ಪೊಲೀಸ್ ಅಧಿಕಾರಿಯ ಪಾತ್ರ ಇಷ್ಟಪಡುವುದಿಲ್ಲ: ರಜನಿ

ಮುಂಬೈ, ಡಿ.17 ಪೊಲೀಸ್ ಅಧಿಕಾರಿಯ ಪಾತ್ರವನ್ನು ಮಾಡಲು ಇಷ್ಟಪಡುವುದಿಲ್ಲ ಎಂದು ದಕ್ಷಿಣ ಭಾರತದ ನಟ ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದಾರೆ.  ರಜನಿಕಾಂತ್ ತಮ್ಮ ಮುಂಬರುವ ಚಿತ್ರ ದರ್ಬಾರ್ ನಲ್ಲಿ ವಿಭಿನ್ನ ರೀತಿಯ ಪೊಲೀಸ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. "ನಾನು ಪೊಲೀಸ್ ಪಾತ್ರವನ್ನು ನಿರ್ವಹಿಸಲು ಇಷ್ಟಪಡುವುದಿಲ್ಲ. ಏಕೆಂದರೆ ಪೊಲೀಸರ ಪಾತ್ರವು ಕರ್ತವ್ಯ ಮತ್ತು ಗಂಭೀರತೆ ಹೊಂದಿದ್ದು. ಅಲ್ಲದೆ ಅಪರಾಧಿಯ ಹಿಂದೆ ಓಡಬೇಕು, ಇಂತಹ ಪಾತ್ರಗಳು ನನಗೆ ಇಷ್ಟವಿಲ್ಲ, ಮನರಂಜನೆ ನೀಡು ಪಾತ್ರಗಳನ್ನು ನಾನು ಇಷ್ಟಪಡುತ್ತೇನೆ. ನಿರ್ದೇಶಕ ಮುರುಗದಾಸ್ ಬಹಳ ಒಳ್ಳೆಯ ವಿಷಯದೊಂದಿಗೆ ನನ್ನ ಬಳಿಗೆ ಬಂದರು, ಹಾಗಾಗಿ ನಾನು ಈ ಚಿತ್ರ ಮಾಡಿದ್ದೇನೆ” ಎಂದಿದ್ದಾರೆ.   “ಜಾನಿ ಜಾನಿ ಜನಾರ್ದನ್ ಚಿತ್ರವು ದಕ್ಷಿಣ ಚಿತ್ರ ಮುಂಡ್ರು ಮುಗಂ ಚಿತ್ರದ ಹಿಂದಿ ರಿಮೇಕ್ ಆಗಿದೆ. ಮುಂಡ್ರು ಮುಗಂ ಚಿತ್ರದಲ್ಲಿ ಆ ಪೋಲೀಸ್ ಪಾತ್ರ ಅಲೆಕ್ಸ್ ಬಹಳ ಪ್ರಸಿದ್ಧಿಯಾಯಿತು. ಈ ಚಿತ್ರದಲ್ಲಿನ ಆದಿತ್ಯ ಅರುಣಾಚಲಂ  ಪೊಲೀಸ್ ಅಧಿಕಾರಿ ತುಂಬಾ ಪಾತ್ರ ಭಿನ್ನ, ಸಾಮಾನ್ಯ ಪೊಲೀಸರಂತೆ ಅಲ್ಲ. ಇದನ್ನು ನೀವು ಚಿತ್ರದಲ್ಲಿ ನೋಡುತ್ತೀರಿ ಎಂದಿದ್ದಾರೆ.   ಹಿಂದಿಯಲ್ಲಿ ಸಾಕಷ್ಟು ನಾಯಕರು ಪೊಲೀ‍ಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನೀವು ಪೊಲೀಸರ ತಲೈವಾನಾ ಎಂದು ಕೇಳಿದ  ಪ್ರಶ್ನೆಗೆ ಉತ್ತರಿಸಿದ ರಜನಿಕಾಂತ್, "ಅದು ಹಾಗಲ್ಲ, ನಿಜವಾದ ತಲೈವಾ ಸಾರ್ವಜನಿಕರು, ಪ್ರೇಕ್ಷಕರು ಇದ್ದಾರೆ, ಎಲ್ಲರ ಚಿತ್ರ ನೋಡಿದ ನಂತರ ಯಾರು ಉತ್ತಮ ಪಾತ್ರವನ್ನು ನಿರ್ವಹಿಸಿದ್ದಾರೆ ಎಂಬುದನ್ನು ಪ್ರೇಕ್ಷಕರು ಮಾತ್ರ ನಿರ್ಧರಿಸುತ್ತಾರೆ. ಅದೇ ಪ್ರೇಕ್ಷಕರು ನಿಜವಾದ ತಲೈವಾ​​” ಎಂದಿದ್ದಾರೆ. ‘ ದರ್ಬಾರ್ ’ಚಿತ್ರ 2020 ರ ಜನವರಿ 10 ರಂದು ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.