ರಾಹುಲ್ಗೆ ಪ್ರಧಾನಿ ಕುಚರ್ಿ ಬಿಟ್ಟೇನೂ ಕಾಣಲ್ಲ: ಮೋದಿ

ಶಹಜಾನ್ಪುರ್ 21: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಪ್ರಧಾನಿ ಕುಚರ್ಿಯೊಂದು ಬಿಟ್ಟು ಬೇರೇನೂ ಕಾಣುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿ ಕಾರಿದ್ದಾರೆ.  

ಶನಿವಾರ ಶಹಜಾನ್ಪುರದಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಜನರನ್ನುದ್ದೇಶಿಸಿ ಮಾತನಾಡಿದ ಮೋದಿ ರಾಹುಲ್ ವಿರುದ್ಧ ಕಿಡಿ ಕಾರಿದರು.  

ನಾವು ವಿಪಕ್ಷಗಳ ಬಳಿ ನಮ್ಮ ಸಕರ್ಾರದ ಕುರಿತು ವಿಶ್ವಾಸವಿಲ್ಲ ಯಾಕೆ ಎಂದು ಪ್ರಶ್ನಿಸಿದ್ದೇವು. ಅವರಿಗೆ ಉತ್ತರ ನೀಡಲು ಸಾಧ್ಯವಾಗಲಿಲ್ಲ ಕೊನೆಗೆ ಬಂದು ಆಲಿಂಗನ ಮಾಡಿದರು ಎಂದರು.  

ನಾನು ಯಾವುದೇ ತಪ್ಪು ಮಾಡಿಲ್ಲ ಮತ್ತು ಸರಿಯಾದ ದಾರಿಯಲ್ಲಿ ಸಾಗುತ್ತಿದ್ದೇನೆ ಇದು ನನ್ನ ದೊಡ್ಡ ಅಪರಾಧ ಎಂದರು.  

ನೀವೆಲ್ಲಾ ನೋಡಿದ್ದೀರಲ್ಲಾ  ರಾಹುಲ್ ಹೇಗೆ ನನ್ನ ಕುಚರ್ಿಯತ್ತ ಓಡಿ ಬಂದರು ಎಂದು.ಅವರಿಗೆ ಪ್ರಧಾನಿ ಕುಚರ್ಿ ಬಿಟ್ಟರೆ ಬೇರೆ ಏನೂ ಕಾಣುತ್ತಿಲ್ಲ ಎಂದರು.  

ರೈತರ ಹೆಸರಿನಲ್ಲಿ ಈಗ ಮೊಸಳೆ ಕಣ್ಣೀರು ಹಾಕುತ್ತಿರುವವರು ಅಧಿಕಾರದಲ್ಲಿದ್ದಾಗ ರೈತರಿಗೆ ಏನಾದರೂ ಮಾಡಿದ್ದಾರಾ ಎಂದು ಪ್ರಶ್ನಿಸಿದರು.