ನವದೆಹಲಿ, ಏ 15, ದೇಶಾದ್ಯಂತ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮುಂದಿನ ತಿಂಗಳ 3 ರವರೆಗೆ ಲಾಕ್ ಡೌನ್ ಅವಧಿ ವಿಸ್ತರಿಸಿದ್ದು ಏಪ್ರಿಲ್ 15 ರಿಂದ ಮೇ. 3 ರವರೆಗೆ ಕಾಯ್ದಿರಿಸಿದ್ದ 39 ಲಕ್ಷ ಟಿಕೆಟ್ ಗಳನ್ನು ರೈಲ್ವೆ ಇಲಾಖೆ ರದ್ದುಪಡಿಸಿದೆ. ಏಪ್ರಿಲ್ 15 ರಿಂದ ಮೇ.3 ರವರೆಗೆ ಪ್ರಯಾಣಕ್ಕಾಗಿ ಕಾಯ್ದಿರಿಸಿದ್ದ ಸುಮಾರು 39 ಲಕ್ಷ ಟಿಕೆಟ್ ಗಳನ್ನು ಭಾರತೀಯ ರೈಲ್ವೆ ಇಲಾಖೆ ರದ್ದುಗೊಳಿಸಲು ನಿರ್ಧರಿಸಿದೆ. ಮೇ.3 ರವರೆಗೆ ರದ್ದಾದ ರೈಲುಗಳ ಟಿಕೆಟ್ ಶುಲ್ಕವನ್ನು ಸಂಪೂರ್ಣ ಮರುಪಾವತಿ ಮಾಡಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೌಂಟರ್ ಗಳಲ್ಲಿ ಬುಕ್ ಮಾಡಿದವರು ಜುಲೈ 31 ರವರೆಗೆ ಮರುಪಾವತಿ ಪಡೆದುಕೊಳ್ಳಬಹುದಾಗಿದೆ. ಮೇ. 3 ರ ಮಧ್ಯರಾತ್ರಿಯವರೆಗೆ ಎಲ್ಲಾ ರೀತಿಯ ಟಿಕೆಟ್ ಕೌಂಟರ್ ಗಳು ಮುಚ್ಚಲಿದ್ದ್ದು, ಮುಂದಿನ ಆದೇಶದವರೆಗೆ ಇ-ಟಿಕೆಟ್ ಸೇರಿದಂತೆ ಎಲ್ ರೀತಿಯ ರೈಲು ಟಿಕೆಟ್ ಗಳ ಮುಂಗಡ ಕಾಯ್ದಿರಿಸುವಿಕೆಗೆ ಅನುಮತಿ ಇಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.