ಭಾರತದ ಬಗ್ಗೆ ಕೀಳು ಮಾತು: ರಾಹುಲ್ ವಿರುದ್ಧ ಆಕ್ರೋಶ


ನವದೆಹಲಿ 23:  ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜರ್ಮನಿಯಲ್ಲಿ  ಭಾರತದ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ, ಮೋದಿ ಸರ್ಕಾರ ರದ ವಿರುದ್ಧ ವಾಗ್ದಾಳಿ ನಡೆಸಿ ಭಯೋತ್ಪಾದನೆಯನ್ನು ಸಮಥರ್ಿಸಿಕೊಂಡು ಸುಳ್ಳು ಹೇಳುತ್ತಿದ್ದಾರೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. 

ಭಾರತದ ಬಗ್ಗೆ ಅತ್ಯಂತ ಕೀಳಾಗಿ ಮಾತನಾಡಿರುವ ರಾಹುಲ್ ಗಾಂಧಿ ಈ ಸಂಬಂಧ ವಿವರಣೆ ನೀಡಬೇಕು ಎಂದು ಬಿಜೆಪಿ ವಕ್ತಾರ ಸಂಬಿತ್ ಪತ್ರಾ ಆಗ್ರಹಿಸಿದ್ದಾರೆ, ಭಾರತವನ್ನು ಕೆಟ್ಟದಾಗಿ ಚಿತ್ರಿಸಿರುವ ರಾಹುಲ್ ಮಹಿಳೆಯರ ಮೆಲಿನ ಹಿಂಸಾಚಾರದ ಬಗ್ಗೆ ಮಾತನಾಡಿರುವುದು ಅವರ ಕೆಟ್ಟ  ಸಂಸ್ಕೃತಿ ತೋರಿಸುತ್ತದೆ ಎಂದು ಹೇಳಿದ್ದಾರೆ. 

ಜರ್ಮನಿಗೆ ಎರಡು ದಿನಗಳ ಭೇಟಿಗೆ ತೆರಳಿರುವ ಅವರು ಹ್ಯಾಮ್ ಬಗರ್್ ನಲ್ಲಿ ನಿನ್ನೆ ಬುಸೆರಿಯಸ್ ಸಮ್ಮರ್ ಸ್ಕೂಲ್ ವಿದ್ಯಾಥರ್ಿಗಳನ್ನುದ್ದೇಶಿಸಿ ಮಾತನಾಡಿರುವ ರಾಹುಲ್, ಬಿಜೆಪಿ ಸಕರ್ಾರ ಜಾರಿಗೆ ತಂದ ನೋಟ್ ಬ್ಯಾನ್, ಕಳಪೆ ರೀತಿಯಲ್ಲಿ ಅನುಷ್ಟಾನಗೊಂಡ ಜಿಎಸ್ಟಿ ನೀತಿಯಿಂದಾಗಿ ದೇಶದಲ್ಲಿ ಉದ್ಯೋಗಾವಕಾಶದ ಕೊರತೆಯಿಂದಾಗಿ ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಭಯತ್ಪಾದನೆಗೆ ಕಾರಣವಾಗಿದೆ ಎಂದು ಹೇಳಿದ್ದರು. 

ರಾಹುಲ್ ಗಾಂಧಿ ಭಯೋತ್ಪಾದನೆ ಬಗ್ಗೆ ಸಮರ್ಥನೆ ನೀಡಿದ್ದಾರೆ, ಒಂದು ವೇಳೆ ಅಲ್ಪ ಸಂಖ್ಯಾತರಿಗೆ ಉದ್ಯೋಗ ದೊರಕದಿದ್ದರೇ  ಅವರು ಐಎಸ್ ಗದೆ ತಮ್ಮ ಆತ್ಮವನ್ನು ಮಾರಿಕೊಳ್ಳುತ್ತಾರೆ ಎಂದು ಹೇಳುವ ಮೂಲಕ ಸಮುದಾಯವೊಂದನ್ನು ದೂಷಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ. 

ಭಾರತದ ಬಗ್ಗೆ ರಾಹುಲ್ ಗಾಂಧಿ ಅವರಿಗೆ ನಿಕೃಷ್ಟ ಅಭಿಪ್ರಾಯವಿದೆ,  ಮೋದಿ ಸಕರ್ಾರದ ಅಡಿಯಲ್ಲಿ ಭಾರತ ಪ್ರಪಂಚದ ಪ್ರಧಾನ ರಾಷ್ಟ್ರಗಳಲ್ಲಿ ಒಂದಾಗಿ ಬೆಳೆಯುತ್ತಿದೆ. ಜರ್ಮನಿಯಲ್ಲಿ ರಾಹುಲ್ ಗಾಂಧಿ ಮಾಡಿದ ಭಾಷಣ ಬರೀ ಸುಳ್ಳುಗಳಿಂದ ತುಂಬಿತ್ತು ಎಂದು ಹೇಳಿರುವ ಪತ್ರಾ, ಚೀನಾ ಪ್ರತಿ 24 ಗಂಟೆಗೆ 50 ಉದ್ಯೋಗ ಸೃಷ್ಟಿಸುತ್ತದೆ ಎಂದು ಹೇಳಿದ್ದಾರೆ, ಭಾರತ 44 ಉದ್ಯೋಗ ಸೃಷ್ಟಿಸುತ್ತದೆ ಎಂಬ ಹೇಳಿಕೆ 10 ಜನಪತ್ ನಲ್ಲಿ ಸೃಷ್ಟಿಯಾಗಿದೆ, ರಾಹುಲ್ ತಾಯಿ ಸೋನಿಯಾ 10 ಜನಪತ್ ನಲ್ಲಿ ವಾಸಿಸುತ್ತಾರೆ.  

ರಾಹುಲ್ ಅವರಿಗೆ ಸರಿಯಾದ ಅಂಕಿ ಅಂಶಗಳು ತಿಳಿದಿಲ್ಲ ಹಾಗೂ ಪೂರ್ವ ಸಿದ್ಥತೆ ಮಾಡಿಕೊಂಡಿಲ್ಲ,  ಕಾಂಗ್ರೆಸ್ ಅಧ್ಯಕ್ಷೆಯಾಗಿದ್ದ ಸೋನಿಯಾ ಸುಮಾರು 19 ವರ್ಷಗಳ ಕಾಲ ಪ್ರಾಕ್ಸಿ ಪ್ರದಾನ ಮಂತ್ರಿಯಾಗಿ ದೇಶವನ್ನಾಳಿದ್ದಾರೆ,  ಭಾರತದ ಸಂಸ್ಕೃತಿ ಅವರು ಅತ್ಯಂತ ಉನ್ನತ ಮಟ್ಟದ ಹುದ್ದೆ ಅಲಂಕರಿಸಲು ಸಹಾಯ ಮಾಡಿಲ್ಲವೇ ಎಂದು ಪಾತ್ರ ಪ್ರಶ್ನಿಸಿದ್ದಾರೆ. 

ಇತ್ತೀಚೆಗೆ ಕೇಂದ್ರ ಸಕರ್ಾರ ಮಾಡಿರುವ ತಿದ್ದುಪಡಿ ಮಸೂದೆಯಿಂದ ಬುಡಕಟ್ಟು ಜನರು, ದಲಿತರು ಮತ್ತಷ್ಟು ಪ್ರಬಲ ರಾಗಿದ್ದಾರೆ, ಯುಪಿಎ ಸಕರ್ಾರದ ಆಡಳಿತಾವದಿಯಲ್ಲಿ ಕೇವಲ 11 ರಾಜ್ಯಗಳಲ್ಲಿ ಮಾತ್ರ ಆಹಾರದ ಹಕ್ಕು  ಅನುಷ್ಠಾನ ಗೊಂಡಿತ್ತು, ಆದರೆ ಎನ್ ಡಿ ಎ ಸಕರ್ಾರ ಎಲ್ಲಾ 36 ರಾಜ್ಯಗಳಲ್ಲೂ ಅನುಷ್ಠಾನಗೊಳಿಸಿದೆ ಎಂದು ಸಮಥರ್ಿಸಿಕೊಂಡಿದ್ದಾರೆ, 

ಗ್ರಾಮೀಣ ಉದ್ಯೋಗ  ಅಪಾರ ಯಶಸ್ಸು ಪಡೆದಿದೆ, 431 ಸಕರ್ಾರದ ಯೋಜನೆಗಳಿಂದಾಗಿ 4 ಲಕ್ಷ  ಕೋಟಿ  ಹಣ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ  ಜಮೆಯಾಗುತ್ತಿದೆ,. ಮೋದಿ ಅವರು ಕೈಗೊಂಡ ಸುಧಾರಣಾ ಕ್ರಮಗಳನ್ನು ಅಂತಾರಾಷ್ಟ್ರೀಯ ಸಂಸ್ಥೆಗಳು ಪ್ರಶಂಸಿವೆ ಎಂದು ಪತ್ರಾ ಹೊಗಳಿದ್ದಾರೆ.