ಬಂಗಾಳದಲ್ಲಿ ರೈಲು ಸೇವೆ ವ್ಯತ್ಯಯ: ಜನಜೀವನ ಭಾಗಶಃ ಬಾಧಿತRail service variation in Bengal: Population affected partially
Lokadrshan Daily
12/20/24, 1:19 AM ಪ್ರಕಟಿಸಲಾಗಿದೆ
ಕೋಲ್ಕತಾ, ಜನವರಿ 8,ಭಾರತ್ ಬಂದ್ ನಿಂದಾಗಿ ಪಶ್ಚಿಮಬಂಗಾಳದಲ್ಲಿ ರೈಲು ಸಂಚಾರಕ್ಕೆ ಅಡಚಣೆಯಾಗಿ, ಜನಜೀವನ ಭಾಗಶಃ ಬಾಧಿತಗೊಂಡಿದೆ. ಬಂದ್ ಹಿನ್ನಲೆಯಲ್ಲಿ 150 ಜನರನ್ನು ಬಂಧಿಸಲಾಗಿದೆ. ಪೂರ್ವ ರೈಲ್ವೆ ಮತ್ತು ಆಗ್ನೇಯ ರೈಲ್ವೆ ಎರಡೂ ವಲಯಲದಲ್ಲಿ ಇದರ ಬಿಸಿ ಪ್ರಯಾಣಿಕರಿಗೆ ತಟ್ಟಿದೆ.10 ಕೇಂದ್ರ ಕಾರ್ಮಿಕ ಸಂಘಗಳು ಮತ್ತು ಸಿಪಿಐ (ಎಂ) ನೇತೃತ್ವದ ಎಡಪಂಥೀಯ ಪಕ್ಷಗಳು ಮತ್ತು ಪಶ್ಚಿಮ ಬಂಗಾಳದಲ್ಲಿ 24 ಗಂಟೆಗಳ ಮುಷ್ಕರಕ್ಕೆ ಕರೆ ಕೊಟ್ಟಿವೆ. ಆದಾರೂ ದಮ್ ದಮ್ ವಿಮಾನ ನಿಲ್ದಾಣದಲ್ಲಿ ವಿಮಾನ ಸೇವೆಗಳು ಎಂದಿನಂತೆ ಸಾಮಾನ್ಯವಾಗಿತ್ತು ಗಸ್ತು ಪೊಲೀಸರು ವಾಹನಗಳನ್ನು ರಸ್ತೆಗಳಲ್ಲಿ ಇರಿಸಲಾಗಿದ್ದ ಅವಶೇಷಗಳನ್ನು ತೆರವುಗೊಳಿಸಲು ಪ್ರಾರಂಭಿಸಿದ್ದರೂ ಅನೇಕ ಕಡೆ ಬಂದ್ ಬೆಂಬಲಿಗರು ಟೈರ್ ಗಳನ್ನು ಸುಡುವ ಮೂಲಕ ರಾಜ್ಯದಾದ್ಯಂತ ವಿವಿಧ ಜಿಲ್ಲೆಗಳನ್ನು ಸಂಪರ್ಕಿಸುವ ಹೆದ್ದಾರಿಗಳಲ್ಇ ಸಂಚಾರಕ್ಕೆ ತೊಂದರೆ ಮಾಡಿದ್ದಾರೆ ಉತ್ತರ ಜಿಲ್ಲೆಯ ಕೂಚ್ ಬೆಹಾರ್ನ ವರದಿಯ ಪ್ರಕಾರ, ಬಂದ್ ಬೆಂಬಲಿಗರು ರಸ್ತೆಗಳಲ್ಲಿ ಸರ್ಕಾರಿ ಬಸ್ಗಳಿಂದ ಇಳಿಯುವಂತೆ ಚಾಲಕರನ್ನು ಒತ್ತಾಯಿಸಿದ್ದಾರೆ. ಬಿಗಿಯಾದ ಭದ್ರತಾ ವ್ಯವಸ್ಥೆಗಳ ಮಧ್ಯೆ ಸರ್ಕಾರಿ ಬಸ್ಸುಗಳು ಚಲಿಸುತ್ತಿದ್ದರೂ ನಗರದ ಜೀವನಕ್ಕೂ ತೊಂದರೆಯಾಗಿದೆ. ಆದರೂ ನಗರಗಳಲ್ಲಿ ಖಾಸಗಿ ಬಸ್ಗಳ ಓಡಾಟ ಬಹಳ ವಿರಳವಾಗಿತ್ತು.ನಗರ ಮತ್ತು ಉಪನಗರ ಪ್ರದೇಶಗಳಲ್ಲಿನ ಹೆಚ್ಚಿನ ಕೈಗಾರಿಕಾ ಘಟಕಗಳು ತೆರೆದಿದ್ದವು. ಕಾರ್ಮಿಕರು ತಮ್ಮ ಎಂದಿನಂತೆ ಕೆಲಸದಲ್ಲಿ ನಿರತರಾಗಿದ್ದಾರೆ. ಎಂದು ಪ್ರತ್ಯೇಕ ವರದಿಯಲ್ಲಿ ತಿಳಿಸಲಾಗಿದೆ.ಪಶ್ಚಿಮ ಬಂಗಾಳಕ್ಕೆ ರೈಲುಸಂಚಾರಕ್ಕೆ ಅಡ್ಡಿಯಾದ ಕಾರಣ ಬಹಳಷ್ಟು ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ. ಅಸನ್ಸೋಲ್ ಮತ್ತು ಮಾಲ್ಡಾ ವಿಭಾಗಗಳಲ್ಲಿನ ರೈಲ್ವೆ ಸೇವೆಗಳು ಸಾಮಾನ್ಯವಾಗಿದೆ, ಸಿಪಿಐ (ಎಂ) ಮುಖಂಡ ಸುಜನ್ ಚಕ್ರವರ್ತಿ ಇಂದು ಜಾದವ್ಪುರನಲ್ಲಿ ಬಂದ್ಗೆ ಬೆಂಬಲಿಸಿ ಸಭೆ ನಡೆಸಿದ್ದಾರೆ. ಬಂದ್ ಹಿನ್ನಲೆಯಲ್ಲಿ 150 ಜನರನ್ನು ಬಂಧಿಸಲಾಗಿದೆ.