ಲೋಕದರ್ಶನ ವರದಿ
ರಾಯಬಾಗ 13: ಭಾರತಯ ಸಂಸ್ಕೃತಿಯ ಸಂತ ಪರಂಪರೆಯಲ್ಲಿ ಸಂತರು, ಶರಣರು, ಮಹಾತ್ಮರು, ದಾರ್ಶನಿಕರು ಎಲ್ಲರೂ ತಮ್ಮ ಆಧ್ಯಾತ್ಮಕ ಮತ್ತು ತಪೋ ಶಕ್ತಿಯಿಂದ ಈ ನಾಡನ್ನು ಪವಿತ್ರವನ್ನಾಗಿ ಮಾಡುವುದರೊಂದಿಗೆ ಜನರಿಗೆ ಧಾಮರ್ಿಕ ಸಂಸ್ಕಾರ ನೀಡಿದ್ದಾರೆ ಎಂದು ಚಿತ್ರದುರ್ಗದ ಚಿನ್ಮೂಲಾದ್ರಿ ಶಿಲಾಪುರಿ ಮಹಾಸಂಸ್ಥಾನ ಭಗೀರಥಪೀಠದ ಪುರಷೋತ್ತಮಾನಂದ ಪುರಿ ಸ್ವಾಮೀಜಿ ಹೇಳಿದರು.
ಗುರುವಾರ ತಾಲೂಕಿನ ಕಟಕಬಾವಿ ಪಿಡಾಯಿತೋಟದಲ್ಲಿ ನೂತನವಾಗಿ ನಿಮರ್ಿಸಿದ ಧರಿದೇವರ ಮತ್ತು ಜಕ್ಕಮ್ಮಾದೇವಿ ದೇವಸ್ಥಾನ ಲೋಕಾರ್ಪಣೆ ಹಾಗೂ ಅಭಿನವಧರೇಶ್ವರ ಸ್ವಾಮೀಜಿಯವರ ಸಂನ್ಯಾಸ ದೀಕ್ಷಾ ಸಮಾರಂಭದ ಧಾಮರ್ಿಕ ಸಭೆಯ ಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿ, ಗುರುಗಳ ಮಾರ್ಗದರ್ಶನದಲ್ಲಿ ಉತ್ತಮ ಸಂಸ್ಕಾರ, ಸಂಸ್ಕೃತಿಯನ್ನು ಹೊಂದಿ ಮಾನವತನ್ನ ಜೀವನವನ್ನು ಪಾವನಗೊಳಿಸಿಕೊಳ್ಳಬೇಕೆಂದರು. ಜ್ಞಾನದ ಹಸಿವನ್ನು ತುಂಬಬಲ್ಲ ಗುರುಗಳ ಬೋಧನೆ ಇಂದು ಹೆಚ್ಚು ಅವಶ್ಯಕವಾಗಿದೆ ಎಂದರು.
ಘೋಡಗೇರಿ ಶಿವಾನಂದ ಮಠದ ಮಲ್ಲಯ್ಯಾ ಸ್ವಾಮೀಜಿ ಮಾತನಾಡಿ, ಬಸವಣ್ಣನವರಕಾಯಕ ಮತ್ತುದಾಸೋಹ ತತ್ವಗಳನ್ನು ಅಳವಡಿಸಿಕೊಂಡು ನಡೆಯುತ್ತಿರುವ ಧರೇಶ್ವರ ಸ್ವಾಮೀಜಿ ಅವರು ಸನ್ಯಾಸ ಜೀವನದ ಪಾವಿತ್ರ್ಯವನ್ನು ಕಾಪಾಡಿಕೊಂಡು ಲೋಕಕಲ್ಯಾಣದ ಒಳಿತಿಗಾಗಿ ಶ್ರಮೀಸಬೇಕೆಂದು ಹಿತವಚನ ನೀಡಿದರು.
ತುಕ್ಕಾನಟ್ಟಿ ಅಮೋಘಸಿದ್ಧೇಶ್ವರ ಮಠದ ಗಾಯತ್ರಿ ಪೀಠದ ಶಾಂತಾನಂದ ಭಾರತಿ ಸ್ವಾಮೀಜಿಯವರ ಅಮೃತ ಹಸ್ತದಿಂದ ಬ್ರಹ್ಮಾಚಾರಿ ಅಭಿನವ ಧರೇಶ್ವರ ಸ್ವಾಮೀಜಿಯವರ ಸಂನ್ಯಾಸ ದೀಕ್ಷಾ ಕಾರ್ಯಕ್ರಮ ನೆರವೇರಿಸಲಾಯಿತು.
ಧಾಮರ್ಿಕ ಸಭೆಯ ಅಧ್ಯಕ್ಷತೆಯನ್ನು ಭೆಂಡವಾಡ ವಿರಕ್ತಮಠದ ಗುರುಸಿದ್ಧ ಸ್ವಾಮೀಜಿಯವರು ವಹಿಸಿದ್ದರು. ಸಮಾರಂಭದಲ್ಲಿ ಸುಣದೋಳಿ ಜಡಿಸಿದ್ಧೇಶ್ವರ ಮಠದ ಶಿವಾನಂದ ಸ್ವಾಮೀಜಿ, ಭಿಮಾನಂದ ಸ್ವಾಮೀಜಿ, ನಾಗೇಶ್ವರ ಸ್ವಾಮೀಜಿ, ವಿದ್ಯಾನಂದ ಸ್ವಾಮೀಜಿ, ಸಿದ್ಧೇಶ್ವರ ಶ್ರೀಗಳು, ಶಾಂತಮೂತರ್ಿ ಲಕ್ಷ್ಮಣಮುತ್ಯಾ, ಕಲಾವತಿ ಅಮ್ಮನವರು, ಕಾತ್ಯಾಯಿನಿ ಅಮ್ಮನವರು, ರೇವಣ್ಣ ಪೂಜೇರಿ, ಸಿದ್ದಗೌಡ ಕಬಾಡಗಿ, ಭರಮಣ್ಣಾ ಉಪ್ಪಾರ, ಜಿ.ಪಂ.ಸದಸ್ಯ ನಿಂಗಪ್ಪ ಪಕಾಂಡಿ, ಮಾಜಿ ಜಿ.ಪಂ.ಉಪಾಧ್ಯಕ್ಷೆ ತೇಜಶ್ವಿನಿ ನಾಯಿಕವಾಡಿ, ಅಪ್ಪಾಶಿ ಪಕಾಂಡಿ, ರಾಜಶೇಖರ ಖನದಾಳೆ ಸೇರಿದಂತೆ ಅನೇಕ ಭಕ್ತಾದಿಗಳು ಪಾಲ್ಗೊಂಡಿದ್ದರು.
ಹಿಡಕಲ್ಡ್ಯಾಂ ನೀರು ಬಳಕೆದಾರರ ಮಹಾಮಂಡಳದ ನಿದರ್ೇಶಕ ಅಜರ್ುನ ನಾಯಿಕವಾಡಿ ಸ್ವಾಗತಿಸಿದರು.ಎ.ಜಿ.ಕೋಳಿ ನಿರೂಪಿಸಿ, ವಂದಿಸಿದರು.
ಬೆಳಿಗ್ಗೆ ಗ್ರಾಮದ ನಿಂಗಮ್ಮಾದೇವಿ ದೇವಸ್ಥಾನದಿಂದಧರಿದೇವರ ಮಠದ ವರೆಗೆ ಸುಮಗಂಲೆಯರಿಂದ ಕುಂಭಮೇಳ ಮತ್ತು ವಾದ್ಯಮೇಳದೊಂದಿಗೆ ಧರಿದೇವರ ಮತ್ತು ಜಕ್ಕಮ್ಮಾದೇವಿ ಶೀಲಾಮೂತರ್ಿಗಳ ಮೆರವಣಿಗೆ ನಡೆಯಿತು.