ನವದೆಹಲಿ, ಆಗಸ್ಟ್ 20 ಭಾರತರತ್ನ, ಮಾಜಿ ಪ್ರಧಾನಿ ರಾಜೀವ್ ಗಾಂಧಿ 75 ನೇ ಜನ್ಮ ದಿನದ ಅಂಗವಾಗಿ ದೇಶ ಇಂದು ಅವರಿಗೆ ಗೌರವ ನಮನ ಸಲ್ಲಿಸುತ್ತಿದೆ. ಈ ದಿನವನ್ನು ಸದ್ಭಾವನಾ ದಿನವನ್ನಾಗಿಯೂ ಆಚರಿಸಲಾಗುತ್ತಿದೆ. ಜನ್ಮದಿನದ ಗೌರವಾರ್ಥ ಪ್ರಧಾನಿ ನರೇಂದ್ರ ಮೋದಿ, ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಮೊದಲಾವರು ಮಂಗಳವಾರ ಗೌರವ ನಮನ ಸಲ್ಲಿಸಿದರು. ಕಾಂಗ್ರೆಸ್ ನಾಯಕರಾದ, ಡಾ.ಮನಮೋಹನ್ ಸಿಂಗ್, ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಅವರ ಪುತ್ರರಾದ ರಾಹುಲ್, ಪ್ರಿಯಾಂಕಾ ಮತ್ತು ಇತರೆ ಪಕ್ಷದ ನಾಯಕರು ಈ ಸಂದರ್ಭದಲ್ಲಿ ರಾಜೀವ್ ಅವರನ್ನು ಸ್ಮರಿಸಿದ್ದಾರೆ. ರಾಜೀವ್ ಗಾಂಧಿ ಅವರ ಜನ್ಮ ದಿನಾಚರಣೆಯಂದು ಅವರಿಗೆ ಗೌರವ ಸಲ್ಲಿಸುತ್ತೇವೆ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಪ್ರಣಬ್ ಮುಖರ್ಜಿ, ಡಾ.ಹಮೀದ್ ಅನ್ಸಾರಿ, ಡಾ. ಮನಮೋಹನ್ ಸಿಂಗ್, ರಾಹುಲ್, ಪ್ರಿಯಾಂಕಾ ಮತ್ತು ಇತರರು ವೀರಭೂಮಿಗೆ ತೆರಳಿ, ರಾಜೀವ್ ಗಾಂಧಿಯವರ ಸ್ಮಾರಕಕ್ಕೆ ಗೌರವ ಸಲ್ಲಿಸಿದರು. ಭಾರತ ರತ್ನ, ರಾಜೀವ್ ಗಾಂಧಿಯವರ ಪತ್ನಿ ಸೊನಿಯಾ ಮಕ್ಕಳು ಮತ್ತು ಅಳಿಯ ರಾಬರ್ಟ್ ವಾದ್ರಾ ಅವರೊಂದಿಗೆ ತೆರಳಿ ಸ್ಮಾರಕಕ್ಕೆ ಹೂಗುಚ್ಚ ಅರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದರು. 1944 ರ ಆಗಸ್ಟ್ 20 ರಂದು ಜನಿಸಿದ ರಾಜೀವ್ ಗಾಂಧಿ ಭಾರತದ ಆರನೇ ಮತ್ತು ಕಿರಿಯ ಪ್ರಧಾನ ಮಂತ್ರಿಯಾಗಿದ್ದರು. 40 ನೇ ವಯಸ್ಸಿನಲ್ಲಿ, ತಾಯಿ, ಇಂದಿರಾ ಗಾಂಧಿಯವರನ್ನು ಅಂಗರಕ್ಷಕರು ಹತ್ಯೆ ಮಾಡಿದ ನಂತರ 1984 ರಲ್ಲಿ ರಾಜೀವ್ ಪ್ರಧಾನಿಯಾಗಿದ್ದರು ಮೇ 21, 1991 ರಂದು ಚುನಾವಣಾ ಪ್ರಚಾರ ಸಮಯದಲ್ಲಿ ಅವರನ್ನು ಎಲ್ ಟಿಟಿಈ ಉಗ್ರರು ತಮಿಳುನಾಡಿನ ಶ್ರೀ ಪೆರಂಬದೂರಿನಲ್ಲಿ ಹತ್ಯೆ ಮಾಡಿದ್ದರು. ಹುಟ್ಟುಹಬ್ಬದ ಅಂಗವಾಗಿ ಕಾಂಗ್ರೆಸ್ ಪಕ್ಷ ದೇಶದ ಉದ್ದಗಲಕ್ಕೂ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದೆ.