ತವರು ಕ್ಷೇತ್ರಕ್ಕೆ ನಾಳೆ ರಾಹುಲ್ ಗಾಂಧಿ

ಕೋಜಿಕೋಡ್, ಆಗಸ್ಟ್ 10  ಭಾರಿ ಮಳೆಯಿಂದಾಗಿ ಹೆಚ್ಚು ಹಾನಿಯಾಗಿರುವ  ತವರು ಕ್ಷೇತ್ರ ವಯನಾಡು ಮತ್ತು ಮಲ್ಲಪುರಂ  ಜಿಲ್ಲೆಗಳಿಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭಾನುವಾರ ಭೇಟಿ ನೀಡಿ  ಸಂತ್ರಸ್ತರ ಅಹವಾಲು ಕೇಳಲಿದ್ದಾರೆ.  

ರಾಹುಲ್ ಗಾಂಧಿಯವರ ಭೇಟಿ  ಹವಾಮಾನ ಪರಿಸ್ಥಿತಿ ಮತ್ತು ಭದ್ರತಾ ಅನುಮತಿ ಕುರಿತ ನಿರ್ಧಾರಕ್ಕೆ ಅನುಗುಣವಾಗಿರಲಿದೆ  ಎಂದೂ  ಕಾಂಗ್ರೆಸ್ ಮೂಲಗಳು ತಿಳಿಸಿವೆ. 

ವಯನಾಡ್ ಜಿಲ್ಲೆಯ ಭಾಗವಾದ ಮೆಪ್ಪಾಡಿ ಮತ್ತು ಮಲಪ್ಪುರಂನ ನೀಲಂಬೂರು  ಸಹ  ರಾಹುಲ್ ಅವರು ಪ್ರತಿನಿಧಿಸುವ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಲಿದೆ.  

ಕೇರಳದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ರಾಜ್ಯದ 40 ಕ್ಕೂ ಹೆಚ್ಚು ನದಿಗಳಲ್ಲಿ ಪ್ರವಾಹ ಉಕ್ಕಿದೆ. ಮೇಲಾಗಿ ತಮಿಳುನಾಡಿನ ಜಲಾಶಯದಿಂದ ನೀರು ಬರುತ್ತಿದ್ದು ರಾಜ್ಯದ ಪ್ರವಾಹ ಪರಿಸ್ಥಿತಿ ಬಿಗಡಾಯಿಸಿ ಇದುವರೆಗೆ ಮಳೆ ಮತ್ತು ಅದರ ಅವಘಡಕ್ಕೆ 35 ಜನ ಮೃತಪಟ್ಟಿದ್ದಾರೆ. ಪರಿಹಾರ ಮತ್ತು ಸಂರಕ್ಷಣೆಗಾಗಿ ಸೇನಾ ನೆರವಿಗೆ ಮುಖ್ಯಮಂತ್ರಿ ಮನವಿ ಮಾಡಿಕೊಂಡಿದ್ದಾರೆ. ಅವರ ಮನವಿ ಮೇರೆಗೆ ವಾಯುಪಡೆ ಮತ್ತು ನೌಕಾಪಡೆಯ ಸಿಬ್ಬಂದಿ ಮತ್ತು ಹೆಲಿಕಾಫ್ಟರ್ ಗಳು ಪರಿಹಾರ ಕಾರ್ಯಾಚರಣೆಯಲ್ಲಿ ನಿರತವಾಗಿವೆ.