ಎಫ್‌ಡಿಐ ನಿಯಮಾವಳಿಗಳಲ್ಲಿ ತಿದ್ದುಪಡಿ: ಸರ್ಕಾರಕ್ಕೆ ರಾಹುಲ್ ಧನ್ಯವಾದ

ನವದೆಹಲಿ, ಏಪ್ರಿಲ್ 18, ಕೆಲ ನಿರ್ದಿಷ್ಟ ಪ್ರಕರಣಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಸರ್ಕಾರದ ಅನುಮೋದನೆ ಕಡ್ಡಾಯಗೊಳಿಸಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್‌ಡಿಐ) ನಿಯಮಾವಳಿಗಳಲ್ಲಿ ತಿದ್ದುಪಡಿ ಮಾಡಿರುವ ಸರ್ಕಾರದ ಕ್ರಮವನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶನಿವಾರ ಸ್ವಾಗತಿಸಿದ್ದಾರೆ.  
ಕೆಲ ನಿರ್ದಿಷ್ಟ ಪ್ರಕರಣಗಳಲ್ಲಿ  ಸರ್ಕಾರದ ಅನುಮೋದನೆ ಕಡ್ಡಾಯಗೊಳಿಸಿ ಸರ್ಕಾರ ಶನಿವಾರ ಎಫ್‌ಡಿಐ ನಿಯಮಾವಳಿಗಳಿಗೆ ಶನಿವಾರ ತಿದ್ದುಪಡಿ ಮಾಡಿದೆ.ಕೈಗಾರಿಕೆ ಮತ್ತು ಆಂತರಿಕ ವಾಣಿಜ್ಯ ಉತ್ತೇಜನಾ ಇಲಾಖೆ (ಡಿಪಿಐಐಟಿ) ಬಿಡುಗಡೆ ಮಾಡಿದ ಪ್ರಕಟಣೆಯಂತೆ, ಭಾರತದೊಂದಿಗೆ ಭೂ ಗಡಿಯನ್ನು ಹಂಚಿಕೊಳ್ಳುವ ದೇಶವೊಂದರ ಉದ್ಯಮ ಸರ್ಕಾರದ ಅನುಮೋದನೆ ಪಡೆದ ನಂತರವೇ ಹೂಡಿಕೆ ಮಾಡಬಹುದಾಗಿದೆ ಎಂದು ಸರ್ಕಾರ ಹೇಳಿದೆ.ಆದರೂ, ಭಾರತದೊಂದಿಗೆ  ಭೂ ಗಡಿಯನ್ನು ಹಂಚಿಕೊಳ್ಳುವ  ದೇಶ ಅಥವಾ ಭಾರತಕ್ಕೆ ಹೂಡಿಕೆಯಲ್ಲಿ ಹೂಡಿಕೆ ಮಾಡುವ  ಯಾವುದೇ ದೇಶದ ಪ್ರಜೆಯು ಸರ್ಕಾರದ ಮಾರ್ಗದಲ್ಲಿ ಮಾತ್ರ ಹೂಡಿಕೆ ಮಾಡಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಹೊಸ ನಿಯಮಗಳು ಭಾರತದಲ್ಲಿ ಅಸ್ತಿತ್ವದಲ್ಲಿರುವ ಅಥವಾ ಮುಂದಿನ ದಿನಗಳಲ್ಲಿನ ಎಫ್‌ಡಿಐಗಳ ಮಾಲೀಕತ್ವವನ್ನು ನೇರವಾಗಿ ಅಥವಾ ಪರೋಕ್ಷವಾಗಿ ವರ್ಗಾಯಿಸಲು ಸಹ ಅನ್ವಯಿಸುತ್ತವೆ ಎಂದು ಡಿಪಿಐಐಟಿ ತಿಳಿಸಿದೆ.ಕೊವಿಡ್‍-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಭಾರತೀಯ ಕಂಪನಿಗಳು ವಿದೇಶಿ ಕಂಪೆನಿಗಳಿಂದ ಯಾವುದೇ ಪ್ರತಿಕೂಲ ಸ್ವಾಧೀನದ ಬಿಡ್ ಎದುರಿಸದಂತೆ ನೋಡಿಕೊಳ್ಳಬೇಕೆಂದು ರಾಹುಲ್‍ ಗಾಂಧಿ ಕಳೆದ ಭಾನುವಾರ ಸರ್ಕಾರವನ್ನು ಒತ್ತಾಯಿಸಿದ್ದರು. ಭಾರಿ ಆರ್ಥಿಕ ಕುಸಿತವು ಅನೇಕ ಭಾರತೀಯ ಕಾರ್ಪೊರೇಟ್‌ ಕಂಪೆನಿಗಳನ್ನು ದುರ್ಬಲಗೊಳಿಸಿದೆ. ಇವುಗಳನ್ನು ಸ್ವಾದೀನ ಪಡಿಸಿಕೊಳ್ಳಲು ವಿದೇಶಿ ಕಂಪೆನಿಗಳು ಹವಣಿಸುತ್ತಿವೆ. ರಾಷ್ಟ್ರೀಯ ಬಿಕ್ಕಟ್ಟಿನ ಈ ಸಮಯದಲ್ಲಿ ವಿದೇಶಿ ಶಕ್ತಿಗಳು ಭಾರತದ ಕಂಪೆನಿಗಳನ್ನು ಸ್ವಾಧೀನ ಪಡಿಸಿಕೊಳ್ಳಲು ಅವಕಾಶ ನೀಡಬಾರದು ಎಂದು ರಾಹುಲ್‍ ಗಾಂಧಿ ಟ್ವೀಟ್ ಮಾಡಿದ್ದಾರೆ.