಲುತ್ತದೆ ಎಂದು ಹೇಳಿದರು. ಇನ್ನೊರ್ವ ಅತಿಥಿಗಳಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಸ್ತಪ್ರತಿ ವಿಭಾಗದ ಮುಖ್ಯಸ್ಥರಾದ ಡಾ.ವೀರೇಶ ಬಡಗೇರ ಅವರು ಮಾತನಾಡಿ ಕನ್ನಡ ಸಂಸ್ಕೃತಿಯಲ್ಲಿರುವ ಸಂಗೀತದ ಪ್ರೀತಿ, ವಾತ್ಸಲ್ಯವೇ ನಮ್ಮ ಹೃದಯವನ್ನು ವಿಶಾಲಗೊಳಿಸುವುದು. ಇಂತಹ ಪ್ರೀತಿಯ ಸಂಗೀತ ಸೇವೆ ಮಾಡುತ್ತಾ ಅದನ್ನು ಸಮಾಜಕ್ಕೆ ಹಂಚುತ್ತಿರುವ ವಿಶ್ವನಾಥಸ್ವಾಮಿ ಮಹಾಪುರುಷರ ಕೊಡುಗೆ ಅಪಾರವಿದೆ ಎಂದು ತಿಳಿಸಿದರು. ಇತಿಹಾಸ ತಜ್ಞರಾದ ಡಾ.ಶಿಲಾಕಾಂತ ಪತ್ತಾರ ಅವರು, ಆರ್.ಡಿ.ಕಡ್ಲಿಕೊಪ್ಪ ಅವರು ಅತಿಥಿಗಳಾಗಿ ಪಾಲ್ಗೊಂಡು ಅಮೃತ ಮಹೋತ್ಸವ ಕುರಿತು ಮಾತನಾಡಿದರು. ಸಮಾರಂಭದಲ್ಲಿ ಬಿ.ವ್ಹಿ.ವ್ಹಿ.ಸಂಘದ ಆಡಳಿತಾಧಿಕಾರಿಗಳಾದ ಎನ್.ಜಿ.ಕರೂರು, ಜಿಲ್ಲಾ ಪಂಚಾಯತ ಸದಸ್ಯರಾದ ಹೊವಪ್ಪ ರಾಠೋಡ, ಆಮಂತ್ರಿತ ಸರ್ವ ಸದಸ್ಯರು ಉಪಸ್ಥಿತರಿದ್ದರು. 

      ಪರಮ ಪೂಜ್ಯ ಶ್ರೀ ಮ.ನಿ.ಪ್ರ ಜಗದ್ಗುರು ಪಂಚಮಶಿವಲಿಂಗೇಶ್ವರ ಮಹಾಸ್ವಾಮಿಗಳು ವಿಶ್ವನಾಥಸ್ವಾಮಿ ಮಹಾಪುರುಷರ 75 ನೇ ಅಮೃತ ಮಹೋತ್ಸವವನ್ನು ಜ್ಞಾನ ಜ್ಯೋತಿ ಬೆಳಗಿಸುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಿ, ಆಶೀರ್ವಚನ ಮಾಡಿದರು. ಈ ಮಹೋತ್ಸವದಲ್ಲಿ ನಾಡಿನ ವಿವಿಧ ಮಠಾಧೀಶರು ಪಾಲ್ಗೊಂಡು ಆಶೀರ್ವಚನ ನೀಡಿವ ಮೂಲಕ ಎಲ್ಲರೂ ಸಾಮಾಜಿಕ ಸೇವೆ ಅಥರ್ೈಸಿಕೊಳ್ಳಬೇಕೆಂದು ಹೇಳಿದರು.  

     ಅಮೃತ ಮಹೋತ್ಸವದಲ್ಲಿ ಬಾಗಲಕೋಟ ಜಿಲ್ಲೆಯಲ್ಲಿ ವಿಶೇಷ ಸಾಧನೆ ಮಾಡಿರುವ ಮಾಜಿ ಸೈನಿಕರಿಗೆ, ವಿಶ್ರಾಂತ ಶಾಲಾ ಶಿಕ್ಷಕರಿಗೆ, ನೇಗಿಲಯೋಗಿ ರೈತರಿಗೆ, ಅಂಗವಿಕಲರಿಗೆ, ಅಂಧಃ ಮಕ್ಕಳಿಗೆ, ಸಂಗೀತ ಸಾಧಕರಿಗೆ, ವಿಶೇಷ ಸಮಾಜ ಸೇವೆಕರಿಗೆ ಒಟ್ಟು 75 ಜನರಿಗೆ ಗೌರವ ಸನ್ಮಾನ ಮಾಡಲಾಯಿತು. ಹಾಗೂ ವಿಶ್ವನಾಥಸ್ವಾಮಿ ಮಹಾಪುರುಷ ಅವರಿಗೆ ಶಾಸಕರು, ಪೂಜ್ಯರು, ಭಕ್ತರ ಬಳಗದವರು, ಅಭಿಮಾನಿ ಶಿಷ್ಯರು ಸಮಸ್ತ ಆಮಂತ್ರಿತರು ಭಕ್ತಿ ಪೂರ್ವಕ ಗೌರವ ಸಲ್ಲಿಸಿದರು. 

   ಪ್ರೊ.ವಿ.ಎನ್.ಕಮ್ಮಾರ ಸ್ವಾಗತಿಸಿದರು, ಡಾ.ಸಿದ್ದರಾಮಯ್ಯ ಮಠಪತಿಯವರು ಪ್ರಾಸ್ತಾವಿಕ ನುಡಿ ಹೇಳಿದರು, ಡಾ.ಸಂತೋಷ ಕಾಳನ್ನವರ ವಿಶೇಷ ಗೌರವ ಸನ್ಮಾನ ಸಮಾರಂಭವನ್ನು ನಿರ್ವಹಿಸಿದರು, ಉಪನ್ಯಾಸಕ ಚಂದ್ರಶೇಖರ ಕಾಳನ್ನವರ ಹಾಗೂ ಗೌರಮ್ಮ ಕೆಂಗಲಗುತ್ತಿ ಕಾರ್ಯಕ್ರಮವನ್ನು ನಿರೂಪಿಸಿದರು. ಜಿ.ಎಂ ಅಗಳತಕಟ್ಟಿ ವಂದಿಸಿದರು.