ರಾಜನಾಥ್ ಸಿಂಗ್ ಲೋಕಸಭೆಯ ಉಪನಾಯಕ, ಮೇಲ್ಮನೆಯಲ್ಲಿ ಗೆಹ್ಲೋಟ್ ಆಡಳಿತ ಪಕ್ಷದ ನಾಯಕ

ನವದೆಹಲಿ, ಜೂನ್ 12: ನೂತನವಾಗಿ ರಚನೆಯಾಗಿರುವ 17ನೇ ಲೋಕಸಭೆಯಲ್ಲಿ ಹಿರಿಯ ಸಂಸದೀಯ ಪಟು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆಡಳಿತ ಪಕ್ಷದ ಉಪನಾಯಕರಾಗಲಿದ್ದು, ರಾಜ್ಯಸಭೆಯಲ್ಲಿ  ರೈಲ್ವೆ ಸಚಿವ ಪಿಯೂಷ್ ಗೋಯಲ್  ಆಡಳಿತ ಪಕ್ಷದ ಹೊಸ ಉಪನಾಯಕರಾಗಲಿದ್ದಾರೆ. 

ರಾಜ್ಯಸಭೆಯಲ್ಲಿ  ಹಿರಿಯ ಸದಸ್ಯ ಅರುಣ್ ಜೇಟ್ಲಿ ಬದಲಿಗೆ ಬಿಜೆಪಿಯ ದಲಿತ ಮುಖ ಹಾಗೂ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವ  ತಾವರ್ ಚಂದ್ ಗೆಹ್ಲೋಟ್  ಆಡಳಿತ ಪಕ್ಷದ ನಾಯಕರನ್ನಾಗಿ ನೇಮಿಸಲಾಗಿದೆ.  ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ, ಸರ್ಕಾರಿ  ಮುಖ್ಯ ಸಚೇತಕರಾಗಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ 

ಪ್ರಧಾನಿ ನರೇಂದ್ರ ಮೋದಿ  ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ  ಗೃಹ ಸಚಿವ  ಅಮಿತ್ ಷಾ  ಅವರ ಸೂಚನೆಯಂತೆ, ಬಿಜೆಪಿ ಸಂಸದೀಯ ಪಕ್ಷದ ಕಾರ್ಯಕಾರಿ ಸಮಿತಿಯನ್ನು ಪುನರ್ರಚಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಸಂಸದೀಯ ಪಕ್ಷದ ನಾಯಕರಾಗಿದ್ದಾರೆ. 

ಸಂಸದೀಯ ವ್ಯವಹಾರಗಳ ರಾಜ್ಯ ಖಾತೆ ಸಚಿವ ಅರ್ಜುನ  ರಾಮ್ ಮೇಘವಾಲ್ ಲೋಕಸಭೆಯಲ್ಲಿ ಸರ್ಕಾರಿ ಉಪ ಮುಖ್ಯ ಸಚೇತಕರಾಗಲಿದ್ದು, ರಾಜ್ಯಸಭೆಯಲ್ಲಿ ಈ ಹೊಣೆಯನ್ನು  ವಿದೇಶಾಂಗ ವ್ಯವಹಾರಗಳ ಖಾತೆ ರಾಜ್ಯಸಚಿವ ವಿ. ಮುರಳೀಧರನ್ ನಿಭಾಯಿಸಲಿದ್ದಾರೆ. ಲೋಕಸಭೆಯಲ್ಲಿ  ಪಕ್ಷದ ಮುಖ್ಯ ಸಚೇತಕರಾಗಿ  ಸಂಜಯ್ ಜೈಸ್ವಾಲ್, ರಾಜ್ಯಸಭೆಯಲ್ಲಿ  ನಾರಾಯಣ್ ಲಾಲ್ ಪಂಚಾರಿಯಾ  ಬಿಜೆಪಿ ಮುಖ್ಯ ಸಚೇತಕರಾಗಲಿದ್ದಾರೆ. 

ಲೋಕಸಭೆಯಲ್ಲಿ ಸಂಸದೀಯ ಕಾರ್ಯದರ್ಶಿಯಾಗಿ   ಗಣೇಶ್ ಸಿಂಗ್, ಮೇಲ್ಮನೆಯಲ್ಲಿ  ಭೂಪೇಂದ್ರ ಯಾದವ್  ಈ ಹೊಣೆ ನಿಭಾಯಿಸಲಿದ್ದಾರೆ. ಗೋಪಾಲ್  ಶೆಟ್ಟಿ ಅವರನ್ನು  ಖಜಾಂಚಿಯನ್ನಾಗಿ ನೇಮಿಸಲಾಗಿದೆ. 

ಲೋಕಸಭೆಯಲ್ಲಿ , ರಾಜ್ಯವಾರು  ಸಚೇತಕರ   ಹೆಸರುಗಳನ್ನು ಪ್ರಕಟಿಸಿದ್ದು,  ತ್ರಿಪುರಾ ಸಂಸದರಾದ ಪ್ರತಿಮಾ ಭೂಮಿಕ್ ( ಅರುಣಾಚಲ ಪ್ರದೇಶ, ಅಸ್ಸಾಂ, ಮಣಿಪುರ ಹಾಗೂ ತ್ರಿಪುರಾದ 10 ಸಂಸದರು); ದೆಹಲಿ ಪಶ್ಚಿಮ ಸಂಸದ ಪ್ರವೀಶ್ ವರ್ಮಾ ( ದೆಹಲಿ ಹಾಗೂ ಉತ್ತರಾಖಂಡದ  9 ಸಂಸದರು) ಕೀರ್ತಿಭಾಯಿ ಸೋಲಂಕಿ( ಗುಜರಾತ್ ನ  20 ಸಂಸದರು)   ಜುಗಲ್ ಕಿಶೋರ್ ಶರ್ಮ( ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಪಂಜಾಬ್ ಹಾಗೂ ಹರ್ಯಾಣದ  19 ಸಂಸದರು)  ನಳೀನ್ ಕುಮಾರ್ ಕಟೀಲ್( ಕರ್ನಾಟಕದ   21 ಸಂಸದರು)  ಸುಧೀರ್ ಗುಪ್ತ ( ಮಧ್ಯಪ್ರದೇಶದ 13 ಸಂಸದರು)  

ಸಂತೋಷ್ ಪಾಂಡೆ ಮಧ್ಯಪ್ರದೇಶ ಹಾಗೂ ಛತ್ತೀಸ್ ಘಡದ  15 ಸಂಸದರಿಗೆ ಸಚೇತಕರಾಗಿದ್ದಾರೆ.  

ಕಪಿಲ್ ಮೋರೇಶ್ವರ್ ಪಾಟೀಲ್ ( ಮಹಾರಾಷ್ಟ್ರದ  15 ಸಂಸದರು)  ಸುರೇಶ್ ಪೂಜಾರಿ ( ಒಡಿಶಾ, ಮಣಿಪುರ ಹಾಗೂ ತೆಲಂಗಾಣದ 9 ಸಂಸದರು)  ಕನಕಮಲ್ ಕ್ಷಾತ್ರ( ರಾಜಸ್ಥಾನದ 18 ಸಂಸದರು) ಉತ್ತರ ಪ್ರದೇಶದಲ್ಲಿ  ಅಜಯ್ ಮಿಶ್ರಾ  ( 16 ಸಂಸದರು)  ಭಾನು ಪ್ರತಾಪ್ ಸಿಂಗ್ ವರ್ಮಾ ( 15 ಸಂಸದರು)  ಪಂಕಜ್ ಚೌಧರಿ( 16 ಸಂಸದರು). ಉತ್ತರ ಮಾಲ್ಡಾ ಸಂಸದ ಕಖನ್ ಮುರ್ಮು ( ಪಶ್ಚಿಮ ಬಂಗಾಳದ 16 ಸಂಸದರು) ಲೋಕಸಭೆಯ ಮಹಿಳಾ ಸಂಸದರಾದ  ರಂಜನ್ ಬೆನ್ ಭಟ್, ಶೋಭಾ ಕರಂದ್ಲಾಜೆ ಹಾಗೂ ಲಾಕೆಟ್ ಚಟಜರ್ಿ ತಲಾ 12 ಸಂಸದರಿಗೆ  ಸಚೇತಕರಾಗಿರಲಿದ್ದಾರೆ. 

ರಾಜ್ಯಸಭೆಯಲ್ಲಿ, ಅಮರ್ ಶಂಕರ್ ಸಾಬ್ಲೆ, ಶಂಶೇರ್ ಸಿಂಗ್ ಮಾನಹಸ್, ಶಾವೆತ್ ಮಲಿಕ್, ಚುನ್ನಿಬಾಯಿ ಗೋಹೆಲ್, ಅಜಯ್ ಪ್ರತಾಪ್ ಸಿಂಗ್ ಹಾಗೂ ಡಾ. ಆಶೋಕ್ ಬಾಜಪೈ   ಪಕ್ಷದ ಸಚೇತಕರಾಗಲಿದ್ದಾರೆ. ಬಿಜೆಪಿ ಸಂಸದೀಯ ಪಕ್ಷದ ಕಾರ್ಯಕಾರಿ ಸಮಿತಿಯ ವಿಶೇಷ ಆಹ್ವಾನಿತರನ್ನಾಗಿ ಲೋಕಸಭೆಯಿಂದ  ನಿತಿನ್ ಗಡ್ಕರಿ, ರವಿಶಂಕರ್ ಪ್ರಸಾದ್, ಅರ್ಜುನ  ಮುಂಡಾ, ನರೇಂದ್ರ ಸಿಂಗ್ ತೋಮರ್, ಸ್ಮೃತಿ ಇರಾನಿ ಹಾಗೂ ಜುವಲ್ ಒರಾಮ್ ನೇಮಿಸಲಾಗಿದೆ.  

ರಾಜ್ಯಸಭೆಯಿಂದ  ಜೆಪಿ ನಡ್ಡಾ, ಓಂ ಪ್ರಕಾಶ್ ಮಾಥುರ್. ನಿರ್ಮಲಾ ಸೀತಾರಾಮನ್, ಧಮರ್ೆಂದ್ರ ಪ್ರಧಾನ್ ಹಾಗೂ ಪ್ರಕಾಶ್ ಜಾವ್ಡೇಕರ್   ವಿಶೇಷ ಆಹ್ವಾನಿತರಾಗಿದ್ದಾರೆ. ಪ್ರಧಾನ ಕಾರ್ಯದಶರ್ಿ ಹಾಗೂ ಪಶ್ಚಿಮಬಂಗಾಳ ಉಸ್ತುವಾರಿ ಕೈಲಾಶ್ ವಿಜಯವಗರ್ಿಯ ಅವರು ಬಿಜೆಪಿ ಸಂಸದೀಯ ಕಚೇರಿಯ ಪ್ರಭಾರಿಯಾಗಿದ್ದು, ಬಾಲಸುಬ್ರಮಣ್ಯಂ ಕಮರಸು ಸಂಸದೀಯ ಪಕ್ಷದ ಕಾಯರ್ಾಲಯ ಕಾರ್ಯದಶರ್ಿಯನ್ನಾಗಿ ನೇಮಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.