ಪ್ರಜ್ಞಾ ಠಾಕೂರ್‌ ವಿರುದ್ಧ ನೀಡಿದ ಹೇಳಿಕೆಗೆ ಬದ್ಧ: ರಾಹುಲ್ ಗಾಂಧಿ

ನವದೆಹಲಿ, ನವೆಂಬರ್ 29 -ಪ್ರಜ್ಞಾ ಠಾಕೂರ್ ಅವರನ್ನು ‘ಭಯೋತ್ಪಾದಕಿ' ಎಂದು ಕರೆದಿರುವ ತಮ್ಮ ಹೇಳಿಕೆಗೆ ಈಗಲೂ ಬದ್ಧನಿದ್ದೇನೆ ಎಂದು ಹೇಳಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶುಕ್ರವಾರ ಈ ನಿಟ್ಟಿನಲ್ಲಿ ಯಾವುದೇ ಕ್ರಮವನ್ನು ಎದುರಿಸಲು ಸಿದ್ಧ ಎಂದು ಹೇಳಿದ್ದಾರೆ.ಪ್ರಜ್ಞಾ

ಠಾಕೂರ್ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ಬಿಜೆಪಿ ತನ್ನ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್,  ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ನಾನು ಟ್ವಿಟ್ಟರ್‌ನಲ್ಲಿ ಏನು ಬರೆದಿದ್ದೇನೆ, ಅದಕ್ಕೆ ನಾನು ಬದ್ಧನಾಗಿದ್ದೇನೆ ಎಂದು ತಿಳಿಸಿದರು.

ಈ ಹೇಳಿಕೆಗಳಿಗಾಗಿ ತಮ್ಮ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಬಿಜೆಪಿ ಒತ್ತಾಯಿಸಿರುವ ಬಗ್ಗೆ ಕೇಳಿದಾಗ, ರಾಹುಲ್,  ಕ್ರಮಕೈಗೊಳ್ಳಲಿ, ಯಾವುದೇ ಸಮಸ್ಯೆ ಇಲ್ಲ,. ಅವರು ಏನು ಮಾಡಬೇಕೆಂದು ಬಯಸುತ್ತಾರೆ. ಅದನ್ನು ನಾನು ಸ್ವಾಗತಿಸುತ್ತೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

ಗೋಡ್ಸೆ ಕುರಿತು ಪ್ರಜ್ಞಾ ಠಾಕೂರ್ ಹೇಳಿಕೆಗೆ ಟೀಕಿಸಿದ ರಾಹುಲ್, ಪ್ರಜ್ಞಾ ಠಾಕೂರ್ ನಂಬಿದ್ದನ್ನು ಅವರು ಹೇಳಿದ್ದಾರೆ. ನಾನು ಅವರ ಅಭಿಪ್ರಾಯವನ್ನು ಒಪ್ಪುವುದಿಲ್ಲ. ಆದರೆ ಅವರು ಅದರಲ್ಲಿ ನಂಬಿಕೆ ಇಟ್ಟಿದ್ದಾರೆ ಎಂದು ಹೇಳಿದ್ದರು.

  ಗೋಡ್ಸೆ ಹಿಂಸೆಯನ್ನು ಬಳಸಿದ್ದ, ಈಕೆ ಕೂಡ ಹಿಂಸೆಯಲ್ಲಿ ನಂಬಿಕೆ ಇಟ್ಟಿದ್ದಾಳೆ ಎಂದು ರಾಹುಲ್ ಹೇಳಿದ್ದರು.

  ಲೋಕಸಭೆಯಲ್ಲಿ ತನ್ನ ಹೇಳಿಕೆಗೆ ಪ್ರಜ್ಞಾ ಠಾಕೂರ್ ಕ್ಷಮೆಯಾಚಿಸಿದ ನಂತರ ರಾಹುಲ್ ಅವರಿಂದ ಈ ಹೇಳಿಕೆ ಬಂದಿವೆ. ಆದಾಗ್ಯೂ, ತಮ್ಮ ಟೀಕೆಗಳನ್ನು ತಿರುಚಲಾಗಿದೆ ಎಂದು ಅವರು ಹೇಳಿದರು.

   ಗುರುವಾರ ಟ್ವಿಟ್ಟರ್‌ನಲ್ಲಿ ರಾಹುಲ್, ’’ ಭಯೋತ್ಪಾದಕಿ ಪ್ರಜ್ಞಾ ಭಯೋತ್ಪಾದಕ ಗೋಡ್ಸೆಯನ್ನು ದೇಶಭಕ್ತ ಎಂದು ಕರೆಯುತ್ತಾರೆ. ಭಾರತದ ಸಂಸತ್ತಿನ ಇತಿಹಾಸದಲ್ಲಿ ಒಂದು ದುಃಖದ ದಿನ ಎಂದು ಬರೆದಿದ್ದರು.