ಸೆ.22ರಂದು ಜಮ್ಮುವಿನಲ್ಲಿ 'ಜನ ಜಾಗರಣ್" ಸಮಾವೇಶದಲ್ಲಿ ರಾಜನಾಥ್ ಸಿಂಗ್ ಭಾಗಿ

ಜಮ್ಮು, ಸೆ 17     ರಕ್ಷಣಾ ಸಚಿವ ಮತ್ತು ಬಿಜೆಪಿಯ ಹಿರಿಯ ನಾಯಕ ರಾಜನಾಥ್ ಸಿಂಗ್ ಸೆಪ್ಟಂಬರ್ 22ರಂದು ಜಮ್ಮುವಿನಲ್ಲಿ ನಡೆಯುವ "ಜನ ಜಾಗರಣ್" ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. 

      ಸಮಾವೇಶದ ವೇಳೆ ಸಿಂಗ್ ಅವರು, ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ಮತ್ತು 35 ಎ ವಿಧಿಯನ್ನು ಇತ್ತೀಚೆಗೆ ಕೇಂದ್ರ ಸರ್ಕಾರ ರದ್ದುಪಡಿಸಿದ್ದರಿಂದ ಅಲ್ಲಿನ ಜನರಿಗೆ ಆಗುವ ಅನುಕೂಲಗಳ ಬಗ್ಗೆ ವಿವರ ನೀಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. 

      ಜಮ್ಮುವಿನಲ್ಲಿ, ತಾವಿ ನದಿಯ ದಡದಲ್ಲಿರುವ ಮಹಾರಾಜ ಹರಿ ಸಿಂಗ್ ಪಾರ್ಕ್ನ್ಲ್ಲಿ ಸಮಾವೇಶ ನಡೆಯಲಿದ್ದು, 370 ಮತ್ತು 35 ಎ ವಿಧಿಗಳನ್ನು ರದ್ದುಪಡಿಸಿದ್ದು ಮತ್ತು ಅದರ ಅನುಕೂಲಗಳ ಬಗ್ಗೆ ಸಿಂಗ್ ಬೆಳಕು ಚೆಲ್ಲಲಿದ್ದಾರೆ 

      ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370 ಮತ್ತು 35 ಎ ವಿಧಿಯನ್ನು ರದ್ದುಪಡಿಸಿದ್ದರಿಂದ ಆಗುವ ಅನುಕೂಲಗಳ ಬಗ್ಗೆ ತಿಳಿಸಲು ಬಿಜೆಪಿ ದೇಶಾದ್ಯಂತ 400ಕ್ಕೂ ಅಧಿಕ ಸಮಾವೇಶಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಿದೆ.