ಪ್ರಧಾನಿ ಮೋದಿಗೆ ಧನ್ಯವಾದ ಸಲ್ಲಿಸಿದ ರಾಹುಲ್ ಗಾಂಧಿ

ನವದೆಹಲಿ, ಮೇ ೧೮,  ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ  ಕಾಂಗ್ರೆಸ್   ನಾಯಕ   ರಾಹುಲ್  ಗಾಂಧಿ   ಧನ್ಯವಾದ ಸಲ್ಲಿಸಿದ್ದಾರೆ. ಕಾಂಗ್ರೆಸ್  ನೇತೃತ್ವದ  ಯುಪಿಎ  ಆಡಳಿತ  ಅವಧಿಯಲ್ಲಿ  ಆರಂಭಿಸಲಾಗಿದ್ದ  ಮನ್ರೇಗಾ( ಮಹಾತ್ಮಾ ಗಾಂಧಿ ರಾಷ್ಟ್ರೀಯ  ಗ್ರಾಮೀಣ ಉದ್ಯೋಗ ಖಾತ್ರಿ) ಯೋಜನೆಗೆ ೪೦ ಸಾವಿರ ಕೋಟಿ ರೂಪಾಯಿ ನಿಧಿ ಹೆಚ್ಚುವರಿಯಾಗಿ  ಹಂಚಿಕೆ ಮಾಡಿರುವುದಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಮನ್ರೇಗಾ ಯೋಜನೆಯ  ವೈಶಿಷ್ಟವನ್ನು ಅರ್ಥ ಮಾಡಿಕೊಂಡು ಯಶಸ್ವಿಯಾಗಿ ಜಾರಿಗೊಳಿಸಿಸುತ್ತಿರುವುದಕ್ಕೆ ರಾಹುಲ್ ಗಾಂಧಿ  ಧನ್ಯವಾದ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಪ್ರಕಟಿಸಿದ  ಆತ್ಮ  ನಿರ್ಭರ್  ಪ್ಯಾಕೇಜ್  ಭಾಗವಾಗಿ  ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  ಮನ್ರೇಗಾ ಯೋಜನೆಗೆ ೪೦ ಸಾವಿರ ಕೋಟಿ ರೂಪಾಯಿ ಹೆಚ್ಚುವರಿ  ನಿಧಿ ಹಂಚಿಕೆ ಮಾಡಿದ್ದಾರೆ. ಇದರಿಂದ ಮನ್ರೇಗಾ ಯೋಜನೆಗೆ  ಹಂಚಿಕೆ ಮಾಡಲಾದ ಒಟ್ಟುನಿಧಿ ೬೧ ಸಾವಿರ ಕೋಟಿ ರೂಪಾಯಿಗೆ ಏರಿಕೆಯಾಗಿದೆ.
ಲಾಕ್ ಡೌನ್  ಕಾರಣದಿಂದ  ಕೆಲಸ ವಿಲ್ಲದೆ  ತಮ್ಮ ಊರುಗಳಿಗೆ  ಮರಳಿರುವ  ವಲಸೆ ಕಾರ್ಮಿಕರಿಗೆ  ಹೆಚ್ಚವರಿ ನಿಧಿ ಹಂಚಿಕೆಯಿಂದ ಸಾಕಷ್ಟು  ನೆರವಾಗಲಿದೆ. ಮನ್ರೇಗಾ ಯೋಜನೆಯ ನಿಯಮದಂತೆ   ವರ್ಷದಲ್ಲಿ ೨೦೦ ದುಡಿಮೆ ದಿನಗಳಿರುತ್ತವೆ. ಕಾಮಿಕರಿಗೆ  ನೀಡಲಾಗುವ  ದಿನಗೂಲಿ ಹಣ ಕೂಡಾ ಗೌರವ ಪ್ರಮಾಣದಲ್ಲಿರುತ್ತದೆ. ಯುಪಿಎ ಅವಧಿಯಲ್ಲಿ ಈ ಯೋಜನೆ ಪ್ರಾರಂಭಿಸಲಾಗಿತ್ತು.
ಮೋದಿ ಅಧಿಕಾರಕ್ಕೆ  ಬಂದ ನಂತರವೂ  ಈ ಯೋಜನೆ  ಮುಂದುವರಿಸಿದರು. ಅಲ್ಲದೆ ಯೋಜನೆಯಡಿ  ಕೆಲಸದ ದಿನಗಳನ್ನು  ಹೆಚ್ಚಿಸಿ, ಕಾರ್ಮಿಕರಿಗೆ  ಮತ್ತಷ್ಟು  ಪ್ರಯೋಜನ ಲಭಿಸುವಂತೆ ಮಾಡಿದರು. ಮೋದಿ ಸರ್ಕಾರ ಬಂದಕೂಡಲೇ  ಯುಪಿಎ ಯೋಜನೆಯಾಗಿರುವ ಮನ್ರೇಗಾ  ರದ್ದುಪಡಿಸಲಿದೆ   ಎಂದು ಕಾಂಗ್ರೆಸ್  ಪಕ್ಷದ ಅಗ್ರ ನಾಯಕತ್ವ ಭಾವಿಸಿತ್ತು.ಆಧಾರ್  ಕಾರ್ಡ್ ವ್ಯವಸ್ಥೆಯನ್ನು ಕೂಡಾ ರದ್ದು ಪಡಿಸಲಿದೆ ಎಂದು ಭಾವಿಸಿದ್ದರು. ಆದರೆ,  ಯುಪಿಎ  ಸರ್ಕಾರದ ಈ ಯೋಜನೆಗಳನ್ನು ಮೋದಿ  ಸರಕಾರ  ರದ್ದು ಮಾಡಲಿಲ್ಲ.  ಅವುಗಳನ್ನು   ಮುಂದುವರಿಸಿದರು. ತಂತ್ರಜ್ಞಾನದ ಮೂಲಕ ಮತ್ತಷ್ಟು ಸುಸಂಬದ್ದಗೊಳಿಸಿದರು. ತಂತ್ರಜ್ಞಾನ ಬಳಸಿ   ನೂರಾರು ಕೋಟಿ ರೂಪಾಯಿ  ಸರ್ಕಾರದ ಹಣ ವ್ಯರ್ಥವಾಗುವುದನ್ನು ಉಳಿಸಿದ್ದೇವೆ ಎಂದು  ಪ್ರಧಾನಿ ಮೋದಿ  ಸ್ವತಃ ಹೇಳಿದ್ದರು.