ರಾಹುಲ್ ಗಾಂಧಿ ಶನಿವಾರ ಕಾಶ್ಮೀರಕ್ಕೆ ಭೇಟಿ

ನವದೆಹಲಿ, ಆ 24   ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಕ್ಷದ ಹಿರಿಯ ನಾಯಕರಾದ ಗುಲಾಂ ನಬಿ ಆಜಾದ್, ಆನಂದ್ ಶರ್ಮಾ ಮತ್ತು ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಅವರೊಂದಿಗೆ ಕಾಶ್ಮೀರಕ್ಕೆ ಶನಿವಾರ ಭೇಟಿ ನೀಡಲಿದ್ದಾರೆ.       ಎಐಸಿಸಿ ಪ್ರಧಾನ ಕಾರ್ಯದರ್ಶಿಕೆ.ಸಿ.ವೇಣುಗೋಪಾಲ್, ಬಂಡಾಯ ಜೆಡಿ(ಯು) ನಾಯಕ ಶರದ್ ಯಾದವ್, ಡಿಎಂಕೆ ನಾಯಕ ತಿರುಚಿ ಶಿವಾ, ಎನ್ಸಿಪಿ ನಾಯಕ ಮಜಿದ್ ಮೆಮೋನ್, ಸಿಪಿಐ ನ ಡಿ ರಾಜಾ ಸೇರಿದಂತೆ 12 ಸದಸ್ಯರ ನಿಯೋಗ ಶ್ರೀನಗರಕ್ಕೆ ಭೇಟಿ ನೀಡಲಿದೆ.   ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನ ವಿಧಿ 370 ರದ್ದು ಬಳಿಕ ಕಣಿವೆಯಲ್ಲಿನ ಪರಿಸ್ಥಿತಿ ಪರಾಮಶರ್ೆಗೆ ನಿಯೋಗ ಕಣಿವೆ ನಾಡಿಗೆ ಶನಿವಾರ ಮಧ್ಯಾಹ್ನ ಭೇಟಿ ನೀಡಲಿದೆ.   ಪರಿಸ್ಥಿತಿ ಪರಾಮರ್ಶಿಗೆ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಇತ್ತೀಚೆಗೆ ನೀಡಿದ್ದ ಆಹ್ವಾನ ಮೇರೆಗೆ ವಿಪಕ್ಷ ನಿಯೋಗ ಶ್ರೀನಗರಕ್ಕೆ ಹೊರಟಿದೆ. ಆದರೆ ಭದ್ರತಾ ಕಾರಣಗಳಿಂದಾಗಿ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.