ರಾಹುಲ್ ದ್ರಾವಿಡ್ ... ಇನ್ನೂ ಎನ್ ಸಿ ಎ ಮುಖ್ಯಸ್ಥ ಮಾತ್ರ

ಮುಂಬೈ ಆ29     ಸುಮಾರು ನಾಲ್ಕು ವರ್ಷಗಳಿಂದ   ಭಾರತ- ಎ  ಹಾಗೂ ಅಂಡರ್ - 19  ತಂಡಗಳ   ಪ್ರಧಾನ ಕೋಚ್ ಆಗಿ ಕಾರ್ಯನಿರ್ವಹಿಸಿದ್ದ   ಕ್ರಿಕೆಟ್   ದಿಗ್ಗಜ  ರಾಹುಲ್ ದ್ರಾವಿಡ್, ಇನ್ನು ಮುಂದೆ,  ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಮುಖ್ಯಸ್ಥರಾಗಿ  ಮಾತ್ರವೇ ಮುಂದುವರಿಯಲಿದ್ದಾರೆ.  

ರಾಷ್ಟ್ರೀಯ ಕ್ರಿಕೆಟ್  ಅಕಾಡೆಮಿ  ಜವಾಬ್ದಾರಿಗಳನ್ನು,  ಭಾರತ ಕ್ರಿಕೆಟ್ನಿಯಂತ್ರಣ ಮಂಡಳಿಗೆ (ಬಿಸಿಸಿಐ)  ಇತ್ತೀಚಿಗೆ ದ್ರಾವಿಡ್ ಅವರಿಗೆ  ಹಸ್ತಾಂತರಿಸಿದ್ದ ಹಿನ್ನಲೆಯಲ್ಲಿ  ಕಿರಿಯರ  ತಂಡಗಳ  ಪ್ರಧಾನ ತರಬೇತುದಾರ  ಸ್ಥಾನದಿಂದ ತೊರೆಯಬೇಕಿದೆ.  ಹಾಗಾಗಿ  ದ್ರಾವಿಡ್  ಸ್ಥಾನದಲ್ಲಿ ಇಬ್ಬರು ತರಬೇತಿದಾರರನ್ನು  ನೇಮಿಸಲಾಗಿದೆ.  

ಭಾರತದ ಎ  ತಂಡದ  ಪ್ರಧಾನ  ಕೋಚ್ ಆಗಿ ಸೀತಾನ್ಷು  ಕೊಟಾಕ್   ಅವರನ್ನು ನೇಮಿಸಲಾಗಿದ್ದು, ಪಾರಸ್ ಮಾಂಬ್ರೆ ಅವರನ್ನು ಅಂಡರ್ -19 ತಂಡದ ಮುಖ್ಯ ಕೋಚ್ ಆಗಿ ಆಯ್ಕೆ ಮಾಡಲಾಗಿದೆ. 

ಪಾರಸ್ ಮಾಂಬ್ರೆ,  ಭಾರತ-ಎ  ಹಾಗೂ  19 ವರ್ಷದೊಳಗಿನ ತಂಡಗಳಿಗೆ ದ್ರಾವಿಡ್  ಕಾರ್ಯನಿರ್ವಹಿಸಿದ  ಅನುಭವ ಹೊಂದಿದ್ದಾರೆ. ಹಾಗಾಗಿ,  ಮಾಂಬ್ರೆ ಅವರನ್ನು ಅಂಡರ್ -19 ಮುಖ್ಯ ಕೋಚ್ ಎಂದು ನೇಮಿಸಲಾಗಿದೆ. 

ಮತ್ತೊಂದೆಡೆ ಕೊಟಾಕ್ ಅವರು  130  ಮೊದಲ  ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಆದರೆ, ಅವರನ್ನು ಕೇವಲ ಎರಡು ತಿಂಗಳು ಮಾತ್ರ ತರಬೇತುದಾರರನ್ನಾಗಿ  ನೇಮಿಸಿಕೊಳ್ಳಲು  ಬಿಸಿಸಿಐ ನಿರ್ಧರಿಸಿದೆ.  

ದ್ರಾವಿಡ್ ಅವರನ್ನು 2015 ರಲ್ಲಿ ಭಾರತ  ಕ್ರಿಕೆಟ್ ನ  ಕಿರಿಯ ರಾಷ್ಟ್ರೀಯ ತಂಡಗಳ ಕೋಚ್ ಆಗಿ ಆಯ್ಕೆ ಮಾಡಲಾಯಿತು. ತಳಮಟ್ಟದಲ್ಲಿ ಆಟಗಾರರ ಶೋಧನೆ  ಮತ್ತು ಅವರಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ  ಕಲ್ಪಿಸುವಲ್ಲಿ ದ್ರಾವಿಡ್ ಯಶಸ್ವಿಯಾಗಿದ್ದರು.  ಹಲವು ಯುವ ಕ್ರಿಕೆಟಿಗರು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡಲು ದ್ರಾವಿಡ್   ಅವರು ಪ್ರಮುಖ ಕಾರಣವಾಗಿದ್ದಾರೆ.