ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯನ್ನ 1-1 ರಿಂದ ಸಮಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದ್ರೆ ಇದರ ನಡುವೆಯೂ ವಿರಾಟ್ ಪಡೆಯ ಈ ಇಬ್ಬರು ಆಟಗಾರರ ಮೇಲೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕನ್ನಡಿಗ ಕೆ.ಎಲ್ ರಾಹುಲ್ ಹಾಗೂ ರಿಷಬ್ ಪಂತ್ ವಿರುದ್ಧ ಹರಿಹಾಯುತ್ತಿದ್ದಾರೆ. ಸತತ ವೈಫಲ್ಯ ಅನುಭವಿಸಿದ್ರು, ಇವರಿಬ್ಬರಿಗೆ ತಂಡದಲ್ಲಿ ಸ್ಥಾನ ನೀಡುತ್ತಿರೋದಕ್ಕೆ ನಾಯಕ ಕೊಹ್ಲಿ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.
ಅಲ್ಲದೇ ಟೀಮ ಇಂಡಿಯಾ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಕೂಡ ಈ ಬ್ಯಾಟಿಂಗ್ ಸ್ಟಾರ್ಸ್ ಆಟಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಹುಲ್, ಪಂತ್ ವೈಫಲ್ಯ ಮುಚ್ಚಿಹಾಕಲು ಆಲ್ರೌಂಡರ್ ಕೃನಾಲ್ ಪಾಂಡ್ಯಾಗೆ ಪ್ಲೇಯಿಂಗ್ ಇಲೆವನ್ನಲ್ಲಿ ಆಡಿಸುತ್ತಿದ್ದಾರೆ. ಕೃನಾಲ್ ಬೌಲಿಂಗ್ ಜೊತೆ ಬ್ಯಾಟಿಂಗ್ ಕೂಡ ಮಾಡಬಲ್ಲರು. ತಂಡದಲ್ಲಿ ಯುಜುವೇಂದ್ರ ಚಹಲ್ಗೆ ಅವಕಾಶ ನೀಡಿ ಕೃನಾಲ್ರನ್ನ ಬ್ಯಾಟ್ಸ್ಮನ್ ಜಾಗದಲ್ಲಿ ಆಡಿಸಿದ್ರೆ ತಂಡ ಮತ್ತಷ್ಟು ಬಲಿಷ್ಠವಾಗಿರುತ್ತಿತ್ತು ಎಂದು ಟ್ವೀಟ್ ಮಾಡಿದ್ದಾರೆ. ರಾಹುಲ್ ಹಾಗೂ ರಿಷಬ್ ಪಂತ್ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯಲ್ಲೂ ಫೇಲ್ಯೂರ್ ಆಗಿದ್ರು. ಈಗ ಸಿಕ್ಕ ಅಕವಾಶಗಳನ್ನೆಲ್ಲಾ ರಾಹುಲ್ ಕೈ ಚೆಲ್ಲುತ್ತಿದ್ದು, ಅಭಿಮಾನಿಗಳ ಟೀಕೆಗೊಳಗಾಗಿದ್ದಾರೆ. ಧೋನಿ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿರುವ ಪಂತ್, ಕಾಂಗರೂ ನಾಡಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸುವಲ್ಲಿ ಎಡವಿದ್ದಾರೆ.