ರಾಯಬಾಗ: ಜನಸಾಮಾನ್ಯರು ಕಾನೂನು ಅರಿವನ್ನು ಪಡೆದುಕೊಂಡು ಸಹಬಾಳ್ವೆಯಿಂದ ಬಾಳಬೇಕು. ಮಹಿಳೆಯರಿಗೆ, ನಿರಾಶ್ರಿತರಿಗೆ, ಮಕ್ಕಳಿಗೆ, ಕಾರ್ಮಿಕರಿಗೆ, ಕಡಿಮೆ ಆದಾಯ ವಿರುವವರೆಗೆ ಹಾಗೂ ಪರಿಶಿಷ್ಟ ಜಾತಿ, ವರ್ಗದವರಿಗೆಉಚಿತ ಕಾನೂನು ಸಲಹೆ, ನೆರವನ್ನು ನೀಡಲಾಗುವುದು, ಇದರ ಸೌಲಭ್ಯವನ್ನು ಪಡೆದುಕೊಳ್ಳಬೇಕೆಂದು ಪ್ರಧಾನ ದಿವಾಣಿ ನ್ಯಾಯಾಧೀಶ ಸೋಮಾಎ.ಎಸ್. ಹೇಳಿದರು.
ಬುಧವಾರ ಪಟ್ಟಣದ ಹಿರಿಯದಿವಾಣಿ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ನ್ಯಾಯವಾದಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಕಾನೂನು ದಿನಾಚರಣೆ ನಿಮಿತ್ಯ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವುಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದಅವರು, ಸರಕಾರ ನೀಡುವ ಕಾನೂನು ಸವಲತ್ತುಗಳನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕೆಂದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ನ್ಯಾಯವಾದಿ ಆರ್.ಬಿ.ಪವಾರ ಮತ್ತು ಟಿ.ಕೆ.ಶಿಂಧೆ ಅವರು ವಿವಿಧ ಕಾನೂನುಗಳ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೆಚ್ಚುವರಿ ದಿವಾಣಿ ನ್ಯಾಯಾಧೀಶ ಜಿ.ಬಿ.ಹಳ್ಳಾಕಾಯಿ ವಹಿಸಿದ್ದರು.
ವಕೀಲರ ಸಂಘದ ಅಧ್ಯಕ್ಷ ಎಸ್.ಪಿ.ಪಾಟೀಲ, ಕಾರ್ಯದರ್ಶಿ ಆರ್.ಎಸ್.ಹೊಳ್ಳೆಪ್ಪಗೊಳ, ಸಹಕಾರ್ಯದರ್ಶಿ ಎಸ್.ಆರ್.ಪಾಟೀಲ, ಸ.ಸ.ಅಭಿಯೋಜಕ ಎಮ್.ಪಿ.ಗಾಂವ್ಕರ್, ನ್ಯಾಯವಾದಿಗಳಾದ ಎ.ಬಿ.ಮಂಗಸೂಳೆ, ಎಸ್.ಕೆ.ರೆಂಟೆ, ಸವಿತಾ ಸಂಗೋಟೆ, ಡಿ.ಬಿ.ಮುಡಸಿ, ಎಸ್.ವಿ.ಪೂಜಾರಿ, ಬಿ.ಎಸ್.ಕಾಂಬಳೆ ಸೇರಿದಂತೆಅನೇಕರು ಉಪಸ್ಥಿತರಿದ್ದರು.