ರೈತ ಧ್ವನಿ ಕ್ರಿಕೆಟ್ ಕಪ್ ವಿಜೇತರಿಗೆ ಪ್ರಶಸ್ತಿ ಪ್ರಧಾನ

Raitha Dvanhi Cricket Cup winner is the main prize

ರೈತ ಧ್ವನಿ ಕ್ರಿಕೆಟ್ ಕಪ್ ವಿಜೇತರಿಗೆ ಪ್ರಶಸ್ತಿ ಪ್ರಧಾನ  

 ಶಿಗ್ಗಾವಿ 24  : ರೈತ ದ್ವನಿವಾಹಿನಿಯ 7ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಹಾವೇರಿ ಜಿಲ್ಲಾ ಮಟ್ಟದ ಮುಕ್ತ ಹಾಪ ಪಿಚ್ ಕ್ರಿಕೆಟ್ ಪಂದ್ಯಾವಳಿಯನ್ನು ಪಟ್ಟಣದ ತಾಲೂಕ ಕ್ರೀಡಾಂಗಣದಲ್ಲಿ ಅಯೋಜಿಸಲಾಗಿ ಪ್ರಥಮ ಬಹುಮಾನ ಶಂಕರ್ ನೇತೃತ್ವದ ಸ್ವಸ್ತಿಕ್ ಶಿಗ್ಗಾವಿ ತಂಡ, ದ್ವಿತೀಯ ಬಹುಮಾನ ಪ್ರದೀಪ ಗಾಳಿಯಪ್ಪನವರ ನೇತೃತ್ವದ ಏಕೆ ಬಾಯ್ಸ ಸವಣೂರು, ತೃತೀಯ ಬಹುಮಾನ ಸುನೀಲ ಲಮಾಣಿ ನೇತೃತ್ವದ ಕಂಗಾಲ ಬಾಯ್ಸ್‌ ತಂಡ ಪಡೆದುಕೊಂಡರು.   ವೈಯಕ್ತಿಕ ಬಹುಮಾನಗಳು, ಬೆಸ್ಟ್‌ ಬ್ಯಾಟ್ಸ್‌ ಮನ್ ಪ್ರಶಸ್ತಿ ಏಕೆ ಬಾಯ್ಸ ತಂಡ ವಿಜಯ್, ಬೆಸ್ಟ್‌ ಬಾಲರ್,ಕಂಗಲ್ ಬಾಯ್ಸ್‌ ತಂಡದ ವಿಶ್ವ ಲಮಾಣಿ, ಬೆಸ್ಟ್‌ ಆಲ್ರೌಂಡರ್ ಸ್ವಸ್ತಿಕ್ ತಂಡದ ವಿಜಯ್ ಇಂಗಳಗಿ,ಬೆಸ್ಟ್‌ ಆಟಗಾರ ಪ್ರಶಸ್ತಿ ಶಿಗ್ಗಾವಿ ಕಿಂಗ್ಸ್‌ ತಂಡದ ಹೇಮಂತ್ ಅವರಿಗೆ ನೀಡಲಾಯಿತು.   ಬಸವರಾಜ ಕುರಗೋಡಿ ಅವರ ಸಾರಥ್ಯದಲ್ಲಿ ನಡೆದ ಕ್ರಿಕೆಟ್ ಪಂದ್ಯಾವಳಿಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಸಿ.ಬಿ.ಯಲಿಗಾರ ಸೇವಾ ಸಂಸ್ಥೆ ಅಧ್ಯಕ್ಷ ಶಶಿಧರ ಯಲಿಗಾರ, ಕಾಂಗ್ರೇಸ ಮುಖಂಡರಾದ ಮುಕ್ತಿಯಾರ ತಿಮ್ಮಾಪುರ, ಮಂಜುನಾಥ ಮಣ್ಣಣ್ಣವರ,ರೈತ ಮುಖಂಡ ಬಸಲಿಂಗಪ್ಪ ನರಗುಂದ, ನ್ಯಾಯವಾದಿ ಶಂಭು ನೆರ್ತಿ, ಎಂ ಕೆ ಬಿಚ್ಚುರ, ಅಶೋಕಯಲಿಗಾರ, ಬಸವರಾಜ ಹೊನ್ನಣ್ಣವರ, ವಿಠ್ಠಲ್ ಭಜಂತ್ರಿ ಹಾಗೂ ರೈತ ಧ್ವನಿ ಸರ್ವ ಸದಸ್ಯರು ಪಾಲ್ಗೊಂಡಿದ್ದರು.