ಕೊಪ್ಪಳ 11: ಕೊಪ್ಪಳ ಜಿಲ್ಲಾ ಸರ್ಕಾರಿ ವಕೀಲರ ಹುದ್ದೆಗೆ ರಾಜಶೇಖರ ಬಸವರಾಜ ಗಣವಾರಿ ಅವರನ್ನು ನೇಮಿಸಿ ಕಾನೂನು ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿಗಳು ಅಧಿಸೂಚನೆ ಹೊರಡಿಸಿದ್ದಾರೆ.
ಕೊಪ್ಪಳ ಜಿಲ್ಲಾ ಸರ್ಕಾರಿ ವಕೀಲರಾಗಿದ್ದ ಆಸಿಫ್ ಅಲಿ ಅವರ ನೇಮಕಾತಿ ಅವಧಿಯು ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರದ ಕಾನೂನು ಅಧಿಕಾರಿಗಳ (ನೇಮಕಾರಿ ಮತ್ತು ಸೇವಾ ಷರತ್ತುಗಳು) ನಿಯಮಗಳು, 1977ರ ನಿಯಮ 26(3) ರನ್ವಯ ರಾಜಶೇಖರ ಬಸವರಾಜ ಗಣವಾರಿ ಅವರನ್ನು ಕೊಪ್ಪಳ ಜಿಲ್ಲಾ ಸಕರ್ಾರಿ ವಕೀಲರ ಹುದ್ದೆಗೆ (ಫೆ. 04) ನೇಮಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.