ಬೆಂಗಳೂರು, ಜ 19 : ಬಾಹುಬಲಿ ನಂತರ ರಾಜಮೌಳಿ ನಿರ್ದೇಶಿಸುತ್ತಿರುವ ಮತ್ತೊಂದು ಭಾರಿ ಬಜೆಟ್ ತೆಲುಗು ಸಿನಿಮಾ ಆರ್.ಆರ್.ಆರ್. ಈ ಸಿನಿಮಾದಲ್ಲಿ ಜೂನಿಯರ್ ಎನ್ಟಿಆರ್, ರಾಮ್ ಚರಣ್ ನಾಯಕರಾಗಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ಸಂಬಂಧಿಸಿದಂತೆ ಹಬ್ಬಿರುವ ಸುದ್ದಿಗಳಿಗೆ ನಾಯಕ ನಟ ಕಿಚ್ಚ ಸುದೀಪ್ ಭಾನುವಾರ ಪ್ರತಿಕ್ರಿಯಿಸಿದ್ದಾರೆ.
ರಾಜಮೌಳಿ ಸಿನಿಮಾದಲ್ಲಿ ಸುದೀಪ್ ಇರಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ಹಿನ್ನಲೆಯಲ್ಲಿ ಸುದೀಪ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.
ನಾನು ಆರ್ ಆರ್ ಆರ್ ಚಿತ್ರದಲ್ಲಿ ನಟಿಸುತ್ತಿದ್ದೇನೆ ಎಂಬ ಸುದ್ದಿ ಕೇಳಿ ಸಂತೋಷ ಪಡುತ್ತಿರುವವರಿಗೆ ಒಂದು ವಿಷಯ ತಿಳಿಸುತ್ತೇನೆ. ನೀವು ಕೇಳಿದ ಸುದ್ದಿ ನಿಜವಲ್ಲ. ಚಿತ್ರಕ್ಕೆ ಸಂಬಂಧಿಸಿದಂತೆ ಯಾರೊಬ್ಬರೂ ನನ್ನೊಂದಿಗೆ ಯಾವುದೇ ಸಂಪರ್ಕಮಾಡಿಲ್ಲ ಎಂದು ಸುದೀಪ್ ಸ್ಪಷ್ಟಪಡಿಸಿದ್ದಾರೆ.
ಈ ಹಿಂದೆ ರಾಜಮೌಳಿ ನಿದರ್ೆಶಿಸಿದ ಬಾಹುಬಲಿ ಚಿತ್ರ ಸುದೀಪ್ ನಟಿಸಿದ್ದರು ರಾಜಮೌಳಿ, ಬಾಹುಬಲಿ -2 ನಂತರ ಮಹತ್ವಾಕಾಂಕ್ಷೆಯ 'ಆರ್.ಆರ್.ಆರ್.' ಚಿತ್ರ ನಿದರ್ೆಶಿಸುತ್ತಿದ್ದಾರೆ. ಎನ್.ಟಿ.ಆರ್ ತೆಲಂಗಾಣ ಯೋಧ ಕೊಮರಾಮ್ ಭೀಮ್ ಮತ್ತು ಮಾನ್ಯಂ ನಾಯಕ ಅಲ್ಲೂರಿ ಸೀತರಾಮರಾಜು ಪಾತ್ರದಲ್ಲಿ ರಾಮ್ಚರಣ್ ನಟಿಸುತ್ತಿದ್ದಾರೆ. ಬಾಲಿವುಡ್ ನಟಿ ಆಲಿಯಾ ಭಟ್, ಚರಣ್ ಗೆ ಜೋಡಿಯಾಗಿ, ಒಲಿವಿಯಾ ಮೋರಿಸ್ ಎನ್ಟಿಆರ್ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ.