ನದಿಯಲ್ಲಿ ಕೊಚ್ಚಿ ಹೋದ ಕುಟುಂಬಕ್ಕೆ ರಾಜು ಕಾಗೆ 10 ಲಕ್ಷ ಪರಿಹಾರ
Raju Kage gives 10 lakhs as compensation to family swept away in river
ನದಿಯಲ್ಲಿ ಕೊಚ್ಚಿ ಹೋದ ಕುಟುಂಬಕ್ಕೆ ರಾಜು ಕಾಗೆ 10 ಲಕ್ಷ ಪರಿಹಾರ
ಸಂಬರಗಿ 31: ಮೇ.27 ಮಂಗಳವಾರದಂದು ನಾಗನೂರ ಪಿ.ಎ ಗ್ರಾಮ ಸಂಜು ಕಾಂಬಳೆ ಇವರ ಎರಡು ಪುತ್ರರು ಅಗ್ರಾಣಿ ನದಿಯ ಪ್ರವಾಹದಲ್ಲಿ ಕೊಚ್ಚಿ ಹೋದ ಕುಟುಂಬಕ್ಕೆ ಶಾಸಕ ರಾಜು ಕಾಗೆ ಇವರು ಭೇಟಿ ನೀಡಿ ಸಾಂತ್ವನ ಹೇಳಿ ಸರ್ಕಾರದಿಂದ 10 ಲಕ್ಷರೂಪಾಯಿ ಪರಿಹಾರ ಧನ ನೀಡಿದರು. ಈ ವೇಳೆ ಶಾಸಕ ರಾಜು ಕಾಗೆ ಮಾತನಾಡಿಅಗ್ರಾಣಿ ನದಿಯಾಗಲಿ, ಕೃಷ್ಣಾ ನದಿಯಾಗಲಿ ಪ್ರವಾಹ ಬಂದ ನಂತರ ನೀರಿನಲ್ಲಿಯಾರೂ ಗಾಡಿಗಳ ಮುಖಾಂತರಗ್ರಾಮಕ್ಕೆ ಹೋಗುವ ದುಸ್ಸಾಹಸ ಮಾಡಬಾರದು, ಇಲ್ಲವಾದರೆಇಂತಹ ಅನಾಹುತಗಳಿಗೆ ನಾವೇ ದಾರಿ ಮಾಡಿಕೊಟ್ಟಂತಾಗುತ್ತದೆ.ರೈತರು ಮಳೆಗಾಲದಲ್ಲಿ ಮುನ್ನೆಚ್ಚರಿಕೆ ವಹಿಸಬೇಕು. ತಮ್ಮಚಿಕ್ಕ ಮಕ್ಕಳನ್ನು ನದಿಯಕಡೆಗೆಕರೆದುಕೊಂಡು ಹೋಗಬಾರದು ಎಂಬ ಮುನ್ನೆಚ್ಚರಿಕೆಯನ್ನು ವಹಿಸಬೇಕು ಎಂದು ಹೇಳಿದರು. ಈ ವೇಳೆ ಸಂಬರಗಿಗ್ರಾಮ ಪಂಚಾಯತಅಧ್ಯಕ್ಷರಾದ ಶ್ರೀಮತಿ ಮೀನಾಕ್ಷಿ ಮಲ್ಲಿಕಾರ್ಜುನ ದಳವಾಯಿ, ಉಪಾಧ್ಯಕ್ಷರಾದ ಅಶೋಕ ಬಾಬು ಮಾನೆ, ಶ್ರೀಶೈಲ ಪಾಟೀಲ, ಪಿ.ಕೆ.ಪಿ.ಎಸ್‌ಉಪಾಧ್ಯಕ್ಷಅಣ್ಣಪ್ಪ ಮಿಸಾಳ, ರಮೇಶ ಪಾಟೀಲ, ಅಮೃತ ಮಿಸಾಳ, ಅಬ್ದುಲ್‌ಮುಲ್ಲಾ, ತಹಶೀಲ್ದಾರ ಸಿದರಾಯ ಬೋಸಗೆ, ಉಪತಹಶೀಲ್ದಾರ ಅಮೀತ ಡವಳೇಶ್ವರ,ಜಿಲ್ಲಾ ಪಂಚಾಯತಅಭಿಯಂತರರಾದ ವೀರಣ್ಣ ವಾಲಿ,ಕಂದಾಯ ನಿರಿಕ್ಷಕರು ವಿನೋದಕದಮ್, ಮಹೇಳ ಕಾಂಬಳೆ, ಅರವಿಂದ ಕಾಂಬಳೆ, ಪಾಂಡುರಂಗ ಕಾಂಬಳೆ ಇನ್ನೀತರ ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 