ಗೋವಾದಲ್ಲಿ ಬಿಡುವು ಕೊಟ್ಟ ಮಳೆ : ಜನರು ಕೊಂಚ ನಿರಾಳ

  ಪಣಜಿ, ಆ 10      ಗೋವಾದಲ್ಲಿ ಸತತ ಐದು ದಿನಗಳ ಕಾಲ ಎಡಬಿಡದೆ ಸುರಿದ ಭಾರೀ ಮಳೆ ಶನಿವಾರ ವಿರಾಮ ನೀಡಿದ್ದು ಜನರು ಸ್ವಲ್ಪ ನಿರಾಳರಾಗಿದ್ದಾರೆ. 

  ರಾಜ್ಯದ ಕೆಲವು ಕಡೆ ಭಾರೀ ಮಳೆ ಬಿದ್ದಿದ್ದು ಉತ್ತರ ಗೋವಾದಲ್ಲಿ ಸಟ್ಟಾರಿಯಲ್ಲಿ ಬಿರುಗಾಳಿ ಸಹಿತ ಮಳೆ ಬಿದ್ದಿದೆ. ಭಾರೀ ಮಳೆಯಿಂದಾಗಿ ವಿದ್ಯುತ್, ರಸ್ತೆ ಸಂಪರ್ಕ ಕಡಿತಗೊಂಡಿದೆ. 

  ಇನ್ನೆರಡು ದಿನಗಳಲ್ಲಿ ರಸ್ತೆ, ವಿದ್ಯುತ್ ಮತ್ತು ನೀರಿನ ಸಂಪರ್ಕ ಎಂದಿನಂತಿರಲಿದೆ ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಶುಕ್ರವಾರ ಭರವಸೆ ನೀಡಿದ್ದರು. 

  ಭಾರೀ ಮಳೆಯಿಂದಾಗಿ ದೈನಂದಿನ ಅಗತ್ಯಗಳಾದ ಹಾಲು, ಹಣ್ಣು, ತರಕಾರಿಗಳ ಲಭ್ಯತೆಗೆ ಅಡಚಣೆಯಾಗಿದೆ. ಕೆಲವೆಡೆ ದುಬಾರಿ ಬೆಲೆಯಿದ್ದು ಜನರು ಪರದಾಡುವಂತಾಗಿದೆ. 

  ಈ ಮಧ್ಯೆ ಉತ್ತರ ಮತ್ತು ದಕ್ಷಿಣ ಗೋವಾದ ಕೆಲವೆಡೆ ಶನಿವಾರ ಸಹ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.