ಕೊರೊನಾ ಸೋಂಕಿತರ ಮನೆ ಸುತ್ತ -ಮುತ್ತ ಕರ್ಪ್ಯೂ ವಿಧಿಸಿದ ರಾಜಸ್ಥಾನ ಸರ್ಕಾರ...!

ಜೈಪುರ, ರಾಜಸ್ಥಾನ, ಮಾ ೧೯, ಕುಟುಂಬವೊಂದರ  ಮೂವರು ಸದಸ್ಯರು   ಕೋವಿಡ್ -೧೯ ಸೋಂಕಿಗೆ  ಒಳಗಾಗಿರುವ  ಹಿನ್ನಲೆಯಲ್ಲಿ  ಎಚ್ಚೆತ್ತುಕೊಂಡಿರುವ   ರಾಜಸ್ಥಾನ ರಾಜ್ಯ  ಸರ್ಕಾರ   ಸೋಂಕಿತರು ವಾಸವಾಗಿದ್ದ   ಮನೆಯ  ಸುತ್ತಮುತ್ತ  ಒಂದು  ಕಿಲೋಮೀಟರ್  ವ್ಯಾಪ್ತಿಯಲ್ಲಿ  ಕರ್ಫ್ಯೂ  ಜಾರಿಗೊಳಿಸುವ ಸಂಚಲನ  ನಿರ್ಧಾರ  ಕೈಗೊಂಡಿದೆ. ರಾಜಸ್ಥಾನ  ರಾಜ್ಯದ  ಜುಂಜುನು ಜಿಲ್ಲೆಯಲ್ಲಿ   ಒಂದೇ ಕುಟುಂಬದ ಮೂವರು ಸದಸ್ಯರು  ಕೋವಿಡ್ -೧೯ ಸೋಂಕಿಗೆ ಒಳಗಾಗಿದ್ದು,   ಅವರನ್ನು ಈಗ  ಜೈಪುರ ನಗರದ   ಸವಾಯಿ   ಮಾನ್ ಸಿಂಗ್  ಆಸ್ಪತ್ರೆಯ ಐಸೊಲೇಷನ್   ವಾರ್ಡ್ ಗೆ  ಸ್ಥಳಾಂತರಿಸಿ ಚಿಕಿತ್ಸೆ ಕಲ್ಪಿಸಲಾಗುತ್ತಿದೆ.  ಮೂವರು ರೋಗಿಗಳಿದ್ದ  ಮನೆಯಿಂದ  ಒಂದು ಕಿಮೀ ವ್ಯಾಪ್ತಿಯಲ್ಲಿ  ಕರ್ಫ್ಯೂ ವಿಧಿಸಿ ರಾಜ್ಯ ಸರ್ಕಾರ  ಆದೇಶಿಸಿದೆ.ರಾಜಸ್ಥಾನದಲ್ಲಿ  ಕೊರೊನಾ ವೈರಸ್   ವ್ಯಾಪಿಸುತ್ತಿರುವ   ಹಿನ್ನೆಲೆಯಲ್ಲಿ ಸಿಆರ್‌ಪಿಸಿಯ ಸೆಕ್ಷನ್ ೧೪೪ ವಿಧಿಸಲು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನಿರ್ಧರಿಸಿದ್ದಾರೆ.    ರಾಜ್ಯದಲ್ಲಿ   ವೈರಸ್   ವ್ಯಾಪಿಸುವುದನ್ನು  ತಡೆಗಟ್ಟುಲು   ಕೈಗೊಳ್ಳಬೇಕಾದ  ಮುನ್ನೆಚ್ಚರಿಕೆ   ಕ್ರಮಗಳ  ಕುರಿತು  ಮುಖ್ಯಮಂತ್ರಿ  ಅಶೋಕ್ ಗೆಹ್ಲೋಟ್   ಅವರು  ಉನ್ನತ  ಅಧಿಕಾರಿಗಳೊಂದಿಗೆ  ಸಭೆ ನಡೆಸಿದರು. ಸೆಕ್ಷನ್ ೧೪೪ ಅನ್ನು ಮಾರ್ಚ್ ೩೧ ರವರೆಗೆ ಜಾರಿಗೆ ತರಲು ಮುಖ್ಯಮಂತ್ರಿ  ನಿರ್ಧರಿಸಿದ್ದಾರೆ. ರಾಜ್ಯದ ಗ್ರಂಥಾಲಯಗಳನ್ನು ಮುಚ್ಚಲು  ಸಹ ರಾಜಸ್ಥಾನ ಸರ್ಕಾರ ನಿರ್ಧರಿಸಿದೆ.