ರೈತ ಸಂಘ ಆಗ್ರಹ ಸರಿಯಾಗಿ ಕರೆಂಟ್ ನೀಡಿ, ಹಳೆಯ ವಿದ್ಯುತ್ ಕಂಬ್,ವಾಯರ್ ಬದಲಿಸಲು ಆಗ್ರಹ

ಹೆಸ್ಕಾಂ ಉಪ ವಿಭಾಗಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ

ರೈತ ಸಂಘ ಆಗ್ರಹ ಸರಿಯಾಗಿ ಕರೆಂಟ್ ನೀಡಿ, ಹಳೆಯ ವಿದ್ಯುತ್ ಕಂಬ್,ವಾಯರ್ ಬದಲಿಸಲು ಆಗ್ರಹ 

ವಿಜಯಪುರ 27 :  ವಿಜಯಪುರ ತಾಲೂಕಿನಲ್ಲಿ ಹಗಲು 7 ಘಂಟೆ ತ್ರೀ ಫೆಸ್ ಹಾಗೂ ರಾತ್ರಿ ಹೊತ್ತು ಸಿಂಗಲ್ ಫೆಸ್ ಕರೆಂಟ್ ಕೊಡಬೇಕು ಜೊತೆಗೆ ಹಲವಾರು ಕಡೆಗಳಲ್ಲಿ ಹಳೆಯ ಕಂಬ ಹಾಗೂ ವಾಯರ್‌ಗಳನ್ನು ಬದಲಾವಣೆ ಮಾಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಹೊನ್ನುಟಗಿ ಹೆಸ್ಕಾಂ ಉಪ ವಿಭಾಗಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಯಿತು 

ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷರಾದ ಸಂಗಮೇಶ ಸಗರ ಮಾತನಾಡುತ್ತಾ ಹುಬ್ಬಳ್ಳಿ ಹೆಸ್ಕಾಂ ವಿದ್ಯುತ್ ಇಲಾಖೆಯಿಂದ ಸರಿಯಾಗಿ ಕರೆಂಟ್ ಹಾಕದಿರುವ ಕಾರಣ ಆಕ್ಟೋಬರ್ 10 ರಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಹುಬ್ಬಳ್ಳಿ ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಹೋರಾಟ ಮಾಡಿರುವ ಪ್ರತಿಫಲವಾಗಿ ಹೆಸ್ಕಾಂ ಎಂ.ಡಿ ಅವರು ಇನ್ನುಮುಂದೆ ವಿದ್ಯುತ್ ಸಮಸ್ಯೆಯಾಗದಂತೆ  ಅಧಿಕೃತ ಆದೇಶ ಹೊರಡಿಸಿರುತ್ತಾರೆ. 

ಆದರೆ ಪ್ರಸ್ತುತ ದಿನಮಾನಗಳಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತಾ ಮನಸಾ ಇಚ್ಚೆ ವಿದ್ಯುತ್ ಹಾಕುತ್ತಿರುವುದರಿಂದ ರಾತ್ರಿ ವೇಳೆ ರೈತರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅನೇಕ ಸಮಸ್ಯೆಗಳಾಗುತ್ತಿವೆ, ಕೂಡಲೇ ಇದನ್ನು ಗಂಭಿರ ಎಂದು ಪರಿಗಣಿಸಿ ಆದೇಶದಂತೆ ಹಗಲು 7 ಘಂಟೆ ತ್ರೀಫೆಸ್, ರಾತ್ರಿ ಸಿಂಗಲ್ ಫೆಸ್  ವಿದ್ಯುತ್ ವಿತರಣೆ ಮಾಡಬೇಕು ಎಂದು ರೈತರು ಆಗ್ರಹಿಸಿದರು. 

ಅದೇರೀತಿ ಜಿಲ್ಲೆಯಲ್ಲಿ 1956 ರಿಂದ ಹಳೆಯ ವಿದ್ಯುತ್ ಕಂಬ ಹಾಗೂ ವಾಯರಗಳನ್ನು ಬದಲಾವಣೆ ಮಾಡಿರುವುದಿಲ್ಲ, ಈ ಕೂಡಲೇ ಬದಲಾವಣೆ ಮಾಡಬೇಕು ಎಂದರು. 

ಪ್ರತಿಭಟನಾ ಸ್ಥಳಕ್ಕೆ ಇ.ಇ. ಮಹಾಂತೇಶ ಚನ್ನಗೊಂಡ ಹಾಗೂ ಎ.ಇ.ಇ ಬಾಲಜೀ ಸಿಂಗ್ ಅವರು ಆಗಮಿಸಿ ಪ್ರತಿಭಟನಾ ಕಾರರನ್ನು ಸಮಾದಾನ ಪಡಿಸಲು ಹರಸಾಹಸ ಪಟ್ಟರು, ನಂತರ ಡಿಸೆಂಬರ್ 10 ರವರೆಗೆ ಸಮಯಾವಕಾಶ ಕೊಡಿ ಅಲ್ಲಿಯರೆಗೆ ಹೊನ್ನುಟಗಿ ವ್ಯಾಪ್ತಿಯ ಎಲ್ಲಾ ಸಮಸ್ಯೆಗಳನ್ನು ಬಗೆಹರೆಸುವುದಾಗಿ ಹೇಳಿದರು. ನಂತರ ರೈತ ಸಂಘದಿಂದ ಮನವಿ ಸಲ್ಲಿಸಿದರು. 

ಹೊನ್ನುಟಗಿ ವಿದ್ಯುತ್ ಇಲಾಖೆಯ ಮುಂದುಗಡೆ ಮುಖ್ಯದ್ವಾರಕ್ಕೆ ಬೀಗ ಜಡಿದು ಹಲವಾರು ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ಮುಂದುವರೆಸಿದ ರೈತರು, ಮದ್ಯಾಹ್ನ ಅಲ್ಲಿಯೇ ಸೌದೆ ಉರೆಸಿ ಅಡುಗೆ ಮಾಡಿ ಉಟ ಮಾಡಿದ ರೈತರು, ಸಮಸ್ಯೆ ಬಗೆಹರೆಯದಿದ್ದರೆ ಈ ಹೋರಾಟ ನಿರಂತರ ವಾಗುತ್ತದೆ ಎಂದು ಪಟ್ಟು ಹಿಡಿದ ರೈತರು, 

ಈ ವೇಳೆ ವಿಜಯಪುರ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಮನಗೌಡ ಪಾಟೀಲ, ತಾಲೂಕಾ ಅಧ್ಯಕ್ಷರಾದ ಮಹಾದೇವಪ್ಪ ತೇಲಿ, ಉಪಾಧ್ಯಕ್ಷರಾದ ಪ್ರಕಾಶ ತೇಲಿ, ಆಹೇರಿ ಅಧ್ಯಕ್ಷರಾದ ಆತ್ಮನಂದ ಭೈರೋಡಗಿ, ಜಯಸಿಂಗ ರಜಪೂತ, ಹಡಗಲಿ ಅಧ್ಯಕ್ಷರಾದ ಅಶೋಕ ತಳವಾರ, ತುಕಾರಾಮ ಡೋಲ್ಸೆ, ಚಂದ್ರಾಮ ಬಿಸನಾಳ, ಲಚ್ಚಾರಾಮ ರಜಪೂತ, ರಾಮಣ್ಣ ತೇಲಿ, ಅಮೋಗಿ ವಾಡೇದ, ನಿಂಗಪ್ಪ ಬಿರಾದಾರ, ಶಿವಾನಂದ ಪಟ್ಟಣ, ಪರಶುರಾಮ ದೇವೂರ, ರಾಮಣ್ಣ ದೇವೂರ, ಬಸಂತ ತೇಲಿ, ನಿಂಗಪ್ಪ ಬಿರಾದಾರ, ಮುತ್ತಣ್ಣ ಆಹೇರಿ,  ಸೇರಿದಂತೆ ಅನೇಕರು ಇದ್ದರು